ದುಡ್ಡು ಕೊಡ್ತೀನಿ ಬಾ ಎಂದ ಕುರಿ ಪ್ರತಾಪ್, ಕೆನ್ನೆಗೆ ಬಾರಿಸಿ ಶೋ ಬಿಟ್ಟು ಹೊರಟ ಪ್ರಿಯಾಂಕಾ
Feb 18, 2025, 10:32 IST
|

ಸೃಜನ್ ಲೋಕೇಶ್ ನಿರೂಪಣೆಯ 'ಮಜಾ ಟಾಕೀಸ್' ಕೂಡ ಕನ್ನಡದ ಜನಪ್ರಿಯ ಕಾರ್ಯಕ್ರಮಗಲ್ಲೊಂದು. ಇದೊಂದು ಕಾಮಿಡಿ ಶೋ ಆಗಿದ್ದು, ಪ್ರತಿ ಎಪಿಸೋಡ್‌ನಲ್ಲಿ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ವೀಕ್ಷಕರಿಗೆ ಮನೋರಂಜನೆ ನೀಡುತ್ತಾ ಬಂಂಇದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸಿಕ್ಕಾಪಟ್ಟೆ ಏಂಜಾಯ್ ಮಾಡುತ್ತಿದ್ದ ಈ ಶೋ ಮತ್ತೆ ಬರ್ತಿದೆ.
ಕಲರ್ಸ್ ಕನ್ನಡ ಈ ಹಿಂದೆಯೇ ಮಜಾ ಟಾಕೀಸ್ ಮತ್ತೆ ಬರುತ್ತಿರುವ ಸುಳಿವನ್ನು ನೀಡಿತ್ತು. ಮೊದಲ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಈ ಬಾರಿ ಯಾರೆಲ್ಲಾ ಇರಲಿದ್ದಾರೆಂಬ ಕುತೂಹಲ ಮೂಡಿತ್ತು. ವರಲಕ್ಷ್ಮಿ ಪಾತ್ರದಲ್ಲಿ ಅಪರ್ಣಾ ಇಲ್ಲವೆಂಬ ಕೊರಗು ಅಲ್ಲಿದ್ದ ಎಲ್ಲರನ್ನೂ ಕಾಡುತ್ತಿತ್ತು. ಆದರೂ ಕುರಿ ಪ್ರತಾಪ್, ಮಂಡ್ಯ ರಮೇಶ್ ಮೊದಲಾದ ಕಲಾವಿದರು ಅವರೇ ಿದ್ದಾರೆ.
ಈ ಬಾರಿಯ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರೊಂದಿಗೆ ಹೊಸ ಕಲಾವಿದರ ದಂಡೇ ಸೇರಿಕೊಂಡಿದೆ. ಮಜಾಭಾರತ ವೇದಿಕೆ ಮೇಲೆ ಮಿಂಚಿದ್ದ ಹಲವು ಕಲಾವಿದರು ಈಗ ಮಜಾ ಟಾಕೀಸ್‌ಗೆ ಎಂಟ್ರಿಕೊಟ್ಟಿದ್ದಾರೆ. ಹೀಗಾಗಿ ಈ ಬಾರಿಗೆ ಮಜಾ ಟಾಕೀಸ್ ಸಿಕ್ಕಾಪಟ್ಟೆ ವಿಭಿನ್ನವಾದೆ.ಈ ಬಾರಿಯ ಮಜಾ ಟಾಕೀಸ್‌ನಲ್ಲಿ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ಚಂದ್ರಿಕಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ಹಾಗೂ ವಿಲನ್ ಪಾತ್ರದ ಮೂಲಕವೇ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಇರಲಿದ್ದಾರೆ.
ಇವರು ಈ ಹಿಂದೆ ಬಿಗ್‌ಬಾಸ್‌ನಲ್ಲೂ ಸ್ಪರ್ದಿಯಾಗಿ ಭಾಗವಹಿಸಿದ್ದರು. ಉಳಿದಂತೆ ಬಿಗ್‌ಬಾಸ್ ಸೀಸನ್ 10 ಸ್ಪರ್ಧಿ ತುಕಾಲಿ ಸಂತೋಷ್, ನಟ ವಿಶ್ವಾಸ್, ವಿನೋದ್ ಗೊಬ್ಬರಗಾಲ, ಪ್ರಿಯಾಂಕಾ ಕಾಮತ್, ಶಿವು, ಚಂದ್ರಪ್ರಭಾ ಮುಂತಾದವರು ಮಜಾ ನೀಡಲಿದ್ದಾರೆ. ಅಷ್ಟಕ್ಕೂ ಕುರಿ ಪ್ರತಾಪ್ ಅಂತೂ ಪ್ರಿಯಾಂಕಾಗೆ ಸಖತ್ ಆಗಿ ಕಾಲೆಳೆದು ಕಾಮಿಡಿ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.