Fact Check; RCB ಗೆದ್ದರೆ ಸರ್ಕಾರದಿಂದ ರಜೆ ಘೋಷಣೆ; ಸಿಎಮ್ ಹೇಳಿದ್ದು ನಿಜ ನಾ

 | 
Jj

ಆರ್‌ಸಿಬಿ ಬೆಂಗಳೂರು ತಂಡ ಇದೀಗ ಎಲ್ಲೆಲ್ಲೂ ಹವಾ ಎಬ್ಬಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಂಡ್ರೆ ಐಪಿಎಲ್ ಅಖಾಡದಲ್ಲಿ ಒಂದು ಭಯ ಹುಟ್ಟಿದೆ. ಯಾಕಂದ್ರೆ ಸತತ 6 ಸೋಲುಗಳ ನಂತರ ಸತತ 6 ಗೆಲುವು ಕಂಡಿರುವ ಆರ್‌ಸಿಬಿ ತಂಡ ಇದೀಗ 2024ರ ಐಪಿಎಲ್ ಟೂರ್ನಿ ಪ್ಲೇಆಫ್ ಪ್ರವೇಶ ಮಾಡಿದೆ. 

ಇದರ ಜೊತೆಗೆ, ಐಪಿಎಲ್ ಕಪ್ ಗೆಲ್ಲುವ ತಂಡವಾಗಿ ಕೂಡ ಆರ್‌ಸಿಬಿ ಈಗ ಗುರುತಿಸಿಕೊಂಡಿದೆ. ಹೀಗಿದ್ದಾಗಲೇ ಆರ್‌ಸಿಬಿ ಅಭಿಮಾನಿಗಳು ರಾಜ್ಯ & ಕೇಂದ್ರ ಸರ್ಕಾರಕ್ಕೆ ಹೊಸ ಬೇಡಿಕೆ ಸಲ್ಲಿಸಿದ್ದಾರೆ. ಇಡೀ ಇಂಡಿಯಾ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ಕಣ್ಣಿಟ್ಟು ಕೂತಿತ್ತು ಯಾಕಂದ್ರೆ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಮಹತ್ವದ ಮ್ಯಾಚ್ ನಡೆದಿತ್ತು. ಈ ಕಾರಣಕ್ಕೆ ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ ಬೆಂಗಳೂರು ಟೀಂನ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ರು.

 ಅದರಲ್ಲೂ ಕೋಟಿ ಕೋಟಿ ಅಭಿಮಾನಿಗಳು ಆರ್‌ಸಿಬಿ ಗೆದ್ದ ತಕ್ಷಣ ರೋಡ್ ರೋಡ್‌ನಲ್ಲಿ ಸಂಭ್ರಮಿಸಿ, ತಮ್ಮ ಖುಷಿ ಹೊರಹಾಕಿದ್ದಾರೆ. ಇದೇ ಸಮಯದಲ್ಲಿ RCB ಅಭಿಮಾನಿಗಳು ಹೊಸ ಡಿಮ್ಯಾಂಡ್ ಇಟ್ಟಿದ್ದು, ರಾಷ್ಟ್ರೀಯ ರಜೆ ಬೇಕು ಅಂತಿದ್ದಾರೆ.ಹೌದು, ಶನಿವಾರ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದು ಬೀಗಿದ ನಂತರ ಬೆಂಗಳೂರಿನಲ್ಲಿ ಬೆಂಗಳೂರು ತಂಡದ ಅಭಿಮಾನಿಗಳು ಭರ್ಜರಿ ಸಂಭ್ರಮ ವ್ಯಕ್ತಪಡಿಸಿದರು. 

ಮಧ್ಯರಾತ್ರಿಯ ಸಮಯದಲ್ಲೂ ಎಂಜಾಯ್ ಮಾಡಿ, 2 ರಿಂದ 3 ಗಂಟೆ ತನಕ ಸೆಲೆಬ್ರೇಷನ್‌ನ ಮಾಡಿದರು. ರೋಡ್ ರೋಡ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು, ಹಾಗೇ ವಿರಾಟ್ ಕೊಹ್ಲಿ & ಆರ್‌ಸಿಬಿ ತಂಡದ ಇತರ ಆಟಗಾರರನ್ನು ಕೂಗಿ ಕೂಗಿ ಹೊಗಳಿದರು ಕನ್ನಡಿಗರು. ಹಾಗೇ ಇದೇ ಸಮಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಆರ್‌ಸಿಬಿ ಫ್ಯಾನ್ಸ್, ಬಹುದೊಡ್ಡ ಡಿಮ್ಯಾಂಡ್ ಇಟ್ಟಿದ್ದಾರೆ. ಅದು ಏನಂದ್ರೆ ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲೋದು ಬಹುತೇಕ ಗ್ಯಾರಂಟಿ. 

2024ರ ಐಪಿಎಲ್ ಆರ್‌ಸಿಬಿ ಗೆದ್ದ ತಕ್ಷಣ ರಜೆ ಘೋಷಿಸಿ, ರೋಡ್‌ಗಳನ್ನ ಬಂದ್ ಮಾಡಿ ಅಂತಾ ಬೇಡಿಕೆ ಇಡುತ್ತಿದ್ದಾರೆ. ನೇರವಾಗಿ ಸಿಎಂ ಸಿದ್ದರಾಮಯ್ಯ ಅವರೇ ಈ ಬಗ್ಗೆ ಕ್ರಮ ಕೈಗೊಂಡು ರಜೆ ಘೋಷಣೆ ಮಾಡಬೇಕು ಅಂತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.