ಕಿಚ್ಚ ಸುದೀಪ್ ಅವರ ನೆಚ್ಚಿನ ನಟಿ ಅಮಿ ಜಾಕ್ಸನ್ ಅವಸ್ಥೆ ನೋಡಿ ಬೆಚ್ಚಿಬಿದ್ದ ಜನ, ಯಾಕೆ ಏನಾಯಿತು ಗೊತ್ತಾ

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟನೆಯ ವಿಲನ್ ಸಿನಿಮಾದ ಹೀರೋಯಿನ್ ಆಮಿ ಜಾಕ್ಸನ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಚೆನ್ನಾಗಿಯೇ ಇದ್ದ ನಟಿ ಹಿಂಗ್ಯಾಕೆಯಾದರು? ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಬ್ರಿಟನ್ ಮೂಲದ ನಟಿ ಆಮಿ ಜಾಕ್ಸನ್ ದೇಹವನ್ನು ಮತ್ತಷ್ಟು ಮಾರ್ಪಡಿಸಿಕೊಂಡಿದ್ದಾರೆ. ಹಳೆಯ ಫೋಟೋ ಮತ್ತು ಈಗಿನ ಫೋಟೋ ಕಂಡಾಗ ಮುಖದ ಮೂಳೆಗಳು, ತಿಳಿ ಕಣ್ಣುಗಳು ಎದ್ದು ಕಾಣುತ್ತಿದ್ದು, ಇವರನ್ನು ಐರಿಶ್ ನಟ ಸಿಲಿಯನ್ ಮರ್ಫಿಗೆ ಹೋಲಿಸಲಾಗುತ್ತಿದೆ. ಇನ್ಸ್ಟಾಗ್ರಾಂನಲ್ಲಿ ಆಮಿ ಜಾಕ್ಸನ್ ಫೋಟೋ ಹಂಚಿಕೊಂಡಿದ್ದು, ಇದು ಲಂಡನ್ ಫ್ಯಾಶನ್ ವೀಕ್ನಲ್ಲಿ ಕೆಂಪು ಧಿರಿಸಿನಲ್ಲಿ ಕಂಡಿದ್ದಾರೆ.
ಆದರೆ ಅವರು ಹಂಚಿಕೊಂಡ ಫೋಟೋ ಮಾತ್ರ ಅಭಿಮಾನಿಗಳನ್ನು ಒಂದೊಮ್ಮೆ ಯೋಚಿಸುವಂತೆ ಮಾಡಿದೆ. ಆದರೆ ದೇಹವನ್ನು ಇಷ್ಟೆಲ್ಲಾ ಮಾರ್ಪಡಿಸಿದ್ದು ಯಾವ ಕಾರಣಕ್ಕೆ ಎಂದು ತಿಳಿದುಬರಬೇಕಿದೆ. ಇನ್ನು ಆಮಿ ಗಾಸಿಪ್ ಗರ್ಲ್ ಸ್ಟಾರ್ ಎಡ್ ವೆಸ್ಟ್ವಿಕ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತೇ ಇದೆ. ಆಕೆಗೆ ಒಬ್ಬ ಮುದ್ದಾದ ಮಗನು ಇದ್ದಾನೆ.
ಇದಲ್ಲದೆ ನಟಿ ಬಾಲಿವುಡ್ನಲ್ಲಿ ಏಕ್ ದಿವಾನತಾ, ಸಿಂಗ್ ಈಸ್ ಬ್ಲಿಂಗ್, ತೆರಿ ಸಿನಿಮಾದಲ್ಲಿ ನಟಿಸಿದರೆ, ಅತ್ತ ತಮಿಳಿನಲ್ಲಿ ಐ, ರೊಬೊ ಸಿನಿಮಾದಲ್ಲಿ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಈಗ ಅವರ ಮುಖದ ಹಿಂದಿರುವ ರಹಸ್ಯ ಮಾತ್ರ ಎಲ್ಲರಿಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿರೋದಂತೂ ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.