ದಿನಸಿ ಅಂಗಡಿಗೆ ಮಹಿಳೆಯರು ಬಂದಾಗ ಯಾವ ಕೆಲಸಕ್ಕೆ ಕರಿಯುತ್ತಾರೆ ಗೊತ್ತಾ, ಬೆಚ್ಚಿಬಿದ್ದ ಕನ್ನಡಿಗರು

 | 
Yui

ತಮಿಳುನಾಡಿನ ಹಳ್ಳಿಯೊಂದರಲ್ಲಿ ಸರವಣ್ಣ ಎಂಬುವ ವ್ಯಕ್ತಿಯೊಬ್ಬ ವಾಸವಾಗಿದ್ದ. ಆತ ಸಣ್ಣ ಕಿರಾಣಿ ಅಂಗಡಿ ನಡೆಸಿ ಜೀವನ ನಡೆಸುತ್ತಿದ್ದ. ಅವನು ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ಪುಟ್ಟ ಮನೆಯೊಂದರಲ್ಲಿ ವಾಸವಾಗಿದ್ದ. ಒಂದು ದಿನ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವಾಗ ಅಲ್ಲಿಗೆ ಒಬ್ಬ ಪುಟ್ಟ ಬಾಲಕ ಬಂದು ಏನಾದರೂ ನೀಡಿ ಎಂದು ಬಿಡುತ್ತಾನೆ. 

ಆಗ ಕನಿಕರದಿಂದ ಸರವಣ್ಣ ಅವನಿಗೆ ತಿನ್ನಲು ಬಿಸ್ಕಿಟ್ ಹಾಗೂ ನೀರನ್ನು ನೀಡಿ  ನಿನ್ನ ಹೆಸರೇನು ?ಏಕೆ ಏನಾಯಿತು ನೀನ್ಯಾಕೆ ಬೇಡುತ್ತಿರುವೆ. ನಿನ್ನ ಅಪ್ಪ ಅಮ್ಮ ಎನುಮಾಡುತ್ತಿದ್ದಾರೆ ಎಂದು ಕೇಳುತ್ತಾನೆ. ಆಗ ಆ ಬಾಲಕ ನಾನು  ಬಾಬು ಎಂದು ಹುಟ್ಟಿದಾಗಳೇ ಅಮ್ಮನನ್ನು ಕಳೆದುಕೊಂಡೆ ಕಳೆದ ವಾರ ಅಪ್ಪನನ್ನು ಕಳೆದುಕೊಂಡು ಅನಾಥನಾಗಿದ್ದೇನೆ ಎಂದು ಅಳುತ್ತ ನುಡಿದಾಗ ಮನಕರಗಿ ಅವನನ್ನು ತಮ್ಮೊಂದಿಗೆ ಇರಿಸಿಕೊಳ್ಳ ಬಯಸುತ್ತಾನೆ. 

ಆಗ ಬಾಬು ಕೂಡ ಅವನೊಂದಿಗೆ ಇರಲು ಒಪ್ಪಿಕೊಳ್ಳುತ್ತಾನೆ. ಹೀಗೆ ಬಾಬು ಸರವಣ್ಣನ ಮನೆಯ ಸದಸ್ಯರುಗಳಲ್ಲಿ ಒಬ್ಬನಾಗುತ್ತಾನೆ. ಪ್ರತಿ ದಿನ ಅಂಗಡಿಯಲ್ಲಿ ಸರವಣ್ಣ ನಿಗೆ ಸಹಾಯ ಮಾಡುತ್ತಾನೆ. ಅದರಿಂದ ಸಂತೋಷಗೊಂಡ ಸರವಣ್ಣ ಬಾಬುವಿಗೆ ತಿಂಗಳ ಸಂಬಳ ಎಂದು ಒಂದಿಷ್ಟು ಹಣ ನೀಡುತ್ತಾನೆ. ಆಗ ಬಾಬು ನನಗೆ ಹಣ ಬೇಡ ಈಗಿನಂತೆ ದಿನದ ಮೂರು ಹೊತ್ತು ಊಟ ನೀಡಿದರೆ ಸಾಕು ಎಂದು ಹೇಳಿ ಹಣವನ್ನು ಹಿಂದಿರುಗಿಸುತ್ತಾನೆ.

