ಸೌಜನ್ಯಗೆ ನ್ಯಾಯ ಸಿಗುವುದು ಡೌಟ್? ಹಾಗಾದರೆ ಆ ಪಾಪಿಗಳಿಗೆ ಶಿಕ್ಷೆ ಇಲ್ವಾ

 | 
Hg

ಧರ್ಮಸ್ಥಳ: ಸ್ನೇಹಿತರೆ ನಮಸ್ಕಾರ, 'ಅರಳುವ ಮುನ್ನ ಹೆಣ್ಣೆಂಬ ಹೂವನ್ನು ಚಿವುಟಿದ ಕಥೆ' ನಮ್ಮ ಸೌಜನ್ಯಳದ್ದು. ಹೌದು, ಸೌಜನ್ಯ ಎಂಬ ಮುಗ್ಧ ಹೆಣ್ಣುಮಗಳು ದುಷ್ಟರ ಕೈಗೆ ಸಿಕ್ಕಿ ಕೊ ಲೆಯಾದ ಘಟನೆ ಇದೀಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. 

ಸೌಜನ್ಯ ಎಂಬ ಮಹಾ ಶಕ್ತಿ ಇವತ್ತು ಧರ್ಮಸ್ಥಳದ ಸುತ್ತ ಸೂತಕದ ವಾತಾವರಣ ಉಂಟು ಮಾಡಿದೆ. ಇಡೀ ದೇಶಕ್ಕೆ ಪವಿತ್ರ ಜಾಗವಾದ ಧರ್ಮಸ್ಥಳ ಇವತ್ತು ಅಕ್ಷರಶಃ ಧಗಧಗ ಕುದಿಯುತ್ತಿದೆ. ಸುಮಾರು 500 ವರ್ಷಗಳ ಹಳೆಯ ಧರ್ಮಸ್ಥಳ ಕ್ಷೇತ್ರ ಸಾವಿರಾರು ಭಕ್ತರಿಗೆ ಅನ್ನ ಭಾಗ್ಯ ಹಾಗೂ ಉದ್ಯೋಗ ಭಾಗ್ಯ ಕೊಟ್ಟಿದೆ. ಜೊತೆಗೆ ಕುಟುಂಬ ಕಲಹಗಳಿಗೆ ನ್ಯಾಯ ಒದಗಿಸಿದೆ. 

ಇಷ್ಟು ಮಾತ್ರವಲ್ಲದೇ ಪ್ರತಿವರ್ಷ ನೂರಾರು ಭಕ್ತರಿಗೆ ಈ ದೇವಾಲಯದಲ್ಲಿ ಉಚಿತ ಮದುವೆ ಸಮಾರಂಭ ನೀಡಲಾಗುತ್ತದೆ. ಜೊತೆಗೆ ಈ ದೇವಾಲಯದಿಂದ ಸ್ವಸಹಾಯ ಸಂಘದ ಮ‌ೂಲಕ ರಾಜ್ಯದ ಹಲವಾರು ಜಲ್ಲೆಗಳಿಗೆ 16% ಬಡ್ಡಿದರದ ಮೂಲಕ‌ ಸಾಲ ನೀಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಹಲವಾರು ಕೃಷಿ ಉಪಕರಣಗಳನ್ನು ಕೂಡ ಬಾಡಿಗೆಗೆ ನೀಡುತ್ತಾರೆ. 

ಇವತ್ತು ಧರ್ಮಸ್ಥಳ ಎಂಬುವುದು ದೊಡ್ಡ ಸಾಮ್ರಾಜ್ಯವಾಗಿ ಬೆಳೆದಿದೆ‌. ಕೇವಲ ಭಕ್ತರ ಹರಕೆ ಹುಂಡಿ ಅಥವಾ ದಾನದ ಮೂಲಕ ಧರ್ಮಸ್ಥಳ ನಿಂತಿಲ್ಲ. ಧರ್ಮಸ್ಥಳದ ಬ್ಯುಸಿನೆಸ್ ಮೂಲಕ ಕೋಟಿ ಕೋಟಿ ಆದಾಯ ಬರುತ್ತಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜೊತೆಗೆ ಈ‌ ದೇವಾಲಯದ ಬ್ಯುಸಿನೆಸ್ ಬಗ್ಗೆ ಊರಿನ ಗ್ರಾಮಸ್ಥರಿಗೆ ಕೂಡ ಚೆನ್ನಾಗಿ ತಿಳಿದಿದೆ.

ಇನ್ನು ಸೌಜನ್ಯ ಕೇಸಿಗೂ ಧರ್ಮಸ್ಥಳಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುವುದು ಕಾನೂನಿನ ಮೂಲಕ ವ್ಯಕ್ತವಾಗಿದೆ. ಆದರೆ ಸೌಜನ್ಯ ತಾಯಿ ಮಾತ್ರ ಧರ್ಮಸ್ಥಳದ ಹೆಗ್ಗಡೆಯವರ ಹೆಸರು ಹೆಚ್ಚಾಗಿ ಬಳಸುವುದು ಮಾಧ್ಯಮದಲ್ಲಿ ಕಾಣುತ್ತಿದೆ‌. ಇನ್ನು ಸೌಜನ್ಯ ಪರ ಹೋರಾಟ ಮಾಡುವ ತಿಮರೋಡಿ ಅವರು ಹೇಳುವ ಪ್ರಕಾರ ಸೌಜನ್ಯ ಕೇಸಿ ಗೆ ಆ ದೊಡ್ಡ ಮನುಷ್ಯರು ಕಾರಣ ಅಂತ ಹೇಳುತ್ತಿದ್ದಾರೆ.

ಇಲ್ಲಿ ಯಾವುದು ಸತ್ಯ..ಯಾವುದು ಸುಳ್ಳು ಎಂಬುವುದು ಕಾಣುತ್ತಿಲ್ಲ. ಭಾರತೀಯ ತನಿಖಾ ದಳ CBI ಕೂಡ ಸೌಜನ್ಯ ಕೇಸ್ ನಲ್ಲಿ ವಿಫಲವಾಗಿದೆ ಎಂಬುವುದು ಸಂತೋಷ್ ರಾವ್ ಬಿಡುಗಡೆ ಸಮಯದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಒಟ್ಟಾರೆಯಾಗಿ ಸೌಜನ್ಯ ಕೊ ಲೆಯ ಆರೋಪಿ ಮಾತ್ರ ಸಿಗುತ್ತಿಲ್ಲ. ಸಿಗವುದಕ್ಕೆ ಸಾಕ್ಷಿ ಅಂತು ಕಂಡಿತ ಇಲ್ಲ‌. ಧರ್ಮಸ್ಥಳದ ಆ ಮಂಜುನಾಥ ಸ್ವಾಮಿಯೇ ಸೌಜನ್ಯಳಿಗೆ ನ್ಯಾಯ ಕೊಡಬೇಕು ಎಂಬುವುದು ಕನ್ನಡಿಗರ ಮನದಾಳದ ಮಾತು. ಜೈಹಿಂದ್ ಜೈ ಕರ್ನಾಟಕ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.