ಧನರಾಜ್ ಮಗುವಿಗೆ ಕೋಟಿ ಬೆಲೆಯ ಚಿನ್ನದ ತೊಟ್ಟಿಲು ಕೊಟ್ಟ ಗೋಲ್ಡ್ ಸುರೇಶ್
Jan 5, 2025, 12:35 IST
|
ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಹಾಗೂ ಗೋಲ್ಡ್ ಸುರೇಶ್ ಅವರು ಉತ್ತಮ ಬಾಂಧವ್ಯ ಹೊಂದಿದ್ದ ಸ್ಪರ್ಧಿಗಳು. ಈ ಇಬ್ಬರ ಜೊತೆಯಾಟ ಬಿಗ್ ಬಾಸ್ ವೀಕ್ಷಕರಿಗೆ ಬಹು ಇಷ್ಟುವಾಗುತ್ತಿತ್ತು. ಇನ್ನು ಧನರಾಜ್ ಅವರ ಬಳಿ ಗೋಲ್ಡ್ ಸುರೇಶ್ ನಿನ್ನ ಮಗುವಿನ ನಾಮಕರಣಕ್ಕೆ ತೊಟ್ಟಿಲು ಗಿಫ್ಟ್ ಕೊಡುವುದಾಗಿ ಹೇಳಿದ್ದರು.
ಅದರಂತೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಧನರಾಜ್ ಅವರ ಬೆಂಗಳೂರಿನ ಮನೆಗೆ ಬಂದು ಬಂಗಾರದ ತೊಟ್ಟಿಲು ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಇನ್ನು ಈ ಗಿಫ್ಟ್ ನೋಡಿದ ಧನರಾಜ್ ಪತ್ನಿ ಶಾಕ್ ಆಗಿದ್ದಾರೆ. ಕೋಟಿಯ ಕುಬೇರ ಗೋಲ್ಡ್ ಸುರೇಶ್ ಅವರ ಗಿಫ್ಟ್ ನೋಡಿ ಫಿದಾ ಆಗಿ ಬಿಟ್ಟಿದ್ದಾರೆ.