FactCheck:ಗಗನಸಖಿ ಆಗುವ ಮುನ್ನ ಕನ್ಯತ್ವ ಪರೀಕ್ಷೆಗಾಗಿ ಮಷೀನ್ ಮೇಲೆ ಮಲಗಬೇಕು
Apr 15, 2025, 17:07 IST
|

ಆದರೆ ಪ್ರತಿದಿನವೂ ವಿಮಾನದಲ್ಲಿ ಪ್ರಯಾಣಿಸುವ ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ನೋಡಲು ಸುಂದರವಾಗಿದ್ದರೆ ಸಾಕು, ಈ ಉದ್ಯೋಗ ಸುಲಭದಲ್ಲಿ ಸಿಕ್ಕಿಬಿಡುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಈ ಹುದ್ದೆ ಏರಲು ಸಾಕಷ್ಟು ಅರ್ಹತೆಗಳೂ ಇರಬೇಕು. ಇದು 9-5 ಜಾಬ್ ಅಲ್ಲ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ. ಯಾವುದೇ ಪರಿಸ್ಥಿತಿಯಲ್ಲಿ ಶಾಂತ ಮತ್ತು ತಾಳ್ಮೆ ತುಂಬಾ ಅಗತ್ಯವಾಗಿರಬೇಕು. ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳುವ ಅಪಾಯವೂ ಇವರ ಬೆನ್ನಹಿಂದೆಯೇ ಇರುತ್ತದೆ.
ಮಾತ್ರವಲ್ಲದೇ ವಿಮಾನದಲ್ಲಿ ಏನಾದರೂ ಸಮಸ್ಯೆಯಾದಾಗ ಪ್ರಯಾಣಿಕರ ಪ್ರಾಣ ಕಾಪಾಡುವ ಜವಾಬ್ದಾರಿ ಕೂಡ ಗಗನಸಖಿಯರ ಮೇಲೆ ಇರುತ್ತದೆ. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಪ್ರಯಾಣಿಕರ ಪ್ರಾಣ ಕಾಪಾಡಿದ ಗಗನಸಖಿಯರ ಉದಾಹರಣೆಗಳೂ ಸಾಕಷ್ಟಿವೆ. ಇದೇ ಕಾರಣಕ್ಕೆ, ಗಗನಸಖಿಯಾಗುವವರು ಹಲವಾರು ಸುತ್ತಿನ ಸಂದರ್ಶನಗಳು ಮತ್ತು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಅವರಿಗೆ ಅಗತ್ಯವಾದ ವಿಶ್ರಾಂತಿಯ ಅಗತ್ಯವೂ ಇರುತ್ತದೆ. ಹಾಗಿದ್ದರೆ ಗಗನಸಖಿಯರಿಗೆ ಹೇಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಇರುವುದು ಗಗನಸಖಿಯರಿಗೆ ವಿಶ್ರಾಂತಿಗಾಗಿ ಇರುವ ಮಷಿನ್ಗಳನ್ನು ಹೇಗೆ ಬಳಸಲಾಗುತ್ತದೆ ಎನ್ನುವುದು. ಆದರೆ ವೈರಲ್ ಆಗಿರೊ ವಿಡಿಯೋದಲ್ಲಿ ಇದು ಕನ್ಯತ್ವ ಪರೀಕ್ಷೆ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಅದರ ಪಕ್ಕದಲ್ಲಿಯೇ, ಈ ವಿಡಿಯೋ ಏನು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇದ್ದರೂ, ನೆಟ್ಟಿಗರು ಗೊತ್ತಲ್ಲ! ಎರಡು ಪ್ಯಾರಾಗಳನ್ನೂ ಓದುವಷ್ಟು ಪುರುಸೊತ್ತು ಇಲ್ಲ. ಫೋಟೋದ ಮೇಲೆ ಹಾಕಿರುವ ಕನ್ಯತ್ವ ಪರೀಕ್ಷೆಯನ್ನೇ ನಿಜ ಎಂದುಕೊಂಡು ಮನಸ್ಸಿಗೆ ಬಂದರೆ ಕಮೆಂಟ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ವಿಡಿಯೋ ಇಷ್ಟೊಂದು ವೈರಲ್ ಕೂಡ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023