ಮಡಿಕೇರಿಯ ಗ್ಲಾಸ್ ಬ್ರಿಡ್ಜ್ ನಲ್ಲಿ ಸುಳಿಗೆ ನಡೆಯುತ್ತಿದೆಯಾ? ಇಲ್ಲಿಗೆ ಭೇಟಿ ಕೊಟ್ಟ ಪ್ರವಾಸಿಗರು ಹೇಳಿದ್ದೇನು ಗೊತ್ತಾ

 | 
Hdhd

ಸುಂದರ ಪರಿಸರದ ಮಧ್ಯೆಯಿರುವ ಮಡಿಕೇರಿಯು ಪ್ರವಾಸಿಗರನ್ನು ಕೈಬೀಸಿ ಕರೆಯಲು ಇತ್ತೀಚೆಗೆ ನಾನಾ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಪ್ರಕೃತಿಯ ಸ್ವರ್ಗ ತಾಣವಾದ ಮಡಿಕೇರಿಗೆ ಟೂರ್ ಹೋಗುವವರಿಗಾಗಿ ಇದು ಖುಷಿಯ ಸುದ್ದಿ. ಕಾಫಿ ನಾಡಿನ ಸುಂದರ ಪರಿಸರವನ್ನ ಥ್ರಿಲ್ ಆಗಿ ಎಂಜಾಯ್​ ಮಾಡ್ಬೇಕು ಅಂತಿದ್ದರೆ ನಿಜಕೂ ನಿಮಗೆ ಇದು ಖುಷಿ ಕೊಡುವ ವಿಚಾರವೇ ಸರಿ. 

ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ. ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್... ಇದು ಯಾವುದೋ ವಿದೇಶದ ದೃಶ್ಯವಲ್ಲ... ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರೋದು ನಮ್ಮ ಮಡಿಕೇರಿಯಲ್ಲಿ. ಹೌದು.. ಮಡಿಕೇರಿ ನಗರದಿಂದ 10 ಕಿಲೋ ಮೀಟರ್ ದೂರದ ಉಡೋತ್​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಈ ಗ್ರಾಮದ ವಸಂತ್ ಎಂಬುವವರು ಕಳೆದ ಐದು ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್ ಅನ್ನು ನಿರ್ಮಿಸಿದ್ದಾರೆ.

ಇದು 33 ಎಂಎಂ ದಪ್ಪದ ಗ್ಲಾಸ್ ಅನ್ನ ಬಳಸಲಾಗಿದ್ದು ಒಟ್ಟು 33 ಮೀಟರ್ ಉದ್ದವಿದ್ದು 78 ಅಡಿ ಎತ್ತರ. ಇದು ಕರ್ನಾಟಕದಲ್ಲೇ ಮೊಟ್ಟ ಮೊದಲ ಗಾಜಿನ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಇದೀಗ ಸಾಲು ಸಾಲು ರಜೆ ಬಂದಿರುವುದರಿಂದ ಪಾರ್ಕಿಂಗ್ ಸಮಸ್ಯೆ ಅಲ್ಲಿ ಕಾಡುತ್ತಿದೆ. ಅದರಲ್ಲೂ ಭಾರೀ ಗಾತ್ರದ ಟ್ರಕ್ ಬಂದರಂತೂ ವಾಹನಗಳು ಮುಂದೆ ಹೋಗುವ ಹಾಗಿಲ್ಲ ಹಿಂದೆ ಬರುವ ಹಾಗಿಲ್ಲ ಹಾಗಾಗಿ ಹಲವಾರು ಜನ ಪ್ರವಾಸಕ್ಕೆಂದು ಹೋಗಿ ಪರದಾಡಿದ್ದಾರೆ. 

ಇನ್ನು ಈ ಗ್ಲಾಸ್ ಬ್ರಿಡ್ಜ್ ಗೆ ಭೇಟಿ ಕೊಡುವವರು ತಮ್ಮ ಕಾರನ್ನು ರಸ್ತೆ ಬದಿ ಅಥವಾ ಮತ್ತೊಬ್ಬರ ಮನೆಯಲ್ಲಿ ಪಾರ್ಕಿಂಗ್ ಮಾಡಿದರೂ ಕೂಡ ಪಾರ್ಕಿಂಗ್ ಶುಲ್ಕ ಪಾವತಿಸಲೇಬೇಕು.. ಒಂದು ವೇಳೆ ಪಾವತಿಸದೆ ಇದ್ದರೆ, ಗ್ಲಾಸ್ ಬ್ರಿಡ್ಜ್ ಎಂಟ್ರಿ ನೀಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟ ಘಟನೆ ಇದೀಗ ಬೆಳಕಿನ ಬಂದಿದೆ. 

https://youtu.be/cVajozHEWZg

ಈ ಗ್ಲಾಸ್ ಬ್ರಿಡ್ಜ್ ಗೆ ಬರುವ ಪ್ರವಾಸಿಗರು ಬಸ್ ಅಥವಾ ಆಟೋ ರಿಕ್ಷಾಗಳಲ್ಲಿ ಭೇಟಿ ಕೊಟ್ಟರು ಕೂಡ ಪಾರ್ಕಿಂಗ್ ಶುಲ್ಕ ಪಾವತಿ ಮಾಡಲೇಬೇಕು. ಬಸ್ಸಿನಲ್ಲಿ ಬಂದ ಪ್ರವಾಸಿಗರು ಬಸ್ ಟಿಕೆಟ್ ಅನ್ನು ಕೌಂಟರ್ ಬಳಿ ತೋರಿಸಬೇಕು. ಇಲ್ಲವಾದರೆ ಪಾರ್ಕಿಂಗ್ ಶುಲ್ಕ ಪಾವತಿ ಮಾಡಲೇಬೇಕು. ಇದೀಗ ಇಂತಹ ಅನ್ಯಾಯದ ಬಗ್ಗೆ ಮಂಗಳೂರಿನ ಯುವಕರು ವಿಡಿಯೋ ಮೂಲಕ ಇವರ ಅನ್ಯಾಯವನ್ನು ಬಟ್ಟ ಬಯಲು ಮಾಡಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಸುಳಿಗೆ ಮಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಮಾಹಿತಿ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.