ಕರ್ನಾಟಕಕ್ಕೆ ಕಾಗೆ ಹಾರಿಸಿದ ಡ್ರೋನ್ ಪ್ರತಾಪ್ ಪರ ನಿಂತ ಕಿಚ್ಚ

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರನ್ನು ವಿನಯ್ ಟಾರ್ಗೆಟ್ ಮಾಡಿದ್ದಾರಾ.? ಹೀಗೊಂದು ಪ್ರಶ್ನೆ ವೀಕ್ಷಕರ ವಲಯದಲ್ಲಿ ಮೂಡುವಂತಾಗಿದೆ, ಹೌದು, ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಟಾರ್ಗೆಟ್ ಆಗುತ್ತಿರುವುದು ಹೊಸದೇನೂ ಅಲ್ಲ. ಈ ಮೊದಲು ಸ್ನೇಹಿತ್ ಗೌಡ ಹಾಗು ತುಕಾಲಿ ಸಂತೋಷ್, ಪ್ರತಾಪ್ ನನ್ನ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದರು.
ಅದನ್ನೆಲ್ಲಾ ಸಹಿಸಿಕೊಂಡಿರುವ ಪ್ರತಾಪ್ ಇದೀಗ ನಿಧಾನವಾಗಿ ವೀಕ್ಷಕರ ಅನುಕಂಪ ಗಿಟ್ಟಿಸತೊಡಗಿದ್ದಾನೆ. ಆದರೆ ಸ್ನೇಹಿತ್ ಹಾಗು ಸಂತು ಅವರಿಂದ ತಪ್ಪಿಸಿಕೊಂಡೆ ಎಂದು ಡ್ರೋನ್ ಪ್ರತಾಪ್ ನಿಟ್ಟುಸಿರು ಬಿಡುವಷ್ಟರಲ್ಲಿ ವಿನಯ್ ಗೌಡ ಪ್ರತಾಪ್ ನನ್ನ ಬೈಯ್ಯುವ ಮೂಲಕ ಅವಮಾನ ಮಾಡಿದ್ದಾರೆ.
ನಿನ್ನ ಡ್ರೋನ್ ರೆಕ್ಕೆಪುಕ್ಕ ಕೀಳುತ್ತೇನೆ ಎಂದು ವಿನಯ್ ಅವಾಜ್ ಹಾಕುತ್ತಾರೆ. ವಿನಯ್ ಮಾತಿನಿಂದ ಬೇಸರ ವ್ಯಕ್ತಪಡಿಸುವ ಪ್ರತಾಪ್, ಯಾರೊಂದಿಗೂ ಮಾತನಾಡದದೇ ಒಂದೆಡೆ ಹೋಗಿ ಮೌನವಾಗಿ ಕುಳಿತುಕೊಳ್ಳುತ್ತಾರೆ. ಅದನ್ನೆಲ್ಲ ಕಂಡ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲನೇ ವಾರದಲ್ಲಿ ತಮಾಷೆ ಮಾಡುತ್ತಾ ಎಲ್ಲರ ಕಾಲೆಳೆಯುತ್ತಿದ್ದ ತುಕಾಲಿ ಸಂತು ಅವರಿಗೆ ಹಾಗೂ ವಿನಯ್ ಗೌಡ ಅವರಿಗೆ ನೇರವಾಗಿಯೇ ಚಾಟಿ ಬೀಸಿ ಕಿಚ್ಚ ಸುದೀಪ್ ಮಾತಿನಲ್ಲಿ ತಿವಿದಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಗಾಗಿ ಸುದೀಪ್ ಹಾಡೊಂದನ್ನು ಪ್ಲೇ ಮಾಡಿಸಿ ರಾಂಪ್ ವಾಕ್ ಮಾಡುವಂತೆ ಹೇಳಿದ್ದು, ತನಿಷಾ ಮತ್ತು ಸಂಗೀತಾ ಜೊತೆ ಸಖತ್ತಾಗಿ, ಹೊಸ ಜೋಶ್ ನಲ್ಲಿ ಪ್ರತಾಪ್ ರಾಂಪ್ ವಾಕ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.