ಇರಾನ್ ಅಧ್ಯಕ್ಷ ಸಾ ವು; ಇದಕ್ಕೆ ಕಾರಣ ಯಾರು ಗೊ ತ್ತಾ
May 21, 2024, 16:05 IST
|

ಇಸ್ರೇಲ್ & ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿರುವ ಸಮಯದಲ್ಲೇ, ಈ ರೀತಿಯ ಘಟನೆ ನಡೆದಿದೆ. ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಜೊತೆಗೆ ಈ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಅಬ್ದೊಲ್ಲಾಹಿಯಾನ್ & ಇರಾನ್‌ನ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. ನಿನ್ನೆ ಘಟನೆ ನಡೆದಿತ್ತು, ಮೊದಲಿಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಇರುವ ಹೆಲಿಕಾಪ್ಟರ್ ಅಪಘಾತಕ್ಕೆ ತುತ್ತಾಗಿದೆ ಎನ್ನಲಾಗಿತ್ತು.
ಅಜೆರ್‌ಬೈಜಾನ್ ಗಡಿಯ, ಗುಡ್ಡಗಾಡು ಪ್ರದೇಶದಲ್ಲಿ ಘಟನೆಯು ಸಂಭವಿಸಿತ್ತು ಎನ್ನಲಾಗಿತ್ತು.ಹೆಲಿಕಾಪ್ಟರ್ ದುರತಂದ ಸುದ್ದಿ ಕಾಡ್ಗಿಚ್ಚಿನ ರೀತಿ ಹಬ್ಬಿದ್ದು, ಇಡೀ ಜಗತ್ತಿನಾದ್ಯಂತ ಇದೀಗ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಈ ದುರಂತ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುವಂತೆ ಮಾಡಿದೆ. ಇಲ್ಲಿ ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್ ನಿಯಂತ್ರಣ ಘಟಕದ ಸಂಪರ್ಕ ಕಡಿದುಕೊಂಡಿದ್ದು, ವೇಗವಾಗಿ ಭೂಮಿಗೆ ಅಪ್ಪಳಿಸಿದೆ ಎಂದು ಹೇಳಲಾಗಿದೆ.
ಹಾಗೇ ಈ ದುರಂತಕ್ಕೆ ಹೆಲಿಕಾಪ್ಟರ್‌ನ ತಾಂತ್ರಿಕ ದೋಷ ಕಾರಣ ಎನ್ನಲಾಗಿದೆ. ಮತ್ತೊಂದು ಕಡೆ ಇರಾನ್ ದೇಶದಲ್ಲಿ ಈಗ ಹೈಅಲರ್ಟ್ ಘೋಷಣೆ ಮಾಡಲಾಗಿದೆ.ಇನ್ನು ಹೆಲಿಕಾಪ್ಟರ್ ನಾಪತ್ತೆ ಆಗಿರುವ ಗುಡ್ಡ ಗಾಡಿನಲ್ಲಿ ದಟ್ಟ ಮಂಜು ಮಸುಕಿದ್ದು, ಶೋಧ & ರಕ್ಷಣಾ ತಂಡಗಳ ಕಾರ್ಯಾಚರಣೆ ಕಷ್ಟವಾಗುತ್ತಿದೆ ಎನ್ನಲಾಗಿದೆ.
ಹೀಗಿದ್ದರೂ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ಇನ್ನು ಹೆಲಿಕಾಪ್ಟರ್ ಜೋಲ್ಫಾ ವಲಯದಲ್ಲಿ ಅಪಘಾತಕ್ಕೀಡಾಗಿದೆ, ಈ ಬಗ್ಗೆ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ. ಅಜೆರ್‌ಬೈಜಾನ್‌ನ ಅರಾಸ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಡ್ಯಾಂ ಉದ್ಘಾಟನೆಗೆ ರೈಸಿ ಅವರು ಅತಿಥಿಯಾಗಿ ಹೋಗಿದ್ದರು. ಆದ್ರೆ ಇದೇ ಸಮಯದಲ್ಲಿ ಭೀಕರ ದುರಂತ ನಡೆದಿರುವುದು ಪರಿಸ್ಥಿತಿಯನ್ನ ಮತ್ತಷ್ಟು ಆತಂಕಕ್ಕೆ ದೂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025