ಹಣಕ್ಕಾಗಿ ಕಾದು ಕುಳಿತ್ತಿದ್ದ ಮಹಿಳೆಯರ ಖಾತೆಗೆ ಬಿದ್ದಿಲ್ಲ ಗೃಹಲಕ್ಷ್ಮಿ, ಯಾಕೆ ಗೊತ್ತಾ
ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗಿದೆ. ಈಗಾಗಲೇ ಫಲಾನುಭವಿಗಳ ಖಾತೆಗೆ 2000 ರೂ. ಹಣ ಜಮೆ ಮಾಡಲಾಗುತ್ತಿದೆ. ನೀವು ಕೂಡ ಅರ್ಜಿ ಸಲ್ಲಿಸಿದ್ದು, ಇನ್ನೂ ಹಣ ಬಂದಿಲ್ಲ ಎಂದಾದರೆ, ಒಮ್ಮೆ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ. ನಿಮ್ಮ ಗೃಹಲಕ್ಷ್ಮಿ ನೋಂದಣಿ ಯಶಸ್ವಿಯಾಗಿದೆಯೇ ಎಂದು ಆನ್‌ಲೈನ್‌ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಕರ್ನಾಟಕ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಮನೆಯೊಡತಿಗೆ ಪ್ರತಿತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಇದಾದ ಬಳಿಕ ಈ ಯೋಜನೆಗೆ ನೋಂದಾಯಿಸಿಕೊಂಡಿರುವ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂಪಾಯಿ ಜಮಾ ಆಗುತ್ತಿದೆ.
ಲಕ್ಷಾಂತರ ಜನರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿರುವುದರಿಂದ ಈ ನೋಂದಣಿ ಯಶಸ್ವಿಯಾಗಿದೆಯೇ, ಇನ್ನೂ ಪ್ರೊಸೆಸ್‌ನಲ್ಲಿದೆಯೇ ಇತ್ಯಾದಿ ಸಂದೇಹಗಳು ಸಾಕಷ್ಟು ಜನರಲ್ಲಿ ಇರುತ್ತದೆ.
ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಿತಿ ಪರಿಶೀಲನೆ ಮಾಡುವ ಮೂಲಕ ಇಂದು ನಿಮ್ಮ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗುವುದೇ ಎಂದು ಖಚಿತಪಡಿಸಿಕೊಳ್ಳಬಹುದು.
ಎಲ್ಲಾದರೂ ಅರ್ಜಿ ಸಲ್ಲಿಕೆ ತಪ್ಪಾಗಿದ್ದಲ್ಲಿ ಅಥವಾ ಇನ್ನೂ ಪ್ರಕ್ರಿಯೆ ಆಗದೆ ಇದ್ದರೆ ಇಂದು ನಿಮ್ಮ ಖಾತೆಗೆ 2 ಸಾವಿರ ರೂಪಾಯಿ ದೊರಕದು. ಸುಮಾರು 50 ಲಕ್ಷ ಜನರ ಬ್ಯಾಂಕ್ ಖಾತೆಗಳಿಗೆ ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರಕಿದ ತಕ್ಷಣವೇ 2 ಸಾವಿರ ಹಣ ಜಮಾ ಆಗಲು ಆರಂಭವಾಗಲಿದೆ. ಈ ಯೋಜನೆಗೆ ನೋಂದಾಯಿಸಿದ ಮಹಿಳೆಯರು ತಮ್ಮ ಮೊಬೈಲ್‌ನಲ್ಲಿ ಠಣ್ ಠಣ್ ಎಂಬ ಎಸ್‌ಎಂಎಸ್ ನೋಟಿಫಿಕೇಷನ್ ಸದ್ದು ಕೇಳಿದರೆ ಪರಿಶೀಲಿಸಲು ಮರೆಯಬೇಡಿ.
ಏಕೆಂದರೆ ಈಗಾಗಲೇ ನೋಂದಣಿ ಮಾಡಿಕೊಂಡ 17 ಲಕ್ಷ ಮಹಿಳೆಯರು ಹಣ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಅದಕ್ಕೆ ಕಾರಣ ರೇಷನ್ ಕಾರ್ಡ್ ಅಪ್ಡೇಟ್ ಆಗದೆ ಇರುವುದು ಆಗಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಹಾಗೆಯೇ ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುವುದಕ್ಕೂ ರೇಷನ್ ಕಾರ್ಡ್ ಅಪ್ಡೇಟ್ ಆಗಿರಬೇಕು. ಹಾಗಾಗಿ ನೀವು ಕೂಡ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಂಡು ಈ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ನಮ್ಮ ರಾಜ್ಯದ ಆಹಾರ ಮತ್ತು ನಾಗರೀಕ ಸಚಿವಾಲಯವು ರೇಷನ್ ಕಾರ್ಡ್ ತಿದ್ದುಪಡಿ , ಅಂದರೆ ಹೊಸ ಸದಸ್ಯರ ಹೆಸರು ಸೇರಿಸುವುದು, ಹಳೆಯ ಹೆಸರುಗಳಲ್ಲಿ ಬದಲಾವಣೆ ಮಾಡುವುದು ಈ ಎಲ್ಲಾ ಕಾರ್ಯಗಳನ್ನು ಮಾಡುವ ತಿದ್ದುಪಡಿ ಪ್ರಕ್ರಿಯೆಯನ್ನು ಸಧ್ಯಕ್ಕೆ ನಿಲ್ಲಿಸಿತ್ತು. ಪ್ರಸ್ತುತ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕು ಎಂದುಕೊಂಡಿದ್ದರೆ ಕರ್ನಾಟಕ ಒನ್, ಬೆಂಗಳೂರು ಒನ್ , ಬಾಪೂಜಿ ಸೇವಾ ಕೇಂದ್ರ ಇಲ್ಲಿ ಹೋಗಿ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.