BPL ಕಾರ್ಡ್ ಇದ್ದವರಿಗೆ ದೊಡ್ಡ ಶಾ.ಕ್ ಕೊಟ್ಟ ಸರ್ಕಾರ

 | 
Nd

ರಾಜ್ಯ ಸರ್ಕಾರ ಅನರ್ಹರನ್ನು ಗುರುತಿಸಿ ಅವರನ್ನು ಕೈಬಿಡಲು ಮುಂದಾಗಿದೆ. ಅನರ್ಹರನ್ನು ಪಟ್ಟಿಯಿಂದ ಕೈ ಬಿಟ್ಟರೆ, ನಿಜವಾಗಿಯೂ ಬಡತನ ಎದುರಿಸುತ್ತಿರುವ ಕುಟುಂಬಕ್ಕೆ ಅನುಕೂಲ ಆಗಲಿದೆ ಎಂಬುವುದು ಸರ್ಕಾರದ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ.ಬಿಪಿಎಲ್ ಕಾರ್ಡ್‌‌ದಾರರಿಗೆ ಬಿಗ್‌ ಶಾಕ್‌ ಕೊಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅರ್ಹತೆ ಇಲ್ಲದಿದ್ದರೂ ಹಲವರು ಬಿಪಿಎಲ್​ ಕಾರ್ಡ್ ಬಳಕೆ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. 

ಹೀಗಾಗಿ BPL ಕಾರ್ಡ್ ಬಳಕೆದಾರರ ಆರ್ಥಿಕ ಸ್ಥಿತಿ ಬಗ್ಗೆ ಸರ್ವೇ ಮಾಡೋದಕ್ಕೆ ಆಹಾರ ಇಲಾಖೆ ಮುಂದಾಗಿದೆ.
6 ಮಾನದಂಡದ ಆಧಾರದ ಮೇಲೆ ಸಮೀಕ್ಷೆ ಕಾರ್ಯ ನಡೆಯಲಿದ್ದು, ಇದರ ವ್ಯಾಪ್ತಿಗೆ ಬಂದವರ BPL ಕಾರ್ಡ್ ರದ್ದು ಮಾಡಲಿದ್ದಾರೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಕಾರ್ಡ್​​ಗಳು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅನ್ನಭಾಗ್ಯ ಸೇರಿದಂತೆ ಬಿಪಿಎಲ್ ಕಾರ್ಡ್​​ಗಳಿಗೆ ಸಿಗುವ ಸೌಲಭ್ಯಗಳನ್ನು ಅರ್ಹತೆ ಇಲ್ಲದಿದ್ದರೂ ಸಹ ಪಡೆದುಕೊಳ್ಳುತ್ತಿರುವ ಕಾರಣ ರಾಜ್ಯ ಸರ್ಕಾರ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡಲು ಮುಂದಾಗಿದೆ. 

ಈ ಹಿಂದೆಯೂ ಸಹ ದಿವಂಗತ ಮಾಜಿ ಸಚಿವ ಉಮೇಶ್ ಕತ್ತಿ ಅವರು ಆಹಾರ ಸಚಿವರಾಗಿದ್ದ ಸಂದರ್ಭದಲ್ಲಿ ರೇಷನ್ ಕಾರ್ಡ್​​ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡಲು ಮುಂದಾಗಿದ್ದರು. ಆ ವೇಳೆ ಅಂದು ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಟೀಕೆ ಟಿಪ್ಪಣಿಗಳ ನಡುವೆಯೂ ಬಿಪಿಎಲ್​​ ಕಾರ್ಡ್​ಗಳಿಗೆ ಅನರ್ಹರಾಗಿದ್ದ ಡಿಲೀಟ್​ ಮಾಡುವ ಕೆಲಸ ಆಗಿತ್ತು. ಸುಮಾರು 4 ಲಕ್ಷದ 16 ಸಾವಿರ ಜನರ ಬಿಪಿಎಲ್ ಕಾರ್ಡ್​​ಗಳನ್ನು ಅಂದು ಸರ್ಕಾರ ರದ್ದು ಮಾಡಿತ್ತು.

ಬಿಪಿಎಲ್​​ ಕಾರ್ಡ್​ ಅನ್ನು ಸರ್ಕಾರ ನಿಗದಿ ಮಾಡಿರುವ 6 ಮಾನದಂಡಗಳ ಮೇಲೆ ಸರ್ವೆ ಮಾಡಲು ಇಲಾಖೆ ಮುಂದಾಗಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿರುವ ಜನಸಂಖ್ಯೆಯ ಆಧಾರದ ಮೇರೆಗೆ ಇಂತಿಷ್ಟು ಕಾರ್ಡ್​ಗಳನ್ನು ಮಾತ್ರ ನೀಡಬೇಕು ಎಂಬ ಮಿತಿಯನ್ನು ಹಾಕಿದೆ. ಆದರೆ ಈಗಾಗಲೇ ನಿಗದಿತ ಮಿತಿಗೂ ಅಧಿಕವಾಗಿ ಬಿಪಿಎಲ್ ಕಾರ್ಡ್​​ಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಮಿತಿ ಜಾಸ್ತಿ ಆದರೂ ಕೂಡ ಸದ್ಯ ಮೂರು ಲಕ್ಷ ಅರ್ಜಿಗಳು ಹೊಸ ರೇಷನ್ ಕಾರ್ಡ್​​ಗಾಗಿ ಬಂದಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನರ್ಹರನ್ನು ಗುರುತಿಸಿ ಅವರನ್ನು ಕೈಬಿಡಲು ಮುಂದಾಗಿದೆ. ಅನರ್ಹರನ್ನು ಪಟ್ಟಿಯಿಂದ ಕೈ ಬಿಟ್ಟರೆ, ನಿಜವಾಗಿಯೂ ಬಡತನ ಎದುರಿಸುತ್ತಿರುವ ಕುಟುಂಬಕ್ಕೆ ಅನುಕೂಲ ಆಗಲಿದೆ ಎಂಬುವುದು ಸರ್ಕಾರದ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಮೂಲಕ ಸರ್ವೆಯನ್ನು ಮಾಡಲು ಮುಂದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.