ನಿನ್ನೆ ಬೆಳ್ತಂಗಡಿಯಲ್ಲಿ ರೊಚ್ಚಿಗೆದ್ದ ತಿಮರೋಡಿ, ಪಾಪಿಗಳ ಎದೆ ನಡುಗುವಂತೆ ಮಾತಾನಾಡಿದ ಮಹೇಶ್ ಶೆಟ್ಟಿ

 | 
Hd

ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹಿಸಿ ಹೋರಾಟಗಳು ಹೆಚ್ಚುತ್ತಿವೆ. ಇವತ್ತು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಚಲೋ ಬೆಳ್ತಂಗಡಿ ಹೆಸರಿನಡಿ ಮಹಾಧರಣಿ ನಡೆಸಲಾಯ್ತು. ಪ್ರಕರಣದ ತನಿಖೆಯನ್ನ ಎಸ್​ಐಟಿಗೆ ಒಪ್ಪಿಸುವಂತೆ ಒತ್ತಾಯಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡಲಾಯ್ತು.

ಇನ್ನು ಚಿತ್ರದುರ್ಗದ ಮುರುಘಾಶ್ರೀ ಪ್ರಕರಣ ಬಯಲು ಮಾಡಿದ್ದ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಸ್ಟಾನ್ಲಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.. ಸಿಎಂ ಸಿದ್ದರಾಮಯ್ಯನವರು ರಾಜ್ಯದ ಹೆಣ್ಣು ಮಕ್ಕಳಿಗೆ ಹಲವು ಭಾಗ್ಯಗಳಮನ್ನ ಕೊಟ್ಟಿದ್ದಾರೆ. ಈಗ ಸೌಜನ್ಯಳ ಸಾವಿನ ತನಿಖೆಯನ್ನ ಬಯಲಿಗೆಳೆದು ಮತ್ತೊಂದು ಭಾಗ್ಯ ಕೊಡಬೇಕು. ತನಿಖೆ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯದೇ ತಾವೇ ಕಾನೂನು ಮೂಲಕ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಇನ್ನು ಮಗಳ ಸಾವಿನ ನ್ಯಾಯಕ್ಕಾಗಿ 11 ವರ್ಷಗಳಿಂದಲೂ ಬೇಡುತ್ತಿರುವ ಸೌಜನ್ಯ ತಾಯಿ ಕುಸುಮಾವತಿ ಇವತ್ತಿನ ಪ್ರತಿಭಟನೆಯಲ್ಲೂ ಭಾಗಿಯಾಗಿದರು. ನನ್ನ ಮಗಳನ್ನ ಕೊಂದವರಿಗೆ ಶಿಕ್ಷೆಯಾಗಬೇಕು.. ನನಗೆ ನ್ಯಾಯ ಕೊಡಿಸಿ ಎಂದು ಸೆರಗೊಡ್ಡಿ ಕಣ್ಣೀರಿಟ್ಟರು. ಸೌಜನ್ಯ ಸಾವಿನ ನ್ಯಾಯಕ್ಕಾಗಿ ಆರಂಭದಿಂದಲೂ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದರು.. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತ್ಯಾಚಾರ ಕೊಲೆ ನಡೆದಿತ್ತು.. ಆದ್ರೆ ನ್ಯಾಯ ಸಿಗ್ಲಿಲ್ಲ. 

ಈ ಬಾರಿ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ.. ಈ ಬಾರಿ ನೀವು ಸೌಜನ್ಯ ಸಾವಿಗೆ ನ್ಯಾಯ ಕೊಡದಿದ್ರೆ ಎರಡೂ ಪಕ್ಷಗಳು ಸರ್ವನಾಶ ಆಗಿ ಹೋಗುತ್ತವೆ ಎಂದರು. ಶೀನಪ್ಪಣ್ಣ ನಿಗೆ ಬೇಕಾದ ದಾಖಲೆಗಳು ನಮ್ಮಲ್ಲಿವೆ. ಕೊಡುತ್ತೇವೆ ಅಗಳಾದರೂ ಅತ್ಯಾಚಾರಿಗಳ ಪತ್ತೆ ಹಚ್ಚುತ್ತಾರಾ ನೋಡಬೇಕು. ಇಲ್ಲಿ ಬಡವರಿಗೆ ಒಂದು ನ್ಯಾಯ ಶ್ರೀಮಂತ ರಿಗೆ ಒಂದು ನ್ಯಾಯ ಎಂದು ಗುಡುಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.