ಸ್ಪಂದನಾ ಮೃ.ತ ದೇಹಕ್ಕೆ ಮೇಕಪ್ ಮಾಡಿದ್ದು‌ ನಿಜಾನಾ, ಸಾ.ವನ್ನಪ್ಪಿದ ಮುಖ ಅಷ್ಟು ಚೆನ್ನಾಗಿ ಕಂಡುಬಂದಿದ್ದು ಹೇಗ್ ಗೊತ್ತಾ

 | 
ಕಿ

ಚಿನ್ನಾರಿ ಮುತ್ತನ ಅಚ್ಚುಮೆಚ್ಚಿನ ಮಡದಿ ಸ್ಪಂದನಾ ಇನ್ನೇನು ನೆನಪು ಮಾತ್ರ. ವಿದೇಶಕ್ಕೆ ಪ್ರವಾಸಕ್ಕಾಗಿ ತೆರಳಿದ್ದ ಸ್ಪಂದನಾ ತಾಯಿನಾಡಿಗೆ ಬಂದಿದ್ದು ಶವವಾಗಿ. ವಿಧಿಯಾಟಕ್ಕೆ ನಟ ವಿಜಯರಾಘವೇಂದ್ರ ಒಬ್ಬೊಂಟಿಯಾಗಿದ್ದಾರೆ. ವಿಜಯರಾಘವೇಂದ್ರ ಅವರ ಪ್ರೀತಿಯ ಪತ್ನಿ ಸ್ಪಂದನಾ ಹೃದಯಾಘಾತದಿಂದ ಬ್ಯಾಂಕಾಕ್‌ ಪ್ರವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ನಗರದ ಮಲ್ಲೇಶ್ವರಂ ನಲ್ಲಿರುವ ಬಿಕೆ ಶಿವರಾಂ ಅವರ ನಿವಾಸದ ಬಳಿ ಸ್ಪಂದನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಡೀ ಕುಟುಂಬದಲ್ಲಿ ಶೋಕ ಸಾಗರವೇ ಮಡುಗಟ್ಟಿದೆ. ಅವರ ಅಂತಿಮ ದರ್ಶನಕ್ಕೆ ಆಪ್ತರು ಆಗಮಿಸುತ್ತಿದ್ದಾರೆ. ಸಾರ್ವಜನಿಕರು ಸಾಲುಗಟ್ಟಿ ನಿಂತು ಸ್ಪಂದನಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. 

ಸ್ಪಂದನಾ ಮೃತದೇಹಕ್ಕೆ ವಿಜಯರಾಘವೇಂದ್ರ ಹಾಗೂ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದರು. ಅಲಂಕಾರವನ್ನು ಪ್ರೀತಿಸುತ್ತಿದ್ದ ಸ್ಪಂದನಾ ಮೃತ ದೇಹಕ್ಕೆ 
ಸುಮಂಗಲಿಯತೆ ಹಣೆಗೆ ಕುಂಕುಮ ಹಚ್ಚಿ ಕೈಗೆ ಬಳೆ ತೊಡಿಸಿ ಮತ್ತೊಮ್ಮೆ ಮಾಂಗಲ್ಯ ಧಾರಣೆ ಮಾಡಿ ಈಡೀಗ ಸಂಪ್ರದಾಯದಂತೆ ಮದುವೆ ಮಾಡಿಸಿ ಮೃತ ದೇಹವನ್ನು ಶೃಂಗಾರ ಮಾಡಿದ್ದಾರೆ. ಹೆಣ್ಣು ಗಂಡನಿಗೆ ಮುಂಚಿತವಾಗಿ ನಿಧನ ಹೊಂದಿದರೆ ಈ ಪದ್ಧತಿಗಳನ್ನು ಸಾಮಾನ್ಯವಾಗಿ ನೆರವೇರಿಸುತ್ತಾರೆ.

ಬುಧವಾರ ಮುಂಜಾನೆಯಿಂದಲೇ ಸ್ಪಂದನಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಗೃಹ ಮಂತ್ರಿ ಜಿ. ಪರಮೇಶ್ವರ್‌ ಸೇರಿದಂತೆ ನಾನಾ ರಾಜಕೀಯ ಗಣ್ಯರು, ಶಿವರಾಜ್‌ ಕುಮಾರ್‌, ಯಶ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌, ಗಿರಿಜಾ ಲೋಕೇಶ್‌ ಸೇರಿದಂತೆ ಚಿತ್ರರಂಗದ ಬಹುತೇಕ ಎಲ್ಲ ನಟ-ನಟಿಯರು ಹಾಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.‌ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.