ಡ್ರೋನ್ ಪ್ರತಾಪ್ ಆಟ ನೋಡಿ ಫಿದಾ ಆದ ಜಗ್ಗೇಶ್, ಹಳೆ ವಿಚಾರ ಮರೆತು ಮೆಚ್ಚಿಕೊಂಡ ಜಗ್ಗಣ್ಣ
ಒಮ್ಮೊಮ್ಮೆ ಮುಗ್ದ ನಿನ್ನೊಮ್ಮೆ ಬಲಿಷ್ಟ ಮತ್ತೊಮ್ಮೆ ಎಲ್ಲವನ್ನೂ ಅರಿತು ಆಡುತ್ತಿರುವ ಚಾಣಕ್ಯ ಬಿಗ್ ಬಾಸ್ ಪ್ರತಾಪ್ ಅವರು ಹೌದು ಬಿಗ್ಬಾಸ್ ಪ್ರಿಯರ ಬಾಯಲ್ಲಿ ಸದ್ಯದ ಮಟ್ಟಿಗೆ ಸದಾ ಹರಿದಾಡುತ್ತಿರುವ ಹೆಸರು ಅಂದರೆ ಡ್ರೋನ್ ಪ್ರತಾಪ್. ಕೆಲ ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಎನ್ನುವ ಯುವಕ ಎಲ್ಲರಿಗೂ ಮಾದರಿಯಾಗಿದ್ದರು.
ಇವರ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್ ಮಾತಿಗೆ ತಲೆದೂಗಿದರು.
ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋನ್. ಇವರ ಈ ಪ್ರತಿಭೆಗೆ ಮೆಚ್ಚಿ ಧನಸಹಾಯ ಮಾಡಿದವರೂ ಇದ್ದಾರೆ. ಡ್ರೋನ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು.
ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು.
ಇದಾದ ಬಳಿಕ ಕಥೆ ಕಟ್ಟಿ ತಮ್ಮಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವುದಾಗಿ ಹಲವರು ಆರೋಪ ಮಾಡಿದ್ದೂ ಇದೆ. ನಟ ಜಗ್ಗೇಶ್ ಕೂಡ ಡ್ರೋನ್ ಪ್ರತಾಪ್ ತಮಗೆ ಹೇಗೆ ಮೋಸ ಮಾಡಿದ್ದ ಎನ್ನುವುದನ್ನು ಹೇಳಿಕೊಂಡಿದ್ದರು.
ಈತನ ಮಾತನ್ನು ನಂಬಿ ಕೆಟ್ಟೆ, ನನ್ನ ಬುದ್ಧಿಗೆ ಏನೆನ್ನಬೇಕು ಎಂದೂ ಬೇಸರ ವ್ಯಕ್ತಪಡಿಸಿದ್ದರು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಬಿಗ್ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ ಪ್ರತಾಪ್. ಇದೀಗ ಡ್ರೋನ್ ಪ್ರತಾಪ್ ಬೆಂಬಲಕ್ಕೆ ಹಲವರು ನಿಂತಿದ್ದರೆ, ಇನ್ನು ಕೆಲವರು ಇನ್ನೂ ಟ್ರೋಲ್ ಮಾಡುತ್ತಲೇ ಇದ್ದಾರೆ. ಆದರೆ ಟ್ರೋಲ್ ಮಾಡುವವರು ಸುಮ್ಮನೇ ಟ್ರೋಲ್ ಮಾಡದೇ ಹಿಂದೆ ಜಗ್ಗೇಶ್ ಅವರು ಬರೆದಿದ್ದ ಮಾತುಗಳನ್ನೇ ಈಗ ಮತ್ತೊಮ್ಮೆ ಬರೆದಂತೆ ಸೃಷ್ಟಿಸಿ, ಅದಕ್ಕೆ ತಮ್ಮದೊಂದಿಷ್ಟು ಕೆಟ್ಟ ಶಬ್ದಗಳನ್ನು ಬಳಸಿ ಶೇರ್ ಮಾಡುತ್ತಿದ್ದಾರೆ.
ನೋಡಿದವರಿಗೆ ಈ ಮಾತುಗಳನ್ನು ಖುದ್ದು ಜಗ್ಗೇಶ್ ಅವರೇ ಬರೆದಂತೆ ಕಾಣುತ್ತಿದೆ. ಇದರಿಂದ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದು, ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪ್ರತಾಪ್ ಹೆಸರು ಹೇಳದೇ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, ಮಿತ್ರರೆ ನನ್ನ ಇನ್ಸ್ಟಗ್ರಾಮ್ ಹಿಂದಿನ ಮುಖಪುಟ photoshot ಬಳಸಿ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು negative post ಹಾಕಿದಂತೆ ಮಾಡಿದ್ದಾರೆ.
ಕ್ಷಣಿಕ ಖುಷಿ ಅವರಿಗೆ ಸಿಗಬಹುದು ನೆನಪಿಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು! ಸ್ನೇಹಿತರೆ ನನ್ನ ಬದುಕಲ್ಲಿ ನಾನು ಯಾರನ್ನು ನೋಯಿಸುವಂತ ಗುಣವಿಲ್ಲಾ! ನನ್ನ ದ್ವೇಷಿಸುವವರನ್ನು ಗೌರವಿಸುವೆ ಒಂದುವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ! ನನಗೀಗ 61 ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ? ನನ್ನ ಮೇಲೆ ನಂಬಿಕೆಯಿರಲಿ. ಅಂಥ post ಗಳು ಬಂದರೆ share ಮಾಡಿ. I will handle thankyou ಎಂದು ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.