ಬಡ ಕುಟುಂಬ‌ ಹೆಚ್ಚಿರುವ ಭಾರತದಲ್ಲಿ, G20 ಶೃಂಗಸಂಭೆಗೆ ಮೋದಿ ಇಷ್ಟು ಕೋಟಿ ಖರ್ಚು ಮಾಡಿರುವುದು ಯಾಕೆ ಗೊತ್ತಾ

 | 
Hg

ನಿನ್ನೆ ಮುಕ್ತಾಯಗೊಂಡ ಜಿ20 ಶೃಂಗಸಭೆಯ ಖರ್ಚಿನ ವಿಚಾರ ವೈರಲ್ ಆಗಿದೆ. ವರದಿಗಳ ಪ್ರಕಾರ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಷದ ಜಿ20 ನಾಯಕರ ಶೃಂಗಸಭೆಗೆ ಬರೋಬ್ಬರಿ 4,100 ಕೋಟಿ ರೂ ಖರ್ಚಾಗಿರುವುದು ತಿಳಿದುಬಂದಿದೆ. ಇಡೀ ವಿಶ್ವವನ್ನೇ ಬೆರಗಾಗಿಸಿದ ಎರಡನೇ ಚಂದ್ರಯಾನಕ್ಕೆ ಆದ ಖರ್ಚು ಅಂದಾಜು 970 ಕೋಟಿ ರೂ. 

ಚಂದ್ರಯಾನಕ್ಕಿಂತ ಜಿ20 ಸಭೆಗೆ ನಾಲ್ಕು ಪಟ್ಟಿಗೂ ಹೆಚ್ಚು ಖರ್ಚಾಗಿದೆ. ಕಳೆದ ಬಾರಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಸಭೆಗೆ ಆದ ಖರ್ಚಿಗಿಂತ 11 ಪಟ್ಟು ಹೆಚ್ಚಾಗಿದೆ. ಅದರೂ 2016ರಲ್ಲಿ ಚೀನಾದ ಹಾಂಗ್​ಝೋನಲ್ಲಿ ನಡೆದ ಜಿ20 ಶೃಂಗಸಭೆಗೆ ಆದ ಖರ್ಚಿಗೆ ಹೋಲಿಸಿದರೆ ಭಾರತದ್ದು ಬಹಳ ಕಡಿಮೆಯೇ. 2010ರಲ್ಲಿ ಕೆನಡಾದಲ್ಲಿ ಆಯೋಜನೆಯಾಗಿದ್ದ ಜಿ20 ಶೃಂಗಸಭೆಗೂ ಬಹಳ ದೊಡ್ಡ ಪ್ರಮಾಣದಲ್ಲಿ ಖರ್ಚಾಗಿತ್ತು.

ಇನ್ನು 2022 ರಲ್ಲಿ ನಡೆದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದ್ದ 2022ರ ಜಿ20 ಶೃಂಗಸಭೆಗೆ 364 ಕೋಟಿ ರೂ ಖರ್ಚಾಗಿರುವುದು ತಿಳಿದುಬಂದಿದೆ.ಅಲ್ಲದೆ ಜಪಾನ್​ನ ಒಸಾಕದಲ್ಲಿ 2019ರಲ್ಲಿ ನಡೆದಿದ್ದ ಜಿ20 ಶೃಂಗಸಭೆಯ ಆಯೋಜನೆಗೆ 2,660 ಕೋಟಿ ರೂ ವೆಚ್ಚವಾಗಿತ್ತು. ಇನ್ನು ಈ ಸಭೆಯಿಂದ ದೆಹಲಿ ವಾತಾವರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಂಡಿದೆ. ಈ ಸಭೆಗಾಗಿ ರಸ್ತೆಗಳನ್ನು ಸುಂದರಗೊಳಿಸಲಾಗಿದ್ದು, ಪ್ರತಿಮೆಗಳು ಮತ್ತು ಕಾರಂಜಿಗಳಂತಹ ಅಲಂಕಾರಿಕ ತುಣುಕುಗಳನ್ನು ಸ್ಥಾಪಿಸಲಾಗಿದೆ. 

ಸಾರ್ವಜನಿಕ ಸ್ಥಳಗಳು ಮತ್ತು ಫುಟ್ ಓವರ್ ಬ್ರಿಡ್ಜ್ / ಫ್ಲೈಓವರ್‌ಗಳಲ್ಲಿ ಬಣ್ಣ ಮತ್ತು ದುರಸ್ಥಿತಿಗಳನ್ನು ಮಾಡಲಾಗಿದೆ. ಎರಡು ದಿನಗಳ ಜಿ-20 ಶೃಂಗಸಭೆ ಮುಕ್ತಾಯಗೊಂಡಿದ್ದು, ಈ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಈ ಸಭೆಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ G20 ಖಾಯಂ ಸದಸ್ಯತ್ವವನ್ನು ನೀಡಲಾಗಿದೆ. 

ಪ್ರಧಾನಿ ಮೋದಿ ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಘೋಷಿಸಿದರು, ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ಗೆ ಸಂಬಂಧಿಸಿದ ಯೋಜನೆಯನ್ನು ಸಹ ಚರ್ಚಿಸಲಾಗಿದೆ ಮತ್ತು ರಷ್ಯಾ ಕುರಿತು ಮಹತ್ವದ ಚರ್ಚೆಗಳು ನಡೆದಿವೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.