Love ಮಾಡುವಾಗ ಏನೂ ಗೊತ್ತಾಗಿಲ್ಲ; ಆದರೆ ಒಂದೇ ರೂಮ್ ಅಲ್ಲಿ ಇದ್ದಾಗ ಏನಂತ ಅರ್ಥ ಆಯ್ತು

 | 
Je

ಕನ್ನಡದ ರ್‍ಯಾಪರ್, ಬಿಗ್‌ಬಾಸ್‌ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗಷ್ಟೇ ವಿಚ್ಛೇದನ ಪಡೆದಿದ್ದರು. ಇನ್ನು ಇವರಿಬ್ಬರು ವಿಚ್ಛೇದನ ಪಡೆಯುವ ವೇಳೆ ಫ್ಯಾಮಿಲಿ ಕೋರ್ಟ್‌ಗೆ ಜೊತೆಗೆ ಕೈ ಕೈ ಹಿಡಿದುಕೊಂಡು ಬಂದಿದ್ದು, ಈ ಬಗ್ಗೆ ಇದೀಗ ಚಂದನ್‌ ಶೆಟ್ಟಿಯವರು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಲವ್ವು ಬೇರೆ ಮದುವೆ ಬೇರೆ ಎಂದಿದ್ದಾರೆ.

ಇನ್ನೂ ವಿಚ್ಛೇದನದ ಬಳಿಕ ಸುದ್ದಿಗೋಷ್ಠಿಯಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಚಂದನ್ ಶೆಟ್ಟಿ ಮಾತನಾಡಿದ್ದು, ನಾವು ಕಾನೂನಿನ ಪ್ರಕಾರವಾಗಿ ವಿಚ್ಛೇದನ ಪಡೆದಿದ್ದೇವೆ. ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಸುಮ್ಮನೆ ಇಲ್ಲದಿದ್ದನ್ನು ಸೃಷ್ಟಿ ಮಾಡಬೇಡಿ. ನಮ್ಮ ಖಾಸಗಿ ವಿಚಾರವನ್ನು ನಮ್ಮಲ್ಲೇ ಇರಲು ಬಿಡಿ,ಎಂದು ಹೇಳಿಕೊಂಡಿದ್ದರು.

ನನ್‌ ಕೌಟುಂಬಿಕ ನಿರ್ಧಾರದ ಬಗ್ಗೆ ಸದ್ಯ ನನಗೆ ಆಲೋಚನೆ ಇಲ್ಲ. ಹಳೆಯ ಘಟನೆಗಳಿಂದ ಆಚೆ ಬರುತ್ತಿದ್ದೇನೆ. ಇನ್ನೂ ಮನಸ್ಸು ತಿಳಿ ಆಗಬೇಕು ಎಂದರೆ ಸಮಯ ಬೇಕು. ಸದ್ಯಕ್ಕೆ ನಾನು ಯಾರನ್ನ ನಂಬಬೇಕು? ಯಾರನ್ನ ನಂಬಬಾರದು ಎಂಬ ಗೊಂದಲದಲ್ಲಿದ್ದೇನೆ. ಸಿನಿಮಾ ಮಾಡಿದ್ದೇನೆ. ಭವಿಷ್ಯ ಏನು ಎಂದು 19ಕ್ಕೆ ಗೊತ್ತಾಗತ್ತೆ. ಮುಂದೆ ಸಿನಿಮಾ ಮಾಡಲಾ? ಹಾಡು ಮಾಡಲಾ? ಎಂಬ ಯೋಚನೆ ಇದೆ ಎಂದರು.

ನನ್ನ ಕರಿಯರ್‌ನಲ್ಲಿ ಹಲವಾರು ಅವಮಾನಗಳನ್ನು ಎದುರಿಸಿದ್ದೇನೆ. ನನ್ನ ಹಾಡುಗಳು ಬ್ಯಾನ್‌ ಆಗಿತ್ತು. ಆಗ ಬೇಜರಾಗಿತ್ತು. ಆದರೆ ಅದೆಲ್ಲ ಹೊಸದಾಗಿ ಇತ್ತು. ನನಗೆ ಗೊತ್ತಿಲ್ಲದೇ ಆದ ತಪ್ಪು ಆಗಿತ್ತು. ಟ್ರೋಲ್‌ ಕೂಡ ಆಗಿತ್ತು. ಇನ್ನು ನಮ್ಮ ಉದ್ಯಮದಲ್ಲಿ ಸಂಗೀತ ನಿರ್ದೇಶಕರಿಗೂ ಕಷ್ಟವಾಗುತ್ತಿದೆ. ಹಾಗೇ ಫ್ಯಾನ್ಸ್‌ ಸಹಕಾರ ಇದೆ. ಆ ನಂಬಿಕೆಯಲ್ಲಿ ನಟನೆ ಮೂಲಕ ಬರುತ್ತಿದ್ದೇನೆ ಎಂದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.