ನಾಟಕ ಮಾಡುವಾಗ ಸಣ್ಣ ಎಡವಟ್ಟಾಗಿ ಮಕ್ಕಳ ಭಾಗ್ಯ ಕಳೆದುಕೊಂಡ ಮಜಾ ಟಾಕೀಸ್ ಗುಂಡು ಮಾಮ
Aug 14, 2024, 18:39 IST
|
ಕೋಳಿ ಗೂಡಿನಂಥ ಮನೆಯಲ್ಲಿ ವಾಸ. ಬಡತನದಿಂದ ಎಲ್ಲೋ ಬೆಳೆಯುತ್ತಿರುವ ಪರಿಚಯವೇ ಇಲ್ಲದ ಅಣ್ಣ, ಅಪರೂಪಕ್ಕೆ ಬರುವ ಅಪ್ಪ. ಮನೆ ಕೆಲಸ ಮಾಡಿ ಸಾಕುವ ತಾಯಿ ಇಂಥ ಸಂಕಷ್ಟ ಪರಿಸ್ಥಿತಿಯಿಂದ ಬಂದರೂ, ಇಂದು ತುಳು ನಾಡಿನ ಸ್ಟಾರ್ ಕಲಾವಿದನಾಗಿ ಬೆಳದ ನವೀನ್ ಡಿ. ಪಡೀಲ್ ಬದುಕೇ ರೋಚಕ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ನಿಂದಾದಿ ಇಂದು ಅವರ ಹೆಸರು ಬಹುಪಾಲು ಕನ್ನಡಿಗರಿಗೆ ಪರಿಚಿತ. ಇತ್ತೀಚೆಗೆ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದ ಮಂಗಳೂರಿನ ಕುಡ್ಲದ ನವೀನ ಡಿ ಪಡೀಲ್ ಅವರಿಗೆ ವಿದೇಶದಲ್ಲಿ ಸಿಕ್ಕ ಅಭೂತಪೂರ್ವ ಅಭಿಮಾನ, ಪ್ರೀತಿ ಒಮ್ಮೆ ಅವರಿಗೇ ಅಚ್ಚರಿಮೂಡಿಸಿತ್ತು.
ಪಡೀಲ್ ಅವರ ಅಭಿನಯ, ಪಾತ್ರಗಳು ಎಲ್ಲರಿಗೂ ಚಿರಪರಿಚಿತ. ಆದರೆ ವೇದಿಕೆಯಲ್ಲಿ ಅವರು ಗಿಟ್ಟಿಸಿಕೊಳ್ಳುವ ಚಪ್ಪಾಳೆ ಸದ್ದಿನ ಹಿಂದೆ ಅವರು ಪಟ್ಟ ಕಷ್ಟ - ನಷ್ಟಗಳು ಅಡಗಿ ಕುಳಿತಿವೆ. ಮಲೇರಿಯಾ ಥರಗುಟ್ಟುವ ಜ್ವರದ ನಡುವೆಯೇ ವೇದಿಕೆಗೆ ಬಂದು ಅಭಿನಯಿಸಿದ, ಸುಡುತ್ತಿರುವ ಜ್ವರದ ನಡುವೆ ಹಣೆಗೆ ಐಸ್ ಹಾಕಿ ವೇದಿಕೆಗೆ ಬಂದು ನಗಿಸಿದ ಕುಡ್ಲದ ಮಗ ನವೀನ್ ಪಡೀಲ್.
ಆಸ್ಟ್ರೆಲಿಯಾದ ಯುನೈಟೆಡ್ ಕನ್ನಡ ಸಂಘ ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಮೆಲ್ಬರ್ನ್‌ನ ಕಿಂಗ್‌ಸ್ಟನ್ ಆರ್ಟ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು, ಈ ಸಮ್ಮೇಳನದಲ್ಲಿ ಮಂಡ್ಯ ರಮೇಶ್ ಮತ್ತು ನವೀನ್ ಡಿ ಪಡೀಲ್ ಅವರಿಂದ ನಗೆ ಹೊನಲು ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.
ಇನ್ನು ಕಲಾಮಾಧ್ಯಮದವರ ಸಂದರ್ಶನ ಒಂದರಲ್ಲಿ ನಾಟಕದಲ್ಲಿ ಆದ ಅಪಘಾತದಿಂದ ತಮಗೆ ಮಕ್ಕಳೇ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.