ಮಂಗಳೂರಿನಲ್ಲಿ ಅಜ್ಜಿಯ ಹುಲಿ ಕುಣಿತ, ನೆರೆದಿದ್ದ ಪ್ರೇಕ್ಷಕರಿಂದ ಚಪ್ಪಾಳೆಯೋ ಚಪ್ಪಾಳೆ
ಉತ್ಸಾಹ ಒಂದಿದ್ರೆ ಏನ್ ಬೇಕಿದ್ರೂ ಮಾಡಬಹುದು! ಈ ಮಾತಿಗೆ ಈ ಅಜ್ಜಿಯೇ ತಾಜಾ ಉದಾಹರಣೆ ನೋಡ್ರೀ! ವಯಸ್ಸು 70 ದಾಟಿದ್ರೂ ಸಹ ಈ ವೃದ್ಧೆ ಯುವಕ ಯುವತಿಯರೂ ನಾಚುವಂತೆ ಹುಲಿ ಕುಣ ಮಾಡಿ ಮಿಂಚಿದ್ದಾರೆ ಬರೋಬ್ಬರಿ 72 ವಯಸ್ಸಿನ ಸವಿತಾ ಕಾಮತ್ ಅವರೇ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸುತ್ತಿರುವವರು.
ಮಂಗಳೂರಿನ ಉಚ್ಚಿಲ ದಸರಾದಲ್ಲಿ ಆಯೋಜಿಸಿದ್ದ ಮಹಿಳೆಯರಿಗಾಗಿ ಹುಲಿ ಕುಣಿತದ ಸ್ಪರ್ಧೆಯಲ್ಲಿ 18ರ ಯುವತಿಗಿಂತ ಬಲು ಗಟ್ಟಿಗಿತ್ತಿ ಸವಿತಾ ಕಾಮತ್ ಅವರು ಹುಲಿ ಕುಣಿತ ಮಾಡಿ ಅಚ್ಚರಿ ಮೂಡಿಸಿದ್ದಾರೆ.ಸದ್ಯ ಈ ವಿಡಿಯೋ ಭಾರೀ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನವರಾತ್ರಿ ಬಂತೆಂದರೆ ಸಾಕು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿವೇಷದ್ದೇ ಗದ್ದಲ. ಹಿಂದೆಲ್ಲ ಹುಲಿವೇಷ ಎಂದರೆ ಕರಾವಳಿ ಭಾಗ ಹೊರತುಪಡಿಸಿದರೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಯಾವಾಗ ಉಳಿದವರು ಕಂಡಂತೆ, ಗರುಡಗಮನ ವೃಷಭವಾಹನ ಮೊದಲಾದ ಸಿನೆಮಾಗಳಲ್ಲಿ ಹುಲಿವೇಷವನ್ನು ಧಾರಾಳವಾಗಿ ತೋರಿಸಿದರೋ ಆವರೆಗೂ ಉಡುಪಿ ಕೃಷ್ಣ ಜನ್ಮಾಷ್ಟಮಿ, ಮಂಗಳೂರು ದಸರಾಗಳಲ್ಲಿ ಪ್ರಸಿದ್ಧವಾಗಿದ್ದ ಪಿಲಿನಲಿಕೆ ರಾಜ್ಯದುದ್ದಗಲಕ್ಕೂ ಚಿರಪರಿಚಿತವಾಯಿತು.
ಹುಲಿನರ್ತನ ಬೀಟ್, ಸ್ಟೆಪ್ ಗಳೆಲ್ಲ ಎಲ್ಲರಿಗೂ ಕರಗತವಾಯಿತು.ಇಲ್ಲಿನ ಜನರಿಗೆ ಯಕ್ಷಗಾನ, ಭೂತಾರಾಧನೆ, ಕಂಬಳಗಳಿಗಿರುವಷ್ಟೇ ಒಲವು ಹುಲಿವೇಷದ ಬಗೆಗೂ ಇದೆ.. . ಟೆಟ್ಟೆರೆಟ್ಟೆ….. ಎಂಬ ಸದ್ದು ಕೇಳಿದರೆ ಚಿಣ್ಣರ ಕಾಲುಗಳು ಚುರುಕಾಗುತ್ತವೆ. ಹಿರಿಯ ನಾಗರಿಕರ ಮನಸ್ಸೂ ತಂತಾನೇ ಕುಣಿಯುತ್ತವೆ. ಅದರಂತೆ ಸವಿತಾ ಕಾಮತ್ ಅವರ ನೃತ್ಯಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.