ಹೀಗೆ ಹದಿನೈದು ವರ್ಷ ಕಳೆಯುತ್ತದೆ. ಬಾಬು ಈಗ ಬೆಳೆದು ಯುವಕಾನಾಗಿರುತ್ತಾನೆ. ಅವನಿಗೆ ಒಂದು ದಿನ ಚೆನ್ನೈ ನೋಡಲು ಮನಸ್ಸಾಗಿ ಹೋಗಿಬರುತ್ತೇನೆ ಎಂದು ಹೇಳಿ ಒಂದಿಷ್ಟು ಹಣ ಪಡೆದು ಹೊರಡುತ್ತಾನೆ. ನಂತರದಲ್ಲಿ ಒಂದೆರಡು ವಾರ ಕಳೆದರೂ ವಾಪಸ್ಸು ಬರುವುದೇ ಇಲ್ಲ. ಬಾಬು ಬರದಿರುವುದನ್ನು ಕಂಡು ಕಂಗಾಲಾಗಿ ಸರವಣ್ಣ ಚೆನ್ನೈ ಗೆ ತೆರಳಿ ಗಲ್ಲಿ ಗಲ್ಲಿಗಳನ್ನು ಹುಡುಕುತ್ತಾನೆ ಎಲ್ಲೂ ಬಾಬುವಿನ ಪತ್ತೆ ಹಚ್ಚಲಾಗದೇ ಬೇಸರದಿಂದ ಊರಿಗೆ ಹಿಂತಿರುಗಿ ತನ್ನ ಅಂಗಡಿಯ ಎದುರಿನ ಅಂಗಡಿಯನ್ನು ಬಾಬುವಿಗೆ ತೆಗೆದಿಟ್ಟ ದುಡ್ಡಿನಿಂದ ತೆಗೆದುಕೊಂಡು ವ್ಯಾಪಾರವನ್ನು ಅಭಿವೃದ್ಧಿ ಮಾಡಿ ಎಲ್ಲೆಡೆಯೂ ಹೆಸರು ಮಾಡಿ ಪಕ್ಕದ ಊರುಗಳಲ್ಲಿ ಬೇರೆ ಬೇರೆ ಅಂಗಡಿಗಳನ್ನು ತೆಗೆದು ವ್ಯಾಪಾರ ಆರಂಭಿಸುತ್ತಾನೆ. 

ಒಂದು ದಿನ ಸರವಣ್ಣ ತನ್ನ ಮೊದಲ ಕಿರಾಣಿ ಅಂಗಡಿಯಲ್ಲಿ ಕುಳಿತಿದ್ದಾಗ ಬಾಬು ವಾಪಸ್ಸು ಬರುತ್ತಾನೆ. ಬಂದು ತನ್ನನ್ನು ಕ್ಷಮಿಸಿ ಒಂದು ಹೆಣ್ಣನ್ನು ಕಾಪಾಡಲು ಹೋಗಿ ಒಬ್ಬನನ್ನು ಕೊಲೆ ಮಾಡಿದೆ ಹಾಗಾಗಿ ನನಗೆ ಶಿಕ್ಷೆ ಆಯಿತು. ಅದಕ್ಕೆ ಜೈಲುವಾಸ ಮುಗಿಸಿ ಈಗ ಬರುತ್ತಿರುವೆ ನಿಮ್ಮ ನಂಬಿಕೆಗೆ ಮೋಸ ಮಾಡುಬಿಟ್ಟೆ ಕ್ಷಮಿಸಿ ಎಂದು ಅಳುತ್ತಾನೆ. ಆಗ ಅವನನ್ನು ಸಮಾಧಾನ ಪಡಿಸಿ ಸರವಣ್ಣ ಅವನ ಹಣದಿಂದ ತೆರೆದ ಅಂಗಡಿಗಳನ್ನು ತೋರಿಸಿ ಇನ್ನು ಮುಂದೆ ಇವು ನಿನ್ನವು ಎನ್ನುತ್ತಾನೆ. ಆಗ ಬಾಬು ನಾವಿಬ್ಬರೂ ಸೇರಿ ಮುನ್ನಡೆಸೋಣ ಎಂದು ಸರವಣ್ಣನ ಬಳಿ ನುಡಿದು ತಬ್ಬಿಕೊಳ್ಳುತ್ತಾನೆ.