ಕರುನಾಡಿನ ಅಚ್ಚುಮೆಚ್ಚಿನ ನಾಯಕ ಕುಮಾರಸ್ವಾಮಿ ಅವರು ನಾನ್ ವೆಜ್ ತಿನ್ನಬಾರದಾ, ವೈದ್ಯರು ಹೇಳಿದ್ದೇನು ಗೊತ್ತಾ

 | 
ರು

ಆರೋಗ್ಯದಲ್ಲಿ ಏರುಪೇರಾಗಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಜಯ ನಗರದಲ್ಲಿರುವ ಅಪೋಲೊ ಆಸ್ಪತ್ರೆಗೆ ಎಚ್‌ಡಿಕೆ ದಾಖಲಾಗಿದ್ದು, ಸದ್ಯ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಬಗ್ಗೆ ಅನಿತಾ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಅವರು ಆರಾಮಾಗಿದ್ದಾರೆ. ಊಹಾಪೋಹದ ಸುದ್ದಿಗಳನ್ನ ಹರಡಬೇಡಿ, ರಾಜ್ಯದ ಜನತೆ ಗಾಬರಿಯಾಗೋದು ಬೇಡ. 

ಯಾರೂ ಸಹ ಆತಂಕಪಡೋದು ಬೇಡ ನಾಳೆಯೇ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ನಾನೇ ಬೇಡ ಅಂದಿದ್ದೀನಿ ಎಂದು ಅನಿತಾ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಮತ್ತೆ ಓಡಾಟ ಶುರು ಮಾಡ್ತಾರೆ. ತುಂಬಾ ಆರಾಮವಾಗಿ ಇದ್ದಾರೆ, ಸುಳ್ಳುಸುದ್ದಿ ಹರಡೋದು ಬೇಡ ಎಂದು ಇದೇ ವೇಳೆ ಅನಿತಾ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಇನ್ನು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಪೋಲೋ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಅಂತ ಬರೆದುಕೊಂಡಿದ್ದಾರೆ. 

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಕುಮಾರಸ್ವಾಮಿ ಅವರು ಬಿಡದಿ ಬಳಿಯ ತಮ್ಮ ಫಾರ್ಮ್‌ಹೌಸ್‌ಗೆ ತೆರಳಿ ಎರಡರಿಂದ ಮೂರು ವಾರಗಳ ಕಾಲ ಅಲ್ಲಿಯೇ ಕಾಲ ಕಳೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇನ್ನು ಮುಂದೆ ಕುಮಾರಸ್ವಾಮಿ ಅವರು ಮಾಂಸಾಹಾರ ಸೇವಿಸುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ ಹೇಳಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.