ಮುಖ್ಯ ಭಾಗದಲ್ಲಿ ಶೂಟಿಂಗ್ ಮಾಡಿಸಿದ ಡೈರೆಕ್ಟರ್, ಕನ್ನಡದ ನಟಿಯಿಂದ ದೂರು
Apr 28, 2025, 21:29 IST
|

ಹೌದು ಕುಂಕುಮ್ ಅನ್ನೋ ಈ ಚೆಲುವೆ ಸದ್ಯ ಕರಳೆ ಅನ್ನೋ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸ್ತಿದ್ದಾರೆ. ಇದೊಂದು ಇಂಡೋ-ಚೈನಾ ಮೂವಿ ಆಗಿದ್ದು, ಕನ್ನಡದ ಜೊತೆಗೆ ಚೈನೀಸ್‌ನಲ್ಲೂ ತಯಾರಾಗ್ತಿದೆ.ಕನ್ನಡ ದೇಶದೊಳ್ ಹಾಗೂ ಕಲಿವೀರ ಸಿನಿಮಾಗಳಿಂದ ಸೆನ್ಸಿಬಲ್ ಡೈರೆಕ್ಟರ್ ಅನಿಸಿಕೊಂಡ ಅವಿರಾಮ್ ಕಂಠೀರವ, ಈ ಕರಳೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಒಂದೂವರೆ ದಶಕದಿಂದ ಚಿತ್ರರಂಗದ ಆಳ, ಅಗಲ ಅರಿತಿರೋ ಅವಿರಾಮ್, ಭಿನ್ನ ಅಲೆಯ ಸಿನಿಮಾಗಳನ್ನ ಮಾಡುವ ನಿಟ್ಟಿನಲ್ಲಿ ಕರಳೆ ಕೈಗೆತ್ತಿಕೊಂಡಿದ್ದಾರೆ.
ಸಿನಿಮಾ 70 ಪರ್ಸೆಂಟ್ ಮುಗಿದ ಬಳಿಕ ನಟಿ ಹಾಗೂ ನಿರ್ದೇಶಕರ ನಡುವೆ ವೈಮನಸ್ಸು ಉಂಟಾಗಿದೆ. ಅದಕ್ಕೆ ಕಾರಣ ಚಿತ್ರದ ಫಸ್ಟ್ ಲುಕ್ ಪೋಸ್ಟರ್.ಅಷ್ಟಕ್ಕೂ ಪೋಸ್ಟರ್‌ನಲ್ಲಿರೋದು ನಾನಲ್ಲ ಅಂತ ಹೀರೋಯಿನ್. ಅದನ್ನ ಸ್ಪಷ್ಟಪಡಿಸಲು ತಯಾರಿಲ್ಲದ ಡೈರೆಕ್ಟರ್. ಇವರಿಬ್ಬರ ನಡುವಿನ ತಿಕ್ಕಾಟದಿಂದ ಸಿನಿಮಾ ಶೂಟಿಂಗ್ ನಿಂತು ಹೋಗಿದೆ. ಈ ಬಗ್ಗೆ ಕ್ಲ್ಯಾರಿಟಿ ಸಿಗೋವರೆಗೂ ನಾ ಬಣ್ಣ ಹಚ್ಚಲ್ಲ ಅಂತಿದ್ದಾರೆ ಕುಂಕುಮ್. ಆ ಕಡೆ ಡೈರೆಕ್ಟರ್ ಕೂಡ ಸಮಸ್ಯೆ ಫಿಲ್ಮ್ ಚೇಂಬರ್‌ನಲ್ಲೇ ಬಗೆಹರಿಯಲಿ ಅಂತ ಪಟ್ಟು ಹಿಡಿದಿದ್ದಾರೆ.
ನಾಲ್ಕು ದಿನಗಳ ಹಿಂದೆ ಕುಂಕುಮ್ ಕರಳೆ ಪೋಸ್ಟರ್ ಬಗ್ಗೆ ತಕರಾರು ಎತ್ತಿದ್ದರು. ನಿರ್ದೇಶಕರು ರಿಲೀಸ್ ಮಾಡಿರುವ ಸಿನಿಮಾದ ಪೋಸ್ಟರ್‌ನಲ್ಲಿ ಇರುವುದು ನಾನಲ್ಲ. ಈ ಪೋಸ್ಟರ್ ಹೊರ ಬಿದ್ದ ಬಳಿಕ ಕೆಲವರು ಕೆಟ್ಟದಾಗಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ, ನಿರ್ದೇಶಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಸರಿಯಾದ ಉತ್ತರ ಕೊಡುತ್ತಿಲ್ಲ ಎಂದು ವಿಡಿಯೋ ಮಾಡಿದ್ದರು. ಆ ಬಳಿಕ ಕರಳೆ ಪೋಸ್ಟರ್ ವಿವಾದಕ್ಕೆ ಸಿಲುಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023