FactCheck:ಉಗ್ರಂ ಮಂಜು ಮದುವೆ ಫಿಕ್ಸ್, ಹುಡುಗಿ ಮಾತ್ರ ದಂತದ ಗೊಂಬೆ
Jun 1, 2025, 16:39 IST
|

ಉಗ್ರಂ ಮಂಜು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಬಿಗ್‌ಬಾಸ್ ಮನೆಗೆ ಹೋದ ಬಳಿಕ ಸಾಕಷ್ಟು ಫೇಮಸ್ ಆದರು. ಹೀಗಾಗಿ ಉಗ್ರಂ ಮಂಜು ಅನ್ನೋದಕ್ಕಿಂತ ಬಿಗ್‌ಬಾಸ್ ಮಂಜು ಅನ್ನೋರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಬಿಟ್ಟರೆ ಗೌತಮಿ ಮಂಜು ಎಂದು ಕರೆಯುವುದುಂಟು. ಯಾಕೆಂದರೆ ಅವರಿಬ್ಬರ ನಡುವಿನ ಸ್ನೇಹ ಬಿಗ್‌ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿತ್ತು. ಅಲ್ಲದೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಗೌತಮಿ ಹಾಗೂ ಉಗ್ರಂ ಮಂಜು ಇಬ್ಬರ ಸ್ನೇಹವನ್ನು ಉಳಿಸಿಕೊಂಡಿದ್ದಾರೆ.
ಆದರೆ ಇದೀಗ ಉಗ್ರಂ ಮಂಜು ಅವರು ಹೊಸ ಫೋಟೋವನ್ನು ಹಾಕಿದ್ದಾರೆ.ಹೌದು ಸಾಮಾಜಿಕ ಜಾಲತಾಣದಲ್ಲಿ ಉಗ್ರಂ ಮಂಜು ಅವರು ಒಂದು ಹುಡುಗಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇವರು ನನ್ನ ಜೀವನದ ಹೊಸ ಗೆಳತಿ ಎಂದು ಟ್ಯಾಗ್ ಲೈನ್ ಹಾಕಿದ್ದಾರೆ. ಉಗ್ರಂ ಮಂಜು ಅವರಿಗೆ ತುಂಬಾ ವಯಸ್ಸಾಗಿದ್ದರೂ ಕೂಡ ಇಲ್ಲಿವರೆಗೂ ಮದುವೆ ಆಗಿಲ್ಲ ಅನ್ನೋ ವಿಚಾರ ಹೆಚ್ಚಾಗಿ ಚರ್ಚೆಯಾಗುತ್ತಿತ್ತು. ಗೌತಮಿ ಅವರು ತಮ್ಮ ಗೆಳೆಯ ಉಗ್ರಂ ಮಂಜುಗೆ ಒಬ್ಬ ಹುಡುಗಿ ಹುಡುಕಬೇಕು, ಮದುವೆ ಮಾಡಿಸಬೇಕು ಎಂದು ಸಾಕಷ್ಟು ರೀತಿಯ ಪ್ರಯತ್ನ ಮಾಡುತ್ತಿದ್ದರು.
ಉಗ್ರಂ ಮಂಜು ಅವರು ಬಿಗ್‌ಬಾಸ್ ಮನೆಗೆ ಹೋದ ಬಳಿಕ ಅವರ ಸಾಕಷ್ಟು ವೈಯಕ್ತಿಕ ವಿಚಾರಗಳು ಜನರಿಗೆ ಗೊತ್ತಾಗಿದೆ. ಅವರಿಗೆ ಅಕ್ಕ ತಂಗಿ ಇದ್ದು, ಅವರಿಗೆ ಮದುವೆ ಮಾಡುವುದರಲ್ಲಿ ಜೀವನ ಕಟ್ಟಿಕೊಳ್ಳುವುದರಲ್ಲಿ ಸಾಲ ತೀರಿಸುವುದರಲ್ಲಿ ಮಂಜು ಅವರ ವಯಸ್ಸು ಕಳಿತಾ ಬಂದಿದೆ. ಇದೀಗ ಅವರಿಗೆ 40+ ಆಗಿದ್ದರೂ ಕೂಡ ಅವರಿಗೆ ಮದುವೆ ಆಗಿಲ್ಲ. ಆದರೆ ಮದುವೆ ಆಗಬೇಕು ಅನ್ನೋ ಹಂಬಲ ಮಂಜು ಅವರಿಗೆ ಇದೆ. ಮಂಜು ಅವರಿಗೆ ಮದುವೆ ಮಾಡಬೇಕು ಅನ್ನೋ ಆಸೆ ತಂದೆ ತಾಯಿಗೂ ಇದೆ. ಆದರೆ ಆ ಕಾಲ ಇನ್ನೂ ಕೂಡ ಕೂಡಿ ಬಂದಿಲ್ಲ.
ಕಲಾವಿದರಾಗಿ ನಮಗೆ ವರವೋ ಅಥವಾ ಶಾಪವೋ ಗೊತ್ತಿಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಬಿಗ್ ಬಾಸ್ ಶೋ ನೋಡ್ತಾರೆ. ಆದರೆ ಮನೆ ಬಾಡಿಗೆ ಕೊಡಬೇಕಾದರೆ ಸಿನಿಮಾದವರ ಅಂತ ಯೋಚನೆ ಮಾಡ್ತಾರೆ. ನಮ್ಮದು ತಿಂಗಳಿಗೆ ಇಷ್ಟು ಸಂಭಾವನೆ ಬರುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಸಾಫ್ಟ್‌ವೇರ್, ಟೀಚರ್ ಹೀಗೆ ಬೇರೆ ಬೇರೆ ಫೀಲ್ಡ್‌ನಲ್ಲಿರುವವರಿಗೆ ತಿಂಗಳಿಗೆ 50 ಸಾವಿರ ಅಥವಾ ಒಂದು ಲಕ್ಷ ರೂಪಾಯಿ ಸಂಬಳ ಬರುತ್ತೆ ಅನ್ನೋದು ಗ್ಯಾರಂಟಿ" ಎಂದು ಉಗ್ರಂ ಮಂಜು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.