ಅಂಬರೀಶ್ ಸ್ಮಾರಕ ಉದ್ಘಾಟನೆಗೆ ದರ್ಶನ್ ಯಾಕೆ ಬಂದಿಲ್ಲ ಗೊತ್ತಾ, ಸಂಸದೆ ಸುಮಲತಾ ಗರಂ ಆಗಿದ್ಯಾಕೆ

 | 
Hg

ಮಂಡ್ಯದ ಗಂಡಿನ ಖದರ್, ರೆಬೆಲ್ ಸ್ಟಾರ್ ಪವರ್, ಜಲೀಲನ ಡೈಲಾಗ್ ಡೆಲಿವರಿಗೆ ಮನಸೋಲದವರಿಲ್ಲ. ನಟನಾಗಿ , ರಾಜಕಾರಣಿಯಾಗಿ ಹೆಸರು ಮಾಡಿದ ರೆಬೆಲ್ ಸ್ಟಾರ್ ಅಂಬರೀಶ್ ನವೆಂಬರ್ 24, 2018ರಂದು ದೈಹಿಕವಾಗಿ ನಮ್ಮನ್ನೆಲ್ಲ ಅಗಲಿದರು. ಆದರೆ ಅವರ ನೆನಪುಗಳಿಗೆ ಎಂದೂ ಕೊನೆಯಿಲ್ಲ. ಇದೀಗ ಅವರ ನೆನಪನ್ನು ಇನ್ನಷ್ಟು ಹಸಿರಾಗಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ರೇಸ್ ಕೋರ್ಸ್‌ ರಸ್ತೆಗೆ  ಡಾ. ಎಂ.ಎಚ್. ಅಂಬರೀಶ್ ರಸ್ತೆ ಅಂತ ನಾಮಕರಣ ಮಾಡಲಾಯಿತು. ಆದರೆ ಆ ಸಮಾರಂಭದಲ್ಲಿ ದರ್ಶನ್ ಅಗಮಿಸಿರಲಿಲ್ಲ ಅದೇ ಯಾಕೆ ಎನ್ನುವ ಪ್ರಶ್ನೆ ನೆಟ್ಟಗರ ಮನದಲ್ಲಿ ಮೂಡಿತ್ತು ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಹೊಸ ಶೆಡ್ಯೂಲ್ ಮತ್ತೆ ಶುರುವಾಗ್ತಿದೆ. 

ಇದೀಗ ಬೆಂಗಳೂರು, ಮೈಸೂರಿನಲ್ಲಿ ಸತತ 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕಾಗಿ ಹಳ್ಳಿ ಸೆಟ್ ನಿರ್ಮಾಣ ಮಾಡಿದ್ದು 70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸುತ್ತಿದೆ. ಸದ್ಯ ಚಿತ್ರದ ಸೆಟ್‌ನ ಕೆಲ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 70ರ ದಶಕದಲ್ಲಿ ಹಂಪಿಯಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕ ತರುಣ್ ಸುಧೀರ್ ಹಾಗೂ ಜಡೇಶ್ ಹಂಪಿ ಕಥೆ ಮಾಡಿದ್ದಾರೆ. ತುಳಿತಕ್ಕ ಒಳಗಾದವರ ಪರ ನಿಲ್ಲುವ ನಾಯಕ 'ಕಾಟೇರ'ನಾಗಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. 

ಮೊದಲ ಬಾರಿಗೆ ದರ್ಶನ್ ಬಹಳ ವಿಭಿನ್ನವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲುಂಗಿ ಉಟ್ಟು, ಮಚ್ಚು ಹಿಡಿದು ಬರ್ತಿದ್ದಾರೆ. ರಾಬರ್ಟ್' ಸಿನಿಮಾ ಮಾಡಿದ್ದ ತಂಡವೇ 'ಕಾಟೇರ' ಚಿತ್ರಕ್ಕಾಗಿ ಮತ್ತೆ ಜೊತೆಯಾಗಿದೆ. 'ಕ್ರಾಂತಿ' ನಂತರ 'ಕಾಟೇರ'ನಾಗಿ ಡಿ ಬಾಸ್‌ನ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು ತೆಲುಗು ನಟ ಜಗಪತಿ ಬಾಬು ಮುಖ್ಯವಾದ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಸ್ಟುಡಿಯೋದಲ್ಲಿ ಮೊದಲು ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ನಂತರ ಹೈದರಾಬಾದ್ ಹಾಗೂ ಕನಕಪುರದಲ್ಲಿ ಒಂದಷ್ಟು ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು.

ರವಿಶಂಕರ್ ಗುರೂಜಿ ಆಶ್ರಮದ ಬಳಿ ಹಳ್ಳಿ ಸೆಟ್ ನಿರ್ಮಿಸಿ ಚಿತ್ರದ ಕ್ರೂಷಿಯಲ್ ಸನ್ನಿವೇಶಗಳ ಚಿತ್ರೀಕರಣ ನಡೆಸಲಾಗುತ್ತಿದೆ. ಆರ್ಟ್ ಡೈರೆಕ್ಟರ್ ಗುಣ ಅಂಡ್ ಟೀಂ ಚಿತ್ರಕ್ಕಾಗಿ 50 ವರ್ಷಗಳ ಹಿಂದೆ ಇದ್ದಂತಹ ಹಳ್ಳಿಯ ಸೆಟ್‌ ಅನ್ನು ನಿರ್ಮಿಸಿದ್ದಾರೆ. ಅಲ್ಲೇ ಸದ್ದಿಲ್ಲದೇ 'ಕಾಟೇರ' ಸಿನಿಮಾ ಚಿತ್ರೀಕರಣ ನಡೀತಿದೆ. ಗುಡಿಸಲು, ಹಂಚಿನ ಮನೆಗಳು, ಹಳ್ಳಿಯ ಬೀದಿಗಳು, ಸೇದು ಬಾವಿ ಹೀಗೆ ನಿಜವಾಗಿಯೂ ಹಳ್ಳಿಗೆ ಹೋದಂತಹ ಅನುಭವ ಆ ಸೆಟ್ ನೀಡುತ್ತಿದೆ. ಇದೇ ಸೆಟ್‌ನಲ್ಲಿ ಚಿತ್ರೀಕರಣ ನಡೆಸಲಾಗ್ತಿದೆ. ಈ ಕಾರಣದಿಂದ ದರ್ಶನ್ ಅವರು ಅಂಬರೀಶ್ ಅವರ ಹೆಸರನ್ನು ರಸ್ತೆಗೆ ಇಡುವ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.