'ರಾತ್ರೋರಾತ್ರಿ ಚಿನ್ನದ ಬೆಲೆ ಇಳಿಕೆ; ಬಂಗಾರದ ಮಳಿಗೆಯಲ್ಲಿ ಜನವೂ ಜನ'

 | 
Huu

ಬಡವರ ಕನಸು, ಶ್ರೀಮಂತರ ಹೂಡಿಕೆ ಎನಿಸಿಕೊಂಡಿರುವ ಬಂಗಾರದ ದರ ಏಪ್ರಿಲ್‌ ಮೊದಲ ವಾರದಿಂದಲೇ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ಅದರಿಂದಾಚೆ ಕೂಡ ಸ್ವಲ್ಪ ಸ್ವಲ್ಪ ದರದಲ್ಲಿ ಏರಿಕೆ ಕಾಣುತ್ತಲೇ ಇದೆ. ಕೇವಲ ಬಂಗಾರ ಒಂದೇ ಅಲ್ಲ, ಗ್ರಾಹಕರಿಗೆ ಬೆಳ್ಳಿ ಬೆಲೆಯೂ ಅಚ್ಚರಿ ಉಂಟು ಮಾಡಿದೆ. 

ಏನಪ್ಪಾ ಇದು ಬಂಗಾರ-ಬೆಳ್ಳಿ ದರಗಳು ಯದ್ವಾ ಯದ್ವಾ ಏರುತ್ತಿವೆ ಅನ್ನೋ ಅಷ್ಟು ಬೆಲೆಗಳಲ್ಲಿ ವ್ಯತ್ಯಾಸ ಉಂಟಾಗ್ತಿದೆ. ಸದ್ಯ ನಮ್ಮ ದೇಶದಲ್ಲಿ ಬಂಗಾರಕ್ಕೆ ಇರುವ ಬೇಡಿಕೆ ಬೇರೊಂದಕ್ಕೆ ಇಲ್ಲ. ಭೂಮಿ, ಆಸ್ತಿ ಬಿಟ್ಟರೆ ಜನ ಹೂಡಿಕೆ ಮಾಡಲು ಬಯಸುವ ವಸ್ತು ಎಂದರೆ ಅದು ಚಿನ್ನ. ಖಂಡಿತ ಚಿನ್ನಕ್ಕೆ ಯಾವತ್ತಿದ್ದರೂ ಬೆಲೆ ಇದೆ.

ನೀವೇನಾದರೂ ಹತ್ತು ವರ್ಷದ ಹಿಂದೆ ಖರೀದಿಸಿದ ಚಿನ್ನವನ್ನು ಈಗ ಮಾರಿದರೆ ನಿಮಗೆ ಚಿನ್ನಕ್ಕಿರುವ ಮಹತ್ವ ಗೊತ್ತಾಗುತ್ತದೆ. ಈಗಿನ ಬಂಗಾರದ ದರಕ್ಕೆ ಹೋಲಿಸಿದರೆ ಒನ್‌ಟು ಡಬಲ್‌ ಹಣ ನಿಮ್ಮ ಕೈ ಸೇರುತ್ತದೆ.ಬೇಡಿಕೆ, ಪೂರೈಕೆ, ಸಂಪತ್ತಿನ ಸಂಕೇತ, ದೇಶದ ಆರ್ಥಿಕತೆಯ ಬಲ ಹೀಗೆ ಸುಮಾರಷ್ಟು ಕಾರಣಗಳಿಂದ ಬಂಗಾರದ ದರ ಏರುತ್ತಲೇ ಇದೆ. 

ಈ ಕಾರಣಗಳ ಜೊತೆ ಜಾಗತಿಕ ಅಂಶಗಳು, ಯುಎಸ್‌ ಡಾಲರ್‌ ದರದಲ್ಲಿ ಏರಿಕೆ ಇವೆಲ್ಲಾ ಈಗಿನ ಬಂಗಾರದ ಏರಿಕೆಗೆ ಕಾರಣವಾಗಿರಬಹುದು. ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ತುಸು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 67,940 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 68,690, ರೂ. 67,940, ರೂ. 67,940 ಆಗಿದೆ. ಬೆಂಗಳೂರು ಮಂಗಳೂರು ಉಡುಪಿಯಲ್ಲಿ ಇಂದು ಚಿನ್ನದ ಬೆಲೆ 68,090 ರೂ. ಆಗಿದೆ.