ನಾಗವಲ್ಲಿ ಸಮಸ್ಯೆ ನನಗೂ ಎದುರಾಗಿತ್ತು, ಸೌಂದರ್ಯ ವಿಷ್ಣುವರ್ಧನ್ ಸಾ ವಿನ ವಿಚಾರ ಹೇಳಿಕೊಂಡ ಗುರುಕಿರಣ್
Mar 23, 2025, 19:18 IST
|

ಆದರೆ, ವಿಧಿಯಾಟವೆಂದರೆ ಈ ಸಿನಿಮಾ ಬಿಡುಗಡೆ ಹೊತ್ತಲ್ಲೇ ಅವರು ಅಸಹಜ ಸಾವನ್ನಪ್ಪಿದ್ದರು. ಈ ವೇಳೆ ಅವರ ನಾಗವಲ್ಲಿ ಪಾತ್ರದ ಬಗ್ಗೆ ಹಲವು ವದಂತಿಗಳು ಕೂಡ ಇದ್ದವು. ಇವರ ಸಾವಿನ ನಂತರವೂ ಭಯ ಹಲವರಲ್ಲಿ ಆವರಿಸಿತ್ತು. ಈ ಸಿನಿಮಾದ ಸಂಗೀತ ನಿರ್ದೇಶಕರಿಗೂ ಭಯಾನಕ ಅನುಭವವಾಗಿತ್ತು. ಅದೇನು ಎಂಬುದನ್ನು ಅವರೇ ಈಗ ರಿವೀಲ್ ಮಾಡಿದ್ದಾರೆ.
ಸೌಂದರ್ಯ ಅವರು ನಾಗವಲ್ಲಿ ಪಾತ್ರದ ಶೂಟಿಂಗ್ ಮುಗಿಸಿದ್ದರು. ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗುವ ಹೊತ್ತಲ್ಲೇ ಅವರ ಹಠಾತ್ ಸಾವನ್ನಪ್ಪಿದ್ದರು. ಈ ಘಟನೆಯಿಂದ ಆಪ್ತಮಿತ್ರ ಚಿತ್ರತಂಡ ಕೂಡ ಹೆದರಿತ್ತು ಎನ್ನಲಾಗಿದೆ. ಇನ್ನು ಗುರುಕಿರಣ್ ಅವರು ಈ ಸಿನಿಮಾದ ಸಂಗೀತ ನಿರ್ದೇಶಕರಾಗಿದ್ದರಿಂದ ಎಡಿಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಸೌಂದರ್ಯ ಅವರ ಸಾವಿನ ನಂತರ ರಾತ್ರಿ ವೇಳೆ ಎಡಿಟಿಂಗ್ ಕೆಲಸಕ್ಕೆ ತುಂಬಾ ಸಮಸ್ಯೆಯಾಗಿತ್ತು. ಏನೋ ಒಂದು ರೀತಿಯ ಭಯ ಕಾಡಲಾರಾಂಭಿಸಿತು ಎಂದು ಗುರುಕಿರಣ್ ಹೇಳಿದ್ದಾರೆ.
ನಾಗವಲ್ಲಿಯಾಗಿ ಸೌಂದರ್ಯ ಅವರನ್ನು ನೋಡುವಾಗ ಒಂದು ರೀತಿಯ ಭಯಾನಕ ಅನುಭವ ಆಗುತ್ತಿತ್ತು. ಈ ಸಿನಿಮಾದ ಎಡಿಟಿಂಗ್ ವೇಳೆ ನಾಗವಲ್ಲಿಯ ನೋಟ ಕಂಡರೆ ತುಂಬಾ ಭಯವಾಗುತ್ತಿತ್ತು. ನಾನೂ ಕೂಡ ಭಯಪಟ್ಟಿದ್ದೆ. ಹಾಗಾಗಿ ರಾತ್ರಿ ವೇಳೆ ಈ ಸಿನಿಮಾ ಎಡಿಟಿಂಗ್ ಸಹವಾಸವೇ ಬೇಡ ಎಂದು ಮಾಡುತ್ತಿರಲಿಲ್ಲ. ಆದರೂ ಆ ಭಯದಿಂದ ಈಚೆ ಬರಲು ಸಾಧ್ಯವಾಗಲಿಲ್ಲ ಎಂದು ಗುರುಕಿರಣ್ ಅನುಭವ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಈ ಸಿನಿಮಾ ಕೂಡ ಭರ್ಜರಿ ಹಿಟ್ ಕಂಡಿತು. ಚಿತ್ರದ ಹಾಡುಗಳು ಕೂಡ ಎವರ್‌ಗ್ರೀನ್ ಆಗಿವೆ. ಆದರೂ ಸೌಂದರ್ಯ ಸಾವಿನ ಬಗ್ಗೆ ಕೇಳಿಬಂದಿದ್ದ ವದಂತಿ ನಿಜವೋ ಸುಳ್ಳೋ ಎಂಬುದಕ್ಕೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023