ವಂಚಕಿ ಚೈತ್ರ ಕುಂದಾಪುರ ಯಾವ ಜಾತಿ, ಗೋವಿಂದ ಪೂಜಾರಿಯ ಕಿವಿಗೆ ಹೂವ ಇಟ್ಟಿದ್ದು ಹೇಗೆ ಗೊತ್ತಾ
ಬೆಂಕಿ ಕಾರುವ ಮಾತುಗಳು, ಅಬ್ಬರಿಸಿ ಬೊಬ್ಬಿರಿಯುವ ಶೈಲಿ, ಹಿಂದು ಪರ ವಿಚಾರ ಬಂದಾಗ ಎಗ್ಗಿಲ್ಲದೆ ಮುನ್ನುಗ್ಗುವ ಛಾತಿ, ಎಂಥವರನ್ನೂ ಎದುರು ಹಾಕಿಕೊಳ್ಳಬಲ್ಲ ತಾಕತ್ತು; ಇದು ಅಂದಾಜು 30ರ ಹರೆಯದ ಚೈತ್ರಾ ಕುಂದಾಪುರ ಎಂಬ ಫೈರ್ ಬ್ರಾಂಡ್ ಭಾಷಣಕಾರ್ತಿ ಬಗ್ಗೆ ಆಡಬಹುದಾದ ಪಾಸಿಟೀವ್ ಮಾತುಗಳು.
ತಮ್ಮ ಭಾಷಣ ಮತ್ತು ವಿಡಿಯೊಗಳಿಂದ ಅವರು ರಾಜ್ಯದ ಬಹುತೇಕ ಕಡೆಗಳಲ್ಲಿ ಪರಿಚಿತ. ಆದರೆ ಈಗ ಆಕೆ ಸುದ್ದಿಯಾಗಿರುವುದು ಒಂದು ದೊಡ್ಡ ವಂಚನೆಯ ನೆಗೆಟಿವ್ ಪ್ರಕರಣದಲ್ಲಿ. ಸದಾ ಹಣೆಯಲ್ಲಿ ತಿಲಕ, ಕೇಸರಿ ಶಾಲು ಹಾಕಿಕೊಂಡು ತಿರುಗಾಡುವ ಈ ಪೀಚು ದೇಹದ ಹುಡುಗಿಯೊಳಗಿನ ಅಗಾಧ ಧೈರ್ಯದ ಬಗ್ಗೆ ಜನ ಮಾತನಾಡಿಕೊಳ್ಳುವಂತಾಗಿತ್ತು.
ಆದರೆ, ಈಗ ಇವಳೊಳಗೆ ಇಷ್ಟು ದೊಡ್ಡ ಕ್ರಿಮಿನಲ್ ವಂಚಕಿ ಇದ್ದಾಳಾ ಎಂದು ಮಾತನಾಡಿಕೊಳ್ಳುವಂತಾಗಿದೆ. ಬೆಂಗಳೂರಿನಲ್ಲಿರುವ ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದಿದ್ದಾಳೆ ಚೈತ್ರಾ ಕುಂದಾಪುರ.
ಚೈತ್ರಾ ಕುಂದಾಪುರ ಆಕೆಯ ಹೆಸರಿನಲ್ಲಿರುವಂತೆಯೇ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ತೆಕ್ಕಟ್ಟೆಗಿಂತಲೂ ಒಳಗಿನ ಒಂದು ಪುಟ್ಟ ಊರಿನವರು. ತೆಕ್ಕಟ್ಟೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಪಡೆದು ಬಳಿಕ ಕುಂದಾಪುರದಲ್ಲಿ ಪದವಿ ವಿದ್ಯಾಭ್ಯಾಸ ಪಡೆದವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೈತ್ರಾ ಟಿವಿ ನಿರೂಪಕಿಯಾಗಿ ಸಾಕಷ್ಟು ಗಮನ ಸೆಳೆದಿದ್ದರು.
ಬೆಂಗಳೂರಿನ ಸಮಯ ನ್ಯೂಸ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ ಆಕೆ ಬಳಿಕ ಉಡುಪಿಗೆ ಮರಳಿದ್ದರು. ಅಲ್ಲಿನ ಸ್ಪಂದನ ಟಿವಿ ನಿರೂಪಕಿಯಾಗಿ ಆ ಭಾಗದಲ್ಲಿ ಜನಪ್ರಿಯತೆ ಪಡೆದರು. ಮುಂದೆ ಮುಕ್ತ ನ್ಯೂಸ್‌ನಲ್ಲಿ ಕೆಲಸ ಮಾಡಿದರು. ಈ ನಡುವೆ, ಉದಯವಾಣಿ ದಿನಪತ್ರಿಕೆಯಲ್ಲೂ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಇದೆಲ್ಲದರ ನಡುವೆ, ಉಡುಪಿಯ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವವೂ ಇದೆ.
ನಿರೂಪಕಿ, ಪತ್ರಕರ್ತೆ, ಉಪನ್ಯಾಸಕಿಯಾದ ಆಕೆಗೆ ಯುವ ಮಾಧ್ಯಮ ಪ್ರಶಸ್ತಿಯೂ ಬಂದಿತ್ತು. ಕಾಲೇಜಿನಲ್ಲಿ ಓದುತ್ತಿರುವಾಗ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆಯಾಗುವ ಹಂತಕ್ಕೆ ಬೆಳೆದಿದ್ದರು. ಆಗಲೇ ಭಾಷಣಗಳ ಮೂಲಕ ಗಮನ ಸೆಳೆಯುತ್ತಿದ್ದ ಆಕೆ ನಾಯಕಿಯಾಗಿಯೂ ಹೆಸರಾಗಿದ್ದರು.
ಪತ್ರಿಕೋದ್ಯಮ, ಟಿವಿ ನಿರೂಪಕಿಯ ಕೆಲಸಗಳನ್ನು ಮಾಡುತ್ತಾ ಗಮನ ಸೆಳೆದಿದ್ದ ಚೈತ್ರಾ ಕುಂದಾಪುರ ಕಳೆದ ಆರೇಳು ವರ್ಷಗಳಿಂದ ಫೈರ್ ಬ್ರಾಂಡ್ ಭಾಷಣಕಾರ್ತಿಯಾಗಿದ್ದಾರೆ. ಹಿಂದುತ್ವದ ವಿಚಾರಧಾರೆಗಳನ್ನು ಜನರಿಗೆ ಮುಟ್ಟುವಂತೆ, ಕೆಲವೊಮ್ಮೆ ಕೆರಳಿಸುವಂತೆ, ಪ್ರಚೋದನಾಕಾರಿಯಾಗಿ ಪ್ರತಿಪಾದಿಸುವ ಶೈಲಿ ಅವರದ್ದು. ಭಾಷಣಗಳಲ್ಲಿ ನೇರ ಸವಾಲು ಹಾಕುವ ಧೈರ್ಯವಿದ್ದು ಕೂಡ ಇಂತಹ ಒಂದು ಅಪರಾಧವನ್ನು ಮಾಡಿದ್ದಾದರೂ ಏಕೆ ಎನ್ನುವ ಪ್ರಶ್ನೆ ಎಲ್ಲರ ಮನದಲ್ಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.