ಲಕ್ಷ್ಮಿ ನಿವಾಸ ಸಿದ್ದೇಗೌಡರ ರಿಯಲ್ ಲೈಫ್ ಪ್ರೇಯಸಿ ತುಂಬಾ ಮುದ್ದಾಗಿದ್ದಾರೆ
Oct 23, 2024, 15:12 IST
|

ನಟನೆಯಲ್ಲಿ ಏನಾದರೂ ಸಾಧಿಸಬೇಕೆಂದು ಸಾಕಷ್ಟು ವರ್ಷ ಶ್ರಮ ವಹಿಸಿದ್ದೇನೆ. ಪಾತ್ರಗಳ ಅವಕಾಶಕ್ಕಾಗಿ ಸಿಕ್ಕಾಪಟ್ಟೆ ಅಲೆದಾಡಿದ್ದೇನೆ. ಒಂದು ಪಾತ್ರಕ್ಕಾಗಿ ಐದಾರು ಬಾರಿ ಆಡಿಷನ್ನಲ್ಲಿ ಭಾಗವಹಿಸುತ್ತಿದ್ದೆ. ಈ ಪಾತ್ರ ನನಗೆ ಸಿಕ್ಕಿ ಜನರ ಮೆಚ್ಚುಗೆ ಗಳಿಸಿರುವುದು ನನ್ನ ಅದೃಷ್ಟ.
ಇಷ್ಟು ವರ್ಷಗಳ ಕಠಿಣ ಪರಿಶ್ರಮ ಮತ್ತು ಕಲಾವಿದರೂ ಆಗಿರುವ ನನ್ನ ತಾಯಿ ಮತ್ತು ಸಹೋದರಿಯ ಪ್ರೋತ್ಸಾಹದಿಂದ ಇದೆಲ್ಲ ಸಾಧ್ಯವಾಗಿದೆ. ಹೊರಗಡೆಯ ಜನರು ನನ್ನನ್ನು ತಮ್ಮ ಮನೆಮಗನಂತೆ ಸಿದ್ದೇಗೌಡ್ರೇ ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ.
ಜನರ ಮನಸ್ಸಿಗೆ ಹತ್ತಿರವಾಗಿರುವುದಕ್ಕೆ ಬಹಳ ಖುಷಿ ಇದೆ ಎಂದಿದ್ದಾರೆ ಡಿಜೆ.ಜಿಲ್ ಜಿಲ್’, ‘ವಾಸಂತಿ ನಲಿದಾಗ’ ಸೇರಿದಂತೆ ಐದಾರು ಸಿನಿಮಾಗಳಲ್ಲಿಪೋಷಕ ಪಾತ್ರಗಳಲ್ಲಿನಟಿಸಿದ್ದ ಡಿಜೆ ಈಗ ಸ್ಯಾಂಡಲ್ವುಡ್ನಲ್ಲಿ ಹೀರೊ ಆಗುವ ಮೂಲಕ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
‘ಈರಣ್ಣಯ್ಯ ಎನ್ ಮಧುಗಿರಿ ನಿರ್ದೇಶನದ ‘ಕನಕ ಪುಷ್ಪ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದೇನೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜತೆ ಒಂದೆರಡು ಸಿನಿಮಾಗಳ ಚರ್ಚೆಯಲ್ಲಿ ತೊಡಗಿದ್ದೇನೆ ಎಂದಿದ್ದಾರೆ ಅವರು.
ಎಂಬತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ರಂಗವೇದಿಕೆಯಲ್ಲೂ ಜನಪ್ರಿಯರಾಗಿರುವ ಡಿಜೆ, ‘ಚಿಕ್ಕ ವಯಸ್ಸಿನಲ್ಲಿ ನನ್ನ ತಾಯಿ ನನ್ನನ್ನು ನೃತ್ಯಕ್ಕೆ ಸೇರಿಸಿದರು. ಆಗ ನನ್ನ ಮುಖದ ಮೇಲೆ ಕಲೆಗಳಿದ್ದವು. ಕೆಲವರು ನನ್ನ ಮುಖ ನೋಡಲೂ ಇಷ್ಟಪಡುತ್ತಿರಲಿಲ್ಲ. ಆದರೆ ಅವರೇ ವೇದಿಕೆ ಮೇಲೆ ನನ್ನ ನೃತ್ಯವನ್ನು ಬಹಳ ಇಷ್ಟಪಟ್ಟು ಚಪ್ಪಾಳೆ ತಟ್ಟಿ ದುಡ್ಡನ್ನು ನನ್ನ ಶರ್ಟ್ಗೆ ಪಿನ್ ಮಾಡುತ್ತಿದ್ದರು. ಕಲೆಗಿರುವ ಬೆಲೆ ನನಗೆ ಆಗ ಅರ್ಥವಾಯಿತು.
ಚಿರಂಜೀವಿ ನನ್ನ ನೆಚ್ಚಿನ ನಟ. ಅವರ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ಸಿನಿಮಾ ನಾಯಕನಾಗಬೇಕೆಂಬ ಆಸೆ ಚಿಗುರೊಡೆದಿದ್ದೇ ಅವರಿಂದ. ಅವರೇ ನನ್ನ ರೋಲ್ ಮಾಡೆಲ್. ನನ್ನ ನಟನಾ ಆಸಕ್ತಿ ನೋಡಿ ನನ್ನ ತಾಯಿ ನನ್ನನ್ನು ರಂಗಭೂಮಿಗೆ ಸೇರಿಸಿದರು. ಎಂಬತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೇನೆ. ಮುನ್ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್ ಕಲಾವಿದನಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಕಿರುತೆರೆ ಮತ್ತು ಸಿನಿಮಾ ನಟನೆಯ ಮೆಟ್ಟಿಲಿಗೆ ರಂಗಭೂಮಿಯೇ ದೊಡ್ಡ ಅಡಿಪಾಯ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,10 Jun 2025
ಕತ್ತಲ ಕೋಣೆಯ ಪರದೆಯ ಮೇಲೆ ತನ್ನ ನಿಜ ಬ್ಯೂಟಿ ತೋರಿಸಿದ ಮೇಘಾ ಶೆಟ್ಟಿ
Tue,10 Jun 2025