ಸಂಗೀತ ಮುಖ ನೋಡುವುದಕ್ಕೂ ಇಷ್ಟ ಇಲ್ಲ, ಕಿಚ್ಚನ ಮುಂದೆ ಕಾರ್ತಿಕ್ ರುದ್ರನರ್ತನ

 | 
ಪತತ

ಬಿಗ್ ಬಾಸ್ ಕನ್ನಡ ಸೀಸನ್ 10 ಈಗಾಗಲೇ ಹತ್ತು ವಾರಗಳನ್ನು ಪೂರೈಸಿದೆ. ಈ ವಾರದ ಕಥೆ ಕಿಚ್ಚನ ಜೊತೆ ಮುಗಿದು ಸೂಪರ್ ಸಂಡೆ ಕ್ಷಣಗಣನೆ ಶುರುವಾಗಿದೆ. ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳಿಗೂ ಕೂಡ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಎಲ್ಲರೂ ಎಚ್ಚೆತ್ತುಕೊಂಡು ಆಟವನ್ನು ಆಡಬೇಕು ಎಂದು ಸಹ ಹೇಳಿದ್ದಾರೆ.

ಸದ್ಯ 70ನೇ ದಿನಕ್ಕೆ ಬಿಗ್ ಬಾಸ್ ಹೊಸ ಸೀಸನ್ ಕಾಲಿಡುತ್ತಿದ್ದು ಎಲ್ಲರೂ ಕೂಡ ತುಂಬಾ ಎಚ್ಚರಿಕೆಯಿಂದ ಸೇಫ್ ಆಗಿ ಆಟವನ್ನು ಆಡಬೇಕು ಎಂದು ಅಂದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ವಿನಯ್ ಹಾಗೂ ಕಾರ್ತಿಕ್ ನಡುವೆ ಇದ್ದ ಮನಸ್ತಾಪಗಳು ದೂರವಾಗಿ ಗೆಳೆತನ ಶುರುವಾಗುತ್ತಿದೆ. ಬಿಗ್ ಬಾಸ್ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಟಾಸ್ಕ್ ವೇಳೆ , ವಿನಯ್ ಪರವಾಗಿ ಮಾತನಾಡಿದ್ದಕ್ಕೆ ಸಂಗೀತಾ, ಪ್ರತಾಪ್ ಬಳಿ ಹೋಗಿ ವಿನಯ್ ಟೀಮ್ ಕಡೆ ಕಾರ್ತಿಕ್ ಬಕೆಟ್ ಹಿಡಿಯುತ್ತಾ ಇದ್ದಾನೆ ಎಂದಿದ್ದರು.

ಸಂಗೀತಾ ಮಾತು ಹೇಗೋ ಕಾರ್ತಿಕ್ ಕಿವಿಗೆ ಬಿದ್ದಂತೆ ಕಾಣಿಸುತ್ತಿದೆ. ಆ ಕೋಪವನ್ನು ಸುದೀಪ್ ಮುಂದೆಯೇ ಹೊರ ಹಾಕಿದ್ದಾರೆ. ಸುದೀಪ್ ಎಲ್ಲಾ ಸ್ಪರ್ಧಿಗಳಿಗೂ ಕೂಡ ಒಂದು ಮಡಿಕೆ ಒಡೆದು ತಮ್ಮ ಕೋಪವನ್ನು ತಣಿಸಿಕೊಳ್ಳುವ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ವೇಳೆ ಕಾರ್ತಿಕ್‌ಗೆ ಸಂಗೀತಾ ಮೇಲೆ ಇರುವ ಕೋಪ ಹೊರಗೆ ಬಂದಿದೆ. ಇನ್ಮುಂದೆ ಸಂಗೀತಾ ಜೊತೆಗೆ ಇರೋದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. 

ಈ ಮೂಲಕ ಮತ್ತೆ ಸಂಗೀತಾ ಹಾಗೂ ಕಾರ್ತಿಕ್ ನಡುವಿನ ಸ್ನೇಹದಲ್ಲಿ ಬಿರುಕು ಮೂಡುತ್ತಾ? ಎಂಬ ಪ್ರಶ್ನೆ ವೀಕ್ಷಕರಲ್ಲಿ ಸಹಜವಾಗಿ ಹುಟ್ಟಿಕೊಂಡಿದೆ. ಕಾರ್ತಿಕ್ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸಂಗೀತ ಮೇಲಿದ್ದ ಕೋಪ ಹೊರಗೆ ಹಾಕಿದ್ದಾರೆ. ನಾನು ಹಾಗೂ ವಿನಯ್ ಇಬ್ಬರೂ ಕೂಡ ತುಂಬಾ ಚೆನ್ನಾಗಿಯೇ ಇದ್ದೇವೆ ಎಂದು ಹೇಳಿದ್ದಾರೆ. ನಾನು ವಿನಯ್ ಯಾವಾಗಲೂ ಒಂದೇ ತರ ಇದ್ದೆವು. 

ಆದರೆ ಇಲ್ಲಿ ಸಂಗೀತ ಬಕೆಟ್ ಹಿಡಿಯುತ್ತಾ ಇದ್ದಾನೆ ಎಂಬ ಮಾತು ಹೇಳಿರುವುದು ಸರಿಯಾಗಿಲ್ಲ ಎಂದು ಹೇಳುವ ಮೂಲಕ ಮಡಿಕೆಗೆ ಸಂಗೀತಾ ಫೋಟೋವನ್ನು ಅಂಟಿಸಿ ಜೋರಾಗಿ ಹೊಡೆದಿದ್ದಾರೆ. ಕಾರ್ತಿಕ್ ಇನ್ಮುಂದೆ ನಾನು ಸಂಗೀತಾ ಜೊತೆಗೆ ಇರುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಕೆಲವೊಬ್ಬರು ಹೇಳಿದ್ದರು ಸಂಗೀತಾನ ಕಾರ್ತಿಕ್‌ನಿಂದ ಮೈನಸ್ ಮಾಡಿದರೆ ಕಾರ್ತಿಕ್ ಝೀರೋ ಎಂದು. ಅದರಂತೆ ಸಂಗೀತಾನ ಮೈನಸ್ ಮಾಡಿದ್ದೀನಿ. 

ಝೀರೋ ಎನ್ನುವುದನ್ನು ಪ್ರೂವ್ ಮಾಡಿ ಎಂದಿದ್ದಾರೆ. ಸಂಗೀತಾ ಆಡಿದ ಒಂದೇ ಒಂದು ಮಾತು ಇಬ್ಬರ ನಡುವೆ ಸ್ನೇಹ ಕಳೆದು ಹಾಕುವ ಮಟ್ಟಕ್ಕೆ ಹೋಗಿದೆ. ಇದರಿಂದ ವಿನಯ್ ಗೌಡ ಸಕತ್ ಖುಷಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.