ಫೇಸ್ಬುಕ್ ನಲ್ಲಿ ಲವ್ ಮಾಡುವ ಹುಡುಗಿಯರೇ ಜಾಗೃತೆ ಜಾಗೃತೆ, ಈ ಸ್ಟೋರಿ ತಪ್ಪದೇ ನೋಡಿ

 | 
ರಪ

 ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಜೀವನವನ್ನೇ ಇನ್ನಿಲ್ಲವಾಗಿಸುತ್ತದೆ. ಹೌದು ಇರುವುದೊಂದೆ ಬದುಕು ಎಂದು ಒಮ್ಮೆ ತಪ್ಪು ಹೆಜ್ಜೆ ಇಟ್ಟರೆ ಜೀವನ ಪೂರ್ತಿ ನೋವಿನಲ್ಲಿಯೇ ಇರಬೇಕಾಗುತ್ತದೆ.

ಮೈಸೂರಿನ  ಸಿದ್ದಲಿಂಗಪುರ ಗ್ರಾಮದಲ್ಲಿ ನಿನ್ನೆ ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆಗೈದ ದುರಂತ ಘಟನೆ ನಡೆದಿದೆ.ಮಮತಾ ಎನ್ನುವವಳು ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ನಿವಾಸಿಯಾಗಿದ್ದರು. 


ಕೊಲೆಗೈದ ಆರೋಪಿ ಹಾಸನ ಮೂಲದ ಮೋಹನ್ ಎಂದು ತಿಳಿಯಲಾಗಿದೆ. ಇವರಿಬ್ಬರು ಒಟ್ಟಿಗೆ ಒಂದೇ ಬೇಕರಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು.ಮಮತಾ ಮದುವೆಯಾಗಿ ಪತಿಯಿಂದ ದೂರ ವಿದ್ದಳು. ಅಲ್ಲದೇ ಮಮತಾ ಮತ್ತು ಮೋಹನ್ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಸ್ಥಳದಲ್ಲೇ ಸ್ನೇಹಿತರಾಗಿದ್ದು, ಆಕೆಯೊಂದಿಗೆ ಸಂಬಂಧವನ್ನು ಹೊಂದಿದ್ದನು, ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಮಾತಿಗೆ ಮಾತು ಬೆಳೆದು ಗಲಾಟೆ ತೀವ್ರಗೊಂಡಿತು.ಬಳಿಕ ಸಿಟ್ಟುಗೊಂಡ ಮೋಹನ್‌ ಕಬ್ಬಿಣದ ರಾಡ್‌‌ನಿಂದ ಮಮತಾಳ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. 

ಹತ್ಯೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೃತ್ಯವೆಸಗಿದ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮೋಹನ್ ಬೇಕರಿ ನಡೆಸುತ್ತಿದ್ದನು. ಇದರಲ್ಲಿ ಮಮತಾ ಹೂಡಿಕೆ ಮಾಡಿದ್ದರು. ಹಾಗಾಗಿ ಮಮತಾ ತನ್ನ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ್ದರಿಂದ ಮೋಹನ್ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.


ಬುಧವಾರ ಸಂಜೆ ಮಮತಾ ಬೇಕರಿಗೆ ಬಂದಾಗ ಮೋಹನ್ ಕಬ್ಬಿಣದ ಸಲಾಕೆಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.


(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.