ಬಯಲಾಗುತ್ತಾ ಸ್ಫೋಟ ಕ ಆಡಿಯೋ; ರಾಜಕಾರಣಿಗಳು ಗಡಗ ಡ

 | 
His

ರಾಜ್ಯದಲ್ಲಿ ಪೆನ್ ಡ್ರೈವ್ ಹಗರಣಕ್ಕೆ ಸ್ಫೋಟಕ ತಿರುವು ಸಿಗುತ್ತಿದೆ. ಒಂದೆಡೆ ಜೆಡಿಎಸ್ ನೇರವಾಗಿ ಕಾಂಗ್ರೆಸ್ ವಿರುದ್ಧವೇ  ಬೊಟ್ಟು ಮಾಡುತ್ತಿದ್ರೆ, ಮತ್ತೊಂದೆಡೆ ಕೆಲವೊಂದು ಆಡಿಯೋಗಳು ವೈರಲ್ ಆಗಿದ್ದು ಸಂಚಲನ ಮೂಡಿಸಿದೆ. ಇದರಲ್ಲಿ ವಕೀಲ ದೇವರಾಜೇ ಗೌಡ, ಶಿವರಾಮೇಗೌಡ ಹಾಗೂ ಡಿಕೆಶಿ ಅವರದ್ದು ಎನ್ನಲಾದ ಆಡಿಯೋಗಳು ವೈರಲ್ ಆಗಿದ್ದು,  ಇದರಲ್ಲಿ ದೇವೇಗೌಡರ ಕುಟುಂಬದ ವಿರುದ್ಧದ ಸಂಚಿನ ಬಗ್ಗೆ ವಿವರಿಸಲಾಗಿದೆ. ಜೊತೆಗೆ ಜೆಡಿಎಸ್ ನ್ನು ಮುಗಿಸುವ ಬಗ್ಗೆ ಹಾಗೂ ಪೆನ್ ಡ್ರೈವ್ ವಿಡಿಯೋ ಬಗ್ಗೆ ಚರ್ಚೆಗಳು ನಡೆದಿವೆ.

ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ ಎಂದು ಎಸ್ಐಟಿ ವಶದಲ್ಲಿರುವ ಬಿಜೆಪಿ ಮುಖಂಡು, ವಕೀಲ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನು ನನ್ನ ಬಂಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇರ ಹೊಣೆ ಎಂದು ಕೂಡ ಹೇಳಿದ್ದಾರೆ. ಕಾರ್ತಿಕ್ ಪತ್ನಿ ಅಪಹರಿಸಿರುವ ವಿಡಿಯೋ ನನ್ನ ಬಳಿ ಇದೆ. ಡಿಕೆ ಶಿವಕುಮಾರ್​ ನನ್ನ ಜೊತೆ ಮಾತಾಡಿರುವ ಆಡಿಯೋ ಕೂಡ ಇದೆ. ಸದ್ಯದಲ್ಲೇ ಈ ವಿಡಿಯೋ, ಆಡಿಯೋ ಬಿಡುಗಡೆ ಮಾಡುವೆ ಎಂದಿದ್ದಾರೆ.

ಆದರೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಭಾನುವಾರ ಹೊಸ ತಿರುವು ಪಡೆದಿದೆ.ತಮ್ಮ ಪುತ್ರನ ಏಳಿಗೆಗಾಗಿ ಕುಮಾರಸ್ವಾಮಿಯೇ ಪ್ರಜ್ವಲ್ ಅವರ ಅಶ್ಲೀಲ ವಿಡಿಯ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಿ ಹೇಳಿಕೆ ನೀಡುವಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರಿಗೆ ಮಾಡಿ ಸಂಸದ ಶಿವರಾಮೇಗೌಡ ಸೂಚನೆ ನೀಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಸಾವಿರಾರು ಪೆನ್ ಡ್ರೈವ್ ಗಳನ್ನು ಸಾರ್ವಜಿಕವಾಗಿ ಹಂಚಿರುವುದರ ಹಿಂದೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್. ಶಿವರಾಮೇಗೌಡ ಹಾಗೂ ನಾಲ್ಕೈದು ಸಚಿವರ ಪಾತ್ರವಿದೆ ಎಂದು ಎರಡು ದಿನಗಳ ಹಿಂದೆ ಎಸ್ಐಟಿ ವಶದಲ್ಲಿರುವಾಗಲೇ ದೇವರಾಜೇಗೌಡ ನೀಡಿರುವ ಹೇಳಿಕೆಯ ವೈರಲ್ ಆಡಿಯೋ ಇದಕ್ಕೆ ಪುಷ್ಟಿ ನೀಡಿದೆ.ಡಿಕೆ ಶಿವಕುಮಾರ್ ನನಗೆ 100 ಕೋಟಿ ಆಫರ್ ಮಾಡಿದ್ದರು ಎಂದು ಈ ಹಿಂದೆ ದೇವರಾಜೇಗೌಡ ಆರೋಪಿಸಿದ್ದರು. ಶಿವರಾಮೇಗೌಡ ಮೂಲಕ ನನ್ನನ್ನು ಸಂಪರ್ಕಿಸಿದ್ದರು ಎಂದೂ ಆರೋಪಿಸಿದ್ದರು. 

ಆದರೆ, ದೇವರಾಜೇಗೌಡ ಮೆಂಟಲ್ ಎನ್ನುವ ಮೂಲಕ ಡಿಕೆ.ಶಿವಕುಮಾರ್ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು. ಈ ನಡುವೆ ಸುದ್ದಿಗೋಷ್ಠಿ ನಡೆಸಿದ್ದ ಶಿವರಾಮೇಗೌಡ, ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಶಿವರಾಮೇಗೌಡ ಹಾಗೂ ದೇವರಾಜೇಗೌಡ ನಡುವೆ ನಡೆದಿದ್ದು ಎನ್ನಲಾದ ಸಂಭಾಷಣೆಯ ಆಡಿಯೋವೊಂದು ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.