ಸುದೀಪ್ ಮನೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಕೋಳಿ ಸುಕ್ಕ ಪಾರ್ಟಿ, ಕೈ ಅಡುಗೆ ಮಾಡಿದ ಕಿಚ್ಚ

 | 
Bft

ಬಿಗ್ ಬಾಸ್​ ಸ್ಪರ್ಧಿಗಳು ದೊಡ್ಮನೆಯಿಂದ ಹೊರಗೆ ಬಂದ ಬಳಿಕ ಕಿಚ್ಚ ಸುದೀಪ್ ಜೊತೆ ಪಾರ್ಟಿ ಮಾಡಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಬಿಗ್ ಬಾಸ್​ ಮನೆಯಿಂದ ಹೊರಗೆ ಬಂದ ಬಳಿಕ ಸ್ಪರ್ಧಿಗಳೆಲ್ಲಾ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ. ಎಲ್ಲರ ಜೊತೆ ಸುದೀಪ್ ಕೂಡ ಸೇರಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಭಾಗ್ಯಶ್ರೀ, ಸಿರಿ, ನೀತು ವನಜಾಕ್ಷಿ, ಅವಿನಾಶ್​, ಮೈಕಲ್​ ಅಜಯ್​, ಪವಿ ಪೂವಪ್ಪ, ರಕ್ಷಕ್​ ಬುಲೆಟ್​, ತುಕಾಲಿ ಸಂತೋಷ್ ಎಲ್ಲರೂ ಕಿಚ್ಚ ಸುದೀಪ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ​ಈಶಾನಿ, ನಮ್ರತಾ, ವರ್ತೂರು ಸಂತೋಷ್​, ಕಾರ್ತಿಕ್ ಮಹೇಶ್​ ಹಾಗೂ ವಿನಯ್ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಪವಿ ಪೂವಪ್ಪ ತಮ್ಮ ಇನ್ಸ್ಟಾಗ್ರಾಮ್​ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಗ್ ಮನೆಯಲ್ಲಿ ಸಹೋದರಿ ಅಂತಲೇ ಕರೆಯುತ್ತಿದ್ದ, ವಿನಯ್ ಗೌಡ ಜೊತೆಗೆ ನಮ್ರತಾ ಗೌಡ ಫೋಟೋ ತೆಗೆಸಿಕೊಂಡಿದ್ದಾರೆ. ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ನಮ್ಮು ಮೀಟ್ ಮಾಡಿದ್ರು. ಸಂಗೀತಾ-ವಿನಯ್ , ಕಾರ್ತಿಕ್ ಜೊತೆ ತೆಗೆದ ಫೋಟೋಗಳನ್ನು ನಮ್ರತಾ ಗೌಡ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ರು. ಮೈಸೂರು ಸಿಲ್ಕ್ ಸೀರೆಯಲ್ಲು ನಮ್ರತಾ ಮಿಂಚುತ್ತಿದ್ದಾರೆ.

ಬಿಗ್ ಬಾಸ್ ಸದಸ್ಯರಾದ ನಮೃತಾ ಗೌಡ, ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಹೀಗೆ ಎಲ್ಲರೂ ಒಂದು ಕಡೆಗೆ ಭೇಟಿ ಆಗಿದ್ದಾರೆ. ಒಂದಷ್ಟು ಹೊತ್ತು ಕಳೆದಿದ್ದಾರೆ. ಜೊತೆಗೆ ಖುಷಿ ಖುಷಿಯಾಗಿಯೇ ಫೋಟೋಗಳನ್ನ ತೆಗೆದುಕೊಂಡಿದ್ದಾರೆ. ಈ ಒಂದಷ್ಟು ಫೋಟೋಗಳನ್ನ ನೋಡಿದ ಫ್ಯಾನ್ಸ್ ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ರಿಯಲ್ ವಿನ್ನರ್ ಯಾರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೂ ಸಂಗೀತಾ ಮತ್ತು ವಿನಯ್ ಬಿಗ್ ಬಾಸ್ ರಿಯಲ್ ವಿನ್ನರ್ ಅಂತಲೇ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.