ಇಸ್ರೇಲ್ ಕೆಣಕಲು ಹೋಗಿ ಬಿಲ ಸೇರಿದ ಹಮಾಸ್
ಗಾಜಾಪಟ್ಟಿಯಲ್ಲಿ ಬೀಡು ಬಿಟ್ಟಿರುವ ಹಮಾಸ್ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಪಣತೊಟ್ಟಿರುವ ಇಸ್ರೇಲ್ ಉತ್ತರ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ ಜನರನ್ನು 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದ್ದು, ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ.
ಸರಿಸುಮಾರು 1.1 ಮಿಲಿಯನ್ ಪ್ಯಾಲೆಸ್ಟೀನಿಯನ್ನರು ವಾಡಿ ಗಾಜಾದ ಉತ್ತರದಲ್ಲಿ ನೆಲೆಸಿದ್ದಾರೆ, ಇವರ ಸ್ಥಳಾಂತರಕ್ಕೆ ಇಸ್ರೇಲ್ ಆದೇಶಿಸಿದೆ. ಇಸ್ರೇಲ್ ಯೋಧರು ಗಾಜಾದ ನಿವಾಸಿಗಳ ವೈಯಕ್ತಿಕ ಸುರಕ್ಷತೆಗೆ ಒತ್ತು ನೀಡಿದ್ದು, ಹಮಾಸ್ ಭಯೋತ್ಪಾದಕರು ಅವರನ್ನು ಮಾನವ ಗುರಾಣಿಗಳಾಗಿ ಬಳಸುವ ಸಾಧ್ಯತೆ ಇರುವುದರಿಂದ ಸ್ಥಳದಿಂದ ತೆರಳುವಂತೆ ಒತ್ತಾಯಿಸಿದೆ.ಆದರೆ, ಇಸ್ರೇಲ್ನ ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ.
ನಾವು ತುಂಬಾ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಾಗಿದ್ದೇವೆ. ಆ ನಿಟ್ಟಿನಲ್ಲಿ ಯುದ್ಧವನ್ನು ಮುಂದುವರಿಸುತ್ತೇವೆ. ನಮ್ಮ ಬಳಿಯೂ ಹೋರಾಟಗಾರರು ಮತ್ತು ಬೆಂಬಲಿಗರಿದ್ದಾರೆ. ಇಸ್ರೇಲ್ ಬೆದರಿಕೆಯನ್ನು, ಪಲಾಯನಗೊಳ್ಳುವಂತೆ ನೀಡುತ್ತಿರುವ ಆದೇಶವನ್ನು ನಾವು ತಿರಸ್ಕರಿಸುತ್ತಿದ್ದೇವೆಂದು ಹೇಳಿದೆ.
ಈ ನಡುವೆ ಗಡುವ ನೀಡಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ನ ಶಸ್ತ್ರಸಜ್ಜಿತ ವಾಹನಗಳು, ಬಂಕರ್‌ಗಳು ಗಾಜಾ ಗಡಿಯತ್ತ ಮುನ್ನುಗ್ಗುತ್ತಿದ್ದು, ಕೆಲವೇ ಗಂಟೆಯಲ್ಲಿ ಗಾಜಾಪಟ್ಟಿ ಮೇಲೆ ಪೂರ್ಣ ಪ್ರಮಾಣದ ದಾಳಿ ಆರಂಭಿಸಲಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಗಾಜಾ ನಗರದಲ್ಲಿ ಹಮಾಸ್ ಉಗ್ರರು ಜನರ ಮನೆಗಳಲ್ಲಿ, ಗುಹೆಗಳಲ್ಲಿ, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಇಸ್ರೇಲ್‌ಗೆ ಲಭ್ಯವಾಗಿದೆ.
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳನ್ನು ಇಟ್ಟುಕೊಂಡಿರುವ ಹಮಾಸ್ ಉಗ್ರರು ಎಂದಿಗೂ ತಲೆನೋವು ಎಂಬುದು ಇಸ್ರೇಲ್‌ಗೆ ಗೊತ್ತಿದೆ. ಅದರಲ್ಲೂ, ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರು ಸಾವಿರಾರು ಜನರನ್ನು ಕೊಂದಿದ್ದಾರೆ. ಹಾಗಾಗಿ, ಗಾಜಾ ನಗರದ ಮೇಲೆ ಪೂರ್ಣಪ್ರಮಾಣದ ದಾಳಿ ಮಾಡುವ ಮೂಲಕ ಇಡೀ ನಗರವನ್ನು, ಹಮಾಸ್ ಉಗ್ರರನ್ನು ನಾಶಗೊಳಿಸಬೇಕು ಎಂಬುದು ಇಸ್ರೇಲ್ ಉದ್ದೇಶವಾಗಿದೆ.
ಹಾಗಾಗಿಯೇ, ನೂರಾರು ಬಂಕರ್‌ಗಳನ್ನು, ವಾಹನಗಳನ್ನು ಗಾಜಾ ನಗರದತ್ತ ಸಾಗಿಸುತ್ತಿದೆ ಎಂದು ತಿಳಿದುಬಂದಿದೆ.ಹಾಗಾಗಿ ಇಸ್ರೇಲ್ ಯೋಧರ ಸರಣಿ ದಾಳಿ ಮುಂದುವರಿದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.