ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಭೂಮಿಕಾ ಅವರ ತಾಯಿ ಯಾರು ಗೊತ್ತಾ, ಲಕ್ಷ್ಮಿ ಮನೆ ಎಷ್ಟು ದುಬಾರಿ ನೋಡಿ

 | 
Vhh

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಂಗಿ ಲಕ್ಷ್ಮೀಯ ಕಥೆ ಈಗ ಲಕ್ಷ್ಮೀ ಬಾರಮ್ಮ ಧಾರಾವಾಹಿಯತ್ತ ಶಿಫ್ಟ್ ಆಗಿದೆ. ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ಭೂಮಿಕಾ ರಮೇಶ್ ಅವರು ಈ ಹಿಂದೆ ರಿಯಾಲಿಟಿ ಶೋಗಳ ಸ್ಪರ್ಧಿಯಾಗಿದ್ದರು. ಬಾಲ್ಯದಿಂದಲೇ ನೃತ್ಯದಲ್ಲಿ ಗುರುತಿಸಿಕೊಂಡಿರುವ ಭೂಮಿಕಾ ರಮೇಶ್ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿದ್ದಾಳೆ.
ಇನ್ನು ಅಕ್ಕ ಭಾಗ್ಯನ ಪಾತ್ರದಲ್ಲಿ ಕಿರುತೆರೆಯ ಚಲುವೆ ಸುಷ್ಮಾ ಕೆ ರಾವ್ ಅಭಿನಯಿಸಿ ಜನರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.Vvb

ಭೂಮಿಕಾ ರಮೇಶ್ ಅವರು ಈ ಹಿಂದೆ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆ ರಿಯಾಲಿಟಿ ಶೋನಲ್ಲಿ ಭೂಮಿಕಾ ಭಾಗಿಯಾಗಿದ್ದಾಗ ಅವರು 8ನೇ ತರಗತಿ ಓದುತ್ತಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಗೆ ಕರೆದಿದ್ದ ಆಡಿಷನ್‌ನಲ್ಲಿ ಭೂಮಿಕಾ ಚಿಕ್ಕವರು ಎನ್ನುವ ಕಾರಣಕ್ಕೆ ರಿಜೆಕ್ಟ್ ಆಗಿದ್ದರು. ಆ ನಂತರ ಭೂಮಿಕಾ ಶಿಕ್ಷಣ, ಭರತನಾಟ್ಯದ ಕಡೆ ಗಮನ ಕೊಟ್ಟಿದ್ದರು. Vb

ಭಾಗ್ಯಲಕ್ಷ್ಮೀ ಧಾರಾವಾಹಿ ತಂಡದವರು ಭೂಮಿಕಾಗೆ ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಡಿ ಎಂದು ಕೇಳಿದರಂತೆ. ಆಡಿಷನ್‌ನಲ್ಲಿ ಪಾಸ್ ಆದ ಭೂಮಿಕಾ ಈಗ ವೀಕ್ಷಕರ ನೆಚ್ಚಿನ ಲಡ್ಡು ಆಗಿದ್ದಾರೆ. ಪ್ರಸ್ತುತ ಆನ್‌ಲೈನ್‌ ಮೂಲಕ ಬಿಸಿಎ ಕೋರ್ಸ್‌ ಮಾಡುತ್ತಿರುವ ಭೂಮಿಕಾ ಅವರು ನಟನೆ, ಡ್ಯಾನ್ಸ್ ಅಭ್ಯಾಸವನ್ನು ಕೂಡ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ 4ನೇ ತರಗತಿಯಲ್ಲಿದ್ದಾಗಲೇ ಭೂಮಿಕಾ ಅವರು ತೆಲುಗು ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರು. ಆಮೇಲೆ ಸೈ ಅಂಟೆ ಸೈ ಮಲ್ಟಿ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಒಟ್ಟಿನಲ್ಲಿ ಭೂಮಿಕಾಗೆ ಕ್ಯಾಮರಾ ಹೊಸತೇನಲ್ಲ.ಹಾಗಾಗಿಯೇ ಮುಗ್ದ ಲಕ್ಷಿ ಆಗಿ ಅಷ್ಟು ಚಂದವಾಗಿ ಅಭಿನಯಿಸುತ್ತಿದ್ದಾರೆ.Cc

ಈಗಾಗಲೇ ವೈದ್ಯಕೀಯ ಸಂಶೋಧನೆಗೆ ಸಂಬಂಧಪಟ್ಟ ಕೆಲವು ಘಟನೆಗಳಿಗೆ ಸಂಬಂಧಿಸಿದ ಡಿಸೆಂಬರ್ 24 ಸಿನಿಮಾದಲ್ಲಿಯೂ ಭೂಮಿಕಾ ನಟಿಸಿದ್ದರು. ಈ ಸಿನಿಮಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯಾಗಿ ಭೂಮಿಕಾ ರಮೇಶ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ನಾಗರಾಜ್ ಎಂ ಜಿ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದರು. ಕಳೆದ ತಿಂಗಳು ಈ ಚಿತ್ರ ರಿಲೀಸ್ ಆಗಿತ್ತು. ಭೂಮಿಕಾ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದಾರಂತೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.