ಹೊಸ BPL ಅರ್ಜಿದಾರರಿಗೆ ಸಿಹಿಸುದ್ದಿ, ಇನ್ನುಮುಂದೆ ಗ್ಯಾರಂಟಿ ಭಾಗ್ಯ ಅರ್ಜಿ ತುಂಬಾ ಸುಲಭ
ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಕೊಟ್ಟಿದ್ದ ಭರವಸೆಗಳ 5 ಯೋಜನೆಯನ್ನ ಜಾರಿಗೆ ತರುವ ಕೆಲಸದಲ್ಲಿದೆ. ಈಗಾಗಲೇ ಶಕ್ತಿ ಯೋಜನೆಯ ಫಲವನ್ನು ಎಲ್ಲಾ ಹೆಣ್ಣುಮಕ್ಕಳು ಉಚಿತವಾಗಿ ಬಸ್ ಪ್ರಯಾಣ ಮಾಡುವ ಮೂಲಕ ಈ ಸೌಲಭ್ಯ ಪಡೆಯುತ್ತಿದ್ದಾರೆ.
ಮತ್ತೊಂದು ಸೌಲಭ್ಯ ಗೃಹಲಕ್ಷ್ಮೀ ಯೋಜನೆ. ಈ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ತಿಂಗಳಿಗೆ ₹2000 ರೂಪಾಯಿ ಹಾಕಾಲಾಗುತ್ತದೆ. ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಶುರುವಾಗಿದೆ. ಇನ್ನು ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ಎಲೆಕ್ಟ್ರಿಸಿಟಿ ನೀಡಲಿದ್ದು, ಈ ಯೋಜನೆಗು ಸಹ ಅರ್ಜಿ ಪ್ರಕ್ರಿಯೆ ಶುರುವಾಗಿದೆ.
ಜನರು ಇವುಗಳಿಗೆ ಅರ್ಜಿ ಸಲ್ಲಿಸಲು ಕ್ಯೂ ನಿಂತಿದ್ದು, ಆಗಸ್ಟ್ ನಲ್ಲಿ ಈ ಯೋಜನೆಗಳು ಜಾರಿಗೆ ಬರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು. ಹಾಗಾಗಿ ಬಿಪಿಎಲ್ ಕಾರ್ಡ್ (BPL Card) ಇರದ ಹೆಚ್ಚಿನ ಜನರು ಈಗ ಹೊಸದಾಗಿ ಕಾರ್ಡ್ ಮಾಡಿಸಲು ಅರ್ಜಿ ಹಾಕಿದ್ದಾರೆ.
ಇನ್ನು ಸಾಕಷ್ಟು ಜನರು ಹೊಸ ರೇಶನ್ ಕಾರ್ಡ್ ಮಾಡಿಸಲು ಈಗಲೂ ಅರ್ಜಿ ಹಾಕುತ್ತಿದ್ದು, ಅವರಿಗೆಲ್ಲಾ ಆಗಸ್ಟ್ ಇಂದಲೇ ಅನ್ನಭಾಗ್ಯ ಯೋಜನೆಯ ಫಲ ಸಿಗಬಹುದು ಎಂದು ಹೇಳಲಾಗುತ್ತಿದೆ. ಈಗ ಆಹಾರ ಇಲಾಖೆ ಮತ್ತು ಸರ್ಕಾರದ ಕಡೆಯಿಂದ ಸಿಕ್ಕಿರುವ ಮಾಹಿತಿ ಏನು ಎಂದರೆ, ಈಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕುತ್ತಿರುವವರಿಗೆ ಅಥವಾ ಇತ್ತೀಚೆಗೆ ಸರ್ಕಾರದ ಯೋಜನೆಗಾಗಿ ಅರ್ಜಿ ಹಾಕಬೇಕು ಎಂದುಕೊಂಡಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ.
ಈಗ ಹೊಸದಾಗಿ ಅರ್ಜಿ ಸಲ್ಲಿಸುತ್ತಿರುವವರು ಸರ್ಕಾರಕ್ಕೆ ಟ್ಯಾಕ್ಸ್ ಪಾವತಿ ಮಾಡದೆ ಇರುವವರಾದರೆ ಆಗಸ್ಟ್ ನಲ್ಲೇ ಹೊಸ ರೇಷನ್ ಕಾರ್ಡ್ ಸಿಗಲಿದ್ದು, ಆಗಸ್ಟ್ ಇಂದಲೇ ಅನ್ನಭಾಗ್ಯ ಯೋಜನೆಯ ಫಲ ಪಡೆಯಬಹುದು. ಇದು ನಿಜವೇ ಎಂದು ತಿಳಿಯಲು ಆಗಸ್ಟ್ ವರೆಗು ಕಾಯಬೇಕಿದೆ. ಇನ್ನು ರೇಷನ್ ಕಾರ್ಡ್ ಇಲ್ಲದೆ, ಅನ್ನಭಾಗ್ಯ ಯೋಜನೆಯ ಸೌಲಭ್ಯವಂತು ಸಿಗುವುದಿಲ್ಲ. ಹಾಗಾಗಿ ರೇಷನ್ ಕಾರ್ಡ್ ಮಾಡಿಸುವ ಯೋಜನೆ ಮುಂದುಡುತ್ತಿದ್ದರೆ ಈಗಲೇ ಮಾಡಿಸಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.