FactCheck:ಬ್ಯಾಂಕ್ ಜನಾರ್ಧನ್ ಆಸ್ಪತ್ರೆಯಲ್ಲಿದ್ದಾಗ ದರ್ಶನ್ ಮಾಡಿದ ಸಹಾಯಕ್ಕೆ ಕನ್ನಡಿಗರು ಫಿದಾ

 | 
Jjj
ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರು ನಿಧನರಾಗುವ ಮುನ್ನ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಅವಗಣನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ದರ್ಶನ್, ಉಪೇಂದ್ರ, ಸುದೀಪ್ ಮುಂತಾದ ನಟರು ತಮ್ಮನ್ನು ಮರೆತುಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದರು. ಹೊಸ ಪೀಳಿಗೆಯ ನಿರ್ದೇಶಕರು ಹಿರಿಯರಿಗೆ ಅವಕಾಶ ನೀಡದಿರುವುದರಿಂದ ದುಡಿಯುವುದು ಕಷ್ಟವಾಗಿದೆ ಎಂದು ಅವರು ಹೇಳಿದ್ದರು.
ಹಲವು ಹಿರಿಯ ಕಲಾವಿದರು ಮೂಲೆ ಗುಂಪಾಗಿದ್ದಾರೆ. ಹೊಸ ಜನರೇಶನ್ ನಿರ್ದೇಶಕರು ಹಾಗೂ ನಿರ್ಮಾಪಕರು ಚಿತ್ರರಂಗಕ್ಕೆ ಬರುತ್ತಿದ್ದು, ಹಿಂದಿನ ಕಾಲದವರಿಗೆ ಅವಕಾಶವೇ ಇಲ್ಲದಂತೆ ಆಗಿದೆ. ಹಿರಿಯ ನಟ ಬ್ಯಾಂಕ್ ಜನಾರ್ಧನ್  ಅವರಿಗೂ ಇದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ನಿನ್ನೆ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದು, ಸಾಯುವುದಕ್ಕೂ ಮೊದಲು ಕೆಲ ನಟರ ಬಗ್ಗೆ ಅವರು ಬೇಸರ ಹೊರಹಾಕಿದ್ದರು. ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು.
ಗಣೇಶ್​ ಉದಯ ಟಿವಿಯಲ್ಲಿ ಕಾರ್ಯಕ್ರಮ ಮಾಡಿ ಫೇಮಸ್ ಆದವನು. ಅವನು ಬರೋದಕ್ಕೂ ಮೊದಲು ಆ ಕಾರ್ಯಕ್ರಮ ನಾನು ಮಾಡ್ತಾ ಇದ್ದೆ. ಚಾನೆಲ್​ನವರು ಹೊಸ ಹುಡುಗ ಗಣೇಶ್ ಇದನ್ನು ಮಾಡ್ತಾನೆ ನಿಮಗೇನು ತೊಂದರೆ ಇಲ್ಲವ ಎಂದು ಕೇಳಿದ್ದರು. ನಾನು ಇಲ್ಲ ಎಂದು ಹೇಳಿದ್ದೆ. ಹಾಗಾಗಿ, ಆ ಕಾರ್ಯಕ್ರಮ ಗಣೇಶ್​ಗೆ ಸಿಕ್ತು. ಉಪೇಂದ್ರ ಜೊತೆ ನಾನು ಅವಾಗ ಸಮಯ ಕಳೆಯುತ್ತಿದ್ದೆ. ದರ್ಶನ್, ಸುದೀಪ್ ಜೊತೆಯೂ ನಾನು ಕೆಲಸ ಮಾಡಿದ್ದೇನೆ. ಅವರು ಯಾರಿಗೂ ನನ್ನ ನೆನಪಿಲ್ಲ ಎಂದಿದ್ದರು ಜನಾರ್ಧನ್.
ಈಗ ಬರುತ್ತಿದ್ದವರೆಲ್ಲರೂ ಯುವ ನಿರ್ದೇಶಕರು. ಇತ್ತೀಚೆಗೆ ಯುವ ನಿರ್ದೇಶಕರು ನನಗೆ ಕರೆ ಮಾಡಿ ಫೋಟೋ ಕೇಳಿದರು. ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ. ನಟನೆ ಮಾಡುತ್ತಿರುವ ವಿಡಿಯೋ ಕಳುಹಿಸಿ ಎಂದರು. ನಾನು ಉದಯ ಟಿವಿ ಹಾಕಿ, ಅದರಲ್ಲಿ ಯಾವುದೇ ಸಿನಿಮಾ ನೋಡಿದರೂ ನಾನು ಇರುತ್ತೇನೆ ಎಂದೆ. ಆದಾಗ್ಯೂ ಅವರು ಕೇಳಲಿಲ್ಲ. ವಿಡಿಯೋ ಕಳಿಸಿ ಎಂದರು. ವಿಡಿಯೋ ಕಳುಹಿಸಿ ಚಾನ್ಸ್ ತೆಗೆದುಕೊಳ್ಳುವ ಸ್ಥಿತಿ ನನಗೆ ಇಲ್ಲ ಎಂದು ಅವರಿಗೆ ಹೇಳಿದ್ದೆ ಎಂದು ವಿವರಿಸಿದ್ದರು ಜನಾರ್ಧನ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.