ಕನ್ನಡತಿ ರಂಜನಿ ರಾಘವನ್ ಹಬ್ಬಕ್ಕೆ ಎಷ್ಟು ಸೂಪರ್ ಶಾವಿಗೆ ಮಾಡಿತ್ತಾರೆ ಗೊ.ತ್ತಾ, ಮೆಚ್ಚಿಕೊಂಡ ಕರುನಾಡು

 | 
Hg

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್  ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ನಟನೆ ಮಾತ್ರವಲ್ಲದೇ ಪುಸ್ತಕ ಬರೆಯುವ ಹವ್ಯಾಸವನ್ನು ಹೊಂದಿರುವ ನಟಿ, ಸಾಮಾಜಿಕ ಜಾಲತಾಣದಲ್ಲಿ  ಆಕ್ಟೀವ್ ಇದ್ದಾರೆ.   

ಸೀರಿಯಲ್ ಸೆಟ್​ನಿಂದ ವಿಡಿಯೋ ಹಾಗೂ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಶ್ಯಾವಿಗೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ನಟಿ ರಂಜನಿ ರಾಘವನ್ ಒತ್ತು ಶ್ಯಾವಿಗೆ ಮಾಡಿದ್ದು, ಅದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒತ್ತು ಶ್ಯಾವಿಗೆಯನ್ನು ಮಾಡಿ ಅದರಿಂದ ಉಪ್ಪಿಟ್ಟು ಸಹ ಮಾಡಿದ್ದಾರೆ. 

ಅಲ್ಲದೇ, ಸ್ವಲ್ಪ ಶ್ಯಾವಿಗೆಗೆ ಕಾಯಿ ಹಾಲು ಸಹ ಮಾಡಿ ಸವಿದಿದ್ದಾರೆ. ಸದ್ಯ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು,ಅಭಿಮಾನಿಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ.  ಇದೊಂದೇ ಅಲ್ಲದೇ, ರಂಜನಿ ತಮ್ಮ ಮೇಕಪ್ ವಿಡಿಯೋ, ಡೈಲಿ ರೋಟಿನ್ ವಿಡಿಯೋ ಹೀಗೆ ಎಲ್ಲವನ್ನೂ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. 

ಹಾಗೆಯೇ ಫೋಟೋಗಳನ್ನು ಹಾಕಿ ಅಭಿಮಾನಿಗಳ ಬಳಿ ಸಹ ಪ್ರಶ್ನೆ ಮಾಡಿ, ಸಲಹೆ ಕೇಳುತ್ತಿರುತ್ತಾರೆ. ಅದೆಷ್ಟೇ ಬ್ಯುಸಿ ಇದ್ದರೂ ಕೂಡ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಪುಟ್ಟಗೌರಿ ಮದುವೆ ಮೂಲಕ ಮನೆಮನೆಗಳಲ್ಲೂ ತಮ್ಮ ಛಾಪನ್ನು ಹೊಸರೀತಿಯಲ್ಲಿ ಬಿಂಬಿಸಿಕೊಂಡ ಕೀರ್ತಿ ರಂಜನಿ ರಾಘವನ್ ಗೆ ದೊರಕಿದೆ. ಕನ್ನಡತಿ ಧಾರಾವಾಹಿಯಿಂದ ನಟಿ ರಂಜನಿ ರಾಘವನ್ ಗೆ ದೊಡ್ಡ ಮಟ್ಟಿನ ಯಶಸ್ಸು ದೊರಕುತ್ತಿದೆ.  

ತಮ್ಮ ಅದ್ಭುತವಾದ ನಟನೆಯಿಂದ ಹಾಗೂ ಸ್ಪಷ್ಟ 
ಕನ್ನಡದಿಂದ ಇವರು ಗುರುತಿಸಿಕೊಳ್ಳುತ್ತಿರುವುದು ವಿಶೇಷ. ಸೀರಿಯಲ್ನಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಅಪ್ಪಟ ಕನ್ನಡ ಅಭಿಮಾನಿಯಾಗಿರುವ ಇವರು ಕೇವಲ ನಟಿಯಲ್ಲದೇ ಬರಹಗಾರ್ತಿ ಕೂಡ ಹೌದು. ಈಗಾಗಲೇ ಕತೆ ಡಬ್ಬಿ ಎನ್ನುವ ಪುಟ್ಟ ಪುಟ್ಟ ಕತೆಗಳನ್ನು ಹೊಂದಿರುವ ಪುಸ್ತಕವನ್ನು ಹೊರ ತಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.