ಇಡೀ ಕರುನಾಡಿಗೆ ಕಾಗೆ ಹಾರಿಸಿದ್ದ ಡ್ರೋನ್ ಪ್ರತಾಪ್ ವಿರುದ್ಧ ಇಡೀ ಬಿಗ್ ಬಾಸ್ ಮನೆ ತಿರುಗಿ ಬಿದ್ದಿದ್ಯಾಕೆ ಗೊತ್ತಾ
ಬಿಗ್‌ಬಾಸ್ ಮನೆಯೊಳಗೆ ಆಟದ ಜತೆ ಜತೆಗೆ ಹಾಸ್ಯದ ರಸದೌತಣಕ್ಕೆ ಏನೂ ಕಡಿಮೆ ಇರುವುದಿಲ್ಲ. ಇದೀಗ ಬಿಗ್ ಬಾಸ್ 10ರ ಸೀಸನ್‌ನಲ್ಲೂ ದೊಡ್ಮನೆ ಮಂದಿ ಒಬ್ಬನೊಬ್ಬರು ಕಾಲೆಳೆಯುತ್ತಾ ಸಮಯ ಕಳೆಯುತ್ತಿದ್ದಾರೆ.ಬಿಗ್ ಬಾಸ್ ಮನೆ ಪ್ರವೇಶಿದಾಗ ಮೌನಕ್ಕೆ ಶರಣಾಗಿದ್ದ ಡ್ರೋನ್ ಪ್ರತಾಪ್ ಇದೀಗ ಎಲ್ಲರೊಂದಿಗೆ ಮಾತನಾಡಲು ಶುರು ಮಾಡಿದ್ದಾರೆ. ಸದ್ಯ ಅವರು ಮನೆಮಂದಿಯ ಹಾಸ್ಯಕ್ಕೆ ಒಂದು ಒಳ್ಳೆಯ ಸರಕಾಗಿದ್ದಾರೆ.
ಟಾಸ್ಕ್ ವೇಳೆ ಸರಿಯಾಗಿ ಊಟ ಮಾಡದ ಕಾರಣ ಭಾಗ್ಯಶ್ರೀ ಅವರಿಗೆ ಮಧ್ಯರಾತ್ರಿ ಹಸಿವಾಗಿದೆ. ಅಡುಗೆ ಮನೆ ಬಳಿ ಸಂತು ಬಳಿ ಭಾಗ್ಯಶ್ರೀ ಮಾತನಾಡುತ್ತಿದ್ದರು. ಬಿಸಿನೀರು ಹಾಗೂ ಸಕ್ಕರೆ ಸೇವಿಸುತ್ತಿದ್ದರು. ಈ ವೇಳೆ ಡ್ರೋನ್ ಪ್ರತಾಪ್ ಅಡುಗೆ ಮನೆಗೆ ಬಂದರು. ಭಾಗ್ಯಶ್ರೀ ಹಸಿವು ಎಂದಿದ್ದಕ್ಕೆ ರೊಟ್ಟಿ ಮಾಡಿಕೊಡ್ತೀನಿ ಅಂತ ಡ್ರೋನ್ ಪ್ರತಾಪ್ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಮರ್ಥರು ಅಡುಗೆ ಮಾಡುವ ಹಾಗಿಲ್ಲ. ಅಸಮರ್ಥರೇ ಅಡುಗೆ ಮಾಡಬೇಕು. ಹೀಗಾಗಿ ಅಸಮರ್ಥರ ಗುಂಪಿನಲ್ಲಿರುವ ಡ್ರೋನ್ ಪ್ರತಾಪ್ ರೊಟ್ಟಿ ಮಾಡಿಕೊಡಲು ಮುಂದಾದರು. ಫ್ರಿಡ್ಜ್‌ನಲ್ಲಿರುವ ಗೋಧಿ ಹಿಟ್ಟನ್ನ ಡ್ರೋನ್ ಪ್ರತಾಪ್ ಬಳಸಿದ್ದರೆ, ಸಮಸ್ಯೆ ಆಗುತ್ತಿರಲಿಲ್ಲ. ಡ್ರೋನ್ ಪ್ರತಾಪ್ ಹೊಸದಾಗಿ ಹಿಟ್ಟು ಬಳಸಿದರು. ಇನ್ನೂ, ಒಬ್ಬರಿಗೆ ಮಾಡಿಕೊಟ್ಟರೆ ಎಲ್ಲರೂ ಕೇಳುತ್ತಾರೆ ಎಂಬ ಮಾತು ಬಂತು. ಅದಕ್ಕೆ ನಾನು ಕೇಳಲೇ ಇಲ್ಲ. ಡ್ರೋನ್ ಪ್ರತಾಪ್ ಅವರೇ ಮಾಡಿಕೊಟ್ಟಿದ್ದು ಎಂದುಬಿಟ್ಟರು ಭಾಗ್ಯಶ್ರೀ. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಗುಸುಗುಸು ಪಿಸುಪಿಸು ಸ್ವಲ್ಪ ಜೋರಾಗಿಯೇ ನಡೆಯಿತು.
ಡ್ರೋನ್ ಪ್ರತಾಪ್ ಅವರನ್ನು ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ಟೀಕೆ ಮಾಡಿದ್ದರು. ಟೀಕೆಯ ಸುರಿಮಳೆ ತಡೆಯಲು ಅವರು ಬಳಿ ಸಾಧ್ಯವಾಗಲೇ ಇಲ್ಲ. ವೀಕೆಂಡ್ನಲ್ಲಿ ಈ ವಿಚಾರ ಚರ್ಚೆಗೆ ಬಂತು. ಸುದೀಪ್ ಅವರು ತುಕಾಲಿ ಸಂತೋಷ್ಗೆ ಕ್ಲಾಸ್ ತೆಗೆದುಕೊಂಡರು. ಸುದೀಪ್ ಅವರು ತಮ್ಮ ಪರವಾಗಿ ನಿಂತಿದ್ದನ್ನು ಕೇಳಿ ಡ್ರೋನ್ ಪ್ರತಾಪ್ ಅವರು ಟ್ರ್ಯಾಕ್ಗೆ ಮರಳಿದ್ದಾರೆ.
ಆದರೂ ಈಗ ಒಂದು ರೊಟ್ಟಿಯಿಂದಾಗಿ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.