ಕಿಚ್ಚನ ಜೀವನದಲ್ಲಿ ಆಟವಾಡಲು ಬಂದಿದ್ದು ಯಾರು ಗೊತ್ತಾ, ಪಬ್ಲಿಕ್ ಮುಂದೆ ಗರಂ ಆದ ಸುದೀಪ್

ಕನ್ನಡ ಚಿತ್ರರಂಗದ ಮೂವರು ನಿರ್ಮಾಪಕರು ಇತ್ತೀಚೆಗೆ ನಟ ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಈ ಸಂಬಂಧ ನಟ ಸುದೀಪ್ ಇಂದು ಆ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸ್ವತ: ಸುದೀಪ್ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಗಮಿಸಿ ನಿರ್ಮಾಪಕರಾದ ಎನ್ಎಂ ಕುಮಾರ್, ಎಂಎನ್ ಸುರೇಶ್ ಹಾಗೂ ರಹಮಾನ್ ವಿರುದ್ಧ ದೂರು ನೀಡಿದ್ದಾರೆ.
ಮೊದಲಿಗೆ ನಿರ್ಮಾಪಕ ಎಂ. ಎನ್ ಸುರೇಶ್ "ನಟ ಸುದೀಪ್ ನನ್ನಿಂದ ಅಡ್ವಾನ್ಸ್ ಪಡೆದು ಸಿನಿಮಾ ಮಾಡುವುದಾಗಿ ಹೇಳಿದ್ದರು. ವರ್ಷಗಳೇ ಕಳೆದರೂ ಕಾಲ್‌ಶೀಟ್ ಕೊಡುತ್ತಿಲ್ಲ. ಹಣ ಕೂಡ ವಾಪಸ್ ಕೊಡುತ್ತಿಲ್ಲ. ಈಗ ನೋಡಿದರೆ ತಮಿಳು ನಿರ್ಮಾಪಕನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಕೇಳಿದ್ದರು. ಈ ಸಂಬಂಧ ನಿರ್ಮಾಪಕರ ಸಂಘದವರ ಉಪಸ್ಥಿತಿಯಲ್ಲಿ ಫಿಲ್ಮ್ ಚೇಂಬರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.
ಎಂ. ಎನ್ ಕುಮಾರ್ ಆರೋಪದ ಬೆನ್ನಲ್ಲೇ ಸುದೀಪ್ ನಟನೆಯ 'ಹುಚ್ಚ' ಸಿನಿಮಾ ನಿರ್ಮಿಸಿದ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ನಿಮ್ಮನ್ನು ನಂಬಿ ನನಾನು 35 ಲಕ್ಷ ಖರ್ಚು ಮಾಡಿದ್ದೇನೆ. ಅದನ್ನು ವಾಪಸ್ ಕೊಡಿ ಎಂದು ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದ್ದರು. ಇನ್ನು ನಿರ್ಮಾಪಕರ ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರವನ್ನು ಸುದೀಪ್ ಕೇಳಿದ್ದರು. ಇಲ್ಲದೇ ಬಹಿರಂಗ ಕ್ಷಮೆ ಕೇಳಿ ಎಂದು ನೋಟಿಸ್ ಕಳುಹಿಸಿದ್ದರು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಇನ್ನು ಈ ಷಡ್ಯಂತ್ರದ ಹಿಂದೆ ಸೂರಪ್ಪ ಬಾಬು ಇದ್ದಾರೆ ಎನ್ನು ಮಾತಿದೆ ನೀವೇನಂತೀರಾ ಎನ್ನುವ ಮಾಧ್ಯಮದ ವರ ಮಾತಿಗೆ ಯಾರೇ ಏನೇ ಆರೋಪ ಮಾಡಿದ್ರು ಕೋರ್ಟ್‌ನಿಂದಲೇ ಸರಿಯಾದ ಉತ್ತರ ಸಿಗುತ್ತದೆ. ಒಂದು ವಿಚಾರ ಹೇಳೋಕೆ ಇಷ್ಟಪಡ್ತೀನಿ.. ದೇವ್ರು ಒಳ್ಳೆದ್ ಮಾಡಲಿ. ಒಂದಂತು ಸತ್ಯ. ಸುಳ್ಳಾಗಲಿ ಸತ್ಯ ಆಗಲಿ ಬಹಿರಂಗವಾಗಿ ಹೊರಗೆ ಬರಲೇ ಬೇಕು. ನಾನು ಸರಿಯಾದ ಮಾರ್ಗದಲ್ಲೇ ಹೋಗ್ತಿದ್ದೀನಿ ಅಂತಾ ನಾನು ಅಂದ್ಕೊಂಡಿದೀನಿ. ಕೋರ್ಟ್‌ಗೆ ಹೋದ್ರೆ ಎಲ್ಲಾ ಸರಿ ಹೋಗುತ್ತೆ.ನನ್ನ ಮೇಲೆ ಯಾರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತು ಎಂದಿದ್ದಾರೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.