ಅನುಪಮ ಗೌಡ ಜೊತೆ ಆಟವಾಡಿ ಕೊನೆಗೆ ಬೇರೆ ಮದುವೆಯಾದ ಕನ್ನಡದ ನಟ; ಮೌನ ಮುರಿದ ಅನುಪಮಾ ಗೌಡ

 | 
X
ನಟಿ, ನಿರೂಪಕಿ ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ಅವರು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆಯೇ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಾರೆ. 2019ನೇ ಸಾಲಿನ ಕರ್ನಾಟಕದ ಚಲನಚಿತ್ರ ರಾಜ್ಯ ಪ್ರಶಸ್ತಿ ಘೋಷಣೆ ಆಗಿದೆ. ತ್ರಯಂಬಕಂ ಚಿತ್ರದ ನಟನೆಗಾಗಿ ಅನುಪಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಬೆಂಗಳೂರಿನಲ್ಲಿ ಓದಿ ಬೆಳೆದವರು ಅನುಮಪಾ ಗೌಡ. ಚಿಕ್ಕಂದಿನಿಂದ ಸಾಕಷ್ಟು ಕಷ್ಟ ಎದುರಿಸಿ ಬೆಳೆದವರು ಅನುಪಮಾ. ಸದ್ಯ ಆರ್‌ಜೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಜೊತೆ ಜೊತೆಗೆ ಕಿರುತೆರೆ, ಹಿರಿತೆರೆ ಪಯಣದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೊದಲ ಸೆಲೆಬ್ರೆಟಿ ಕ್ರಶ್ ಬಗ್ಗೆಯೂ ಹೇಳಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರಿಗೆ ಅಭಿಮಾನಿಗಳಿರುತ್ತಾರೆ. ಕೆಲವರಂತೂ ಸಿಕ್ಕಾಪಟ್ಟೆ ಹಚ್ಚಿಕೊಂಡುಬಿಡುತ್ತಾರೆ. ಅಪ್ಪಿ ತಪ್ಪಿ ತಾನು ಇಷ್ಟಪಟ್ಟ ನಟ ಅಥವಾ ನಟಿಗೆ ಮದುವೆ ಆಗಿಬಿಟ್ಟರೆ ಆಘಾತಕ್ಕೊಳಗಾಗುವವರು ಇದ್ದಾರೆ. ರಂಪ ರಾಮಾಯಣ ಮಾಡುವವರು ಇರ್ತಾರೆ. ತಮ್ಮ ಮೊದಲ ಸೆಲೆಬ್ರೆಟಿ ಕ್ರಶ್ ಮದುವೆ ಆದಾಗ ಅವರ ಮನೆ ಬಳಿ ಹೋಗಿ ಅತ್ತಿದ್ದೆ ಎಂದು ಅನುಪಮಾ ಗೌಡ ನೆನಪಿಸಿಕೊಂಡಿದ್ದಾರೆ.
ನನಗೆ ವಿಜಯ ರಾಘವೇಂದ್ರ ರೀತಿಯ ಹುಡುಗನನ್ನು ಮದುವೆ ಆಗುವ ಆಸೆ ಇತ್ತು. ಯಾವುದೋ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಹಾಗೂ ಮುರಳಿ ಸರ್ ಇಬ್ಬರೂ ಬಂದಿದ್ದರು. ನಾನು ವಿಜಯ ರಾಘವೇಂದ್ರ ಸರ್‌ನ ಮಾತ್ರ ನೋಡ್ತಾ ನಿಂತಿದ್ದೆ. ನಾನು ಸೆಕೆಂಡ್ ಪಿಯುಸಿ ಇದ್ದಾಗಲೇ ವಿಜಯ್ ಸರ್ ಮದುವೆ ಆಗಿದ್ದರು. ಅವರ ಮನೆ ಹತ್ರ ಹೋಗಿ ಕಣ್ಣೀರು ಹಾಕಿ, ಇನ್ಮುಂದೆ ನಿಮ್ಮನ್ನು ಇಷ್ಟಪಡಲ್ಲ ಅಂತೆಲ್ಲಾ ಹೇಳಿದ್ದೆ. ಅವರೇ ನನ್ನ ಮೊದಲ ಸೆಲೆಬ್ರೆಟಿ ಕ್ರಶ್ ಎಂದು ಅನುಪಮಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub