ಪತ್ನಿಯನ್ನು ಕಳೆದುಕೊಂಡ ರಾಘುಗೆ ಸಮಾಧಾನ ಮಾಡಿದ ಕಿಚ್ಚ ಸುದೀಪ್, 'ಮಗ ಏನೂ ಭಯ ಪಡಬೇಡ ನಾನಿದ್ದೀನಿ'

 | 
Hd

ಹೃದಯಾಘಾತದಿಂದ ಸ್ಪಂದನಾ ವಿಜಯ್ ರಾಘವೇಂದ್ರ ಅಕಾಲಿಕ ಮರಣ ಇಡೀ ಸ್ಯಾಂಡಲ್​ವುಡ್​ ಅನ್ನು ಶೋಕಸಾಗರದಲ್ಲಿ ಮುಳುಗಿತ್ತು. ವಿಜಯ್ ರಾಘವೇಂದ್ರ ಪತ್ನಿ ನಿಧನರಾದ ಸಮಯದಲ್ಲಿ ಸುದೀಪ್​ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ರು. ಔಟ್​ ಆಫ್​ ಸ್ಟೇಷನ್​ನಲ್ಲಿದ್ದರು. ಹೀಗಾಗಿ ಸುದೀಪ್​ ನಿನ್ನೆ ವಿಜಯ್​ ರಾಘವೇಂದ್ರ ಮನೆಗೆ ಭೇಟಿ ನೀಡಿದ್ರು.

ಕೆಲ ದಿನಗಳ ಹಿಂದಷ್ಟೇ ಪತ್ನಿ ಸ್ಪಂದನಾ ಅವರನ್ನು ದೂರ ಮಾಡಿಕೊಂಡ ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಇಲ್ಲ ಜೀವನವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದೇನೆ, ದುಃಖ ಸಮಯದಲ್ಲಿ ಕನ್ನಡಿಗರು ನನಗೆ ಆಸರೆಯಾಗಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದಾರೆ.

ಇನ್ನು ಸುದೀಪ್ ದಂಪತಿ ಮನೆಗೆ ಬಂದ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಸಹೋದರ, ನಟ ಶ್ರೀಮುರಳಿ ಹಾಜರಿದ್ದರು. ವಿಜಯ್ ರಾಘವೇಂದ್ರ ಅವರ ಜಕ್ಕೂರಿನ ಮನೆಗೆ ಸುದೀಪ್ ಭೇಟಿ ನೀಡಿದ್ದರು. ವಿಜಯ್ ರಾಘವೇಂದ್ರ ಅವರೊಟ್ಟಿಗೆ ಕೆಲ ಕಾಲ ಮಾತನಾಡಿ ಅವರಿಗೆ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸಹನಟನನ್ನು ಗಟ್ಟಿಯಾಗಿ ಅಪ್ಪಿಕೊಂಡು ಧೈರ್ಯ ತುಂಬುವ ಪ್ರಯತ್ನವನ್ನು ಸುದೀಪ್ ಮಾಡಿದರು. 

ನೋವಿನಲ್ಲಿ ಇದ್ದರೂ ವಿಜಯ್‌ ಅವರು ಇದೀಗ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಈಗಾಗಲೇ ಅವರ ಕದ್ದ ಚಿತ್ರ ಸಿನಿಮಾ ಪ್ರಮೋಷನ್‌ನಲ್ಲಿಯೂ ತೊಡಗಿದ್ದಾರೆ. ಜತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಜಡ್ಜ್​ ಸ್ಥಾನದಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಮಾಜಕ್ಕೆ ಕಲಿಸುವ ನಿಮ್ಮ ನಡವಳಿಕೆ ನಮಗೆಲ್ಲ ಮಾದರಿ ಎಂದು ಅವರ ಅಭಿಮಾನಿಗಳು ವಿಜಯ್‌ ಅವರನ್ನು ಹೊಗಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.