ಈ ವಯಸಿನಲ್ಲೂ ಸಕ್ಕತ್ ಸ್ಟೆಪ್ ಹಾಕಿದ ಮಾಲಾಶ್ರೀ, ದರ್ಶನ್ ಯಶ್ ಜೊತೆ ಲೇಡಿ ಸ್ಟಾರ್ಸ್

 | 
ರಪು

ರೆಬೆಲ್ ಸ್ಟಾರ್‌' ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ದಂಪತಿಯ ಪುತ್ರ ಅಭಿಷೇಕ್ ಅವರು ಕಳೆದ ಜೂನ್ 5ರಂದು ಅವಿವಾ ಬಿದ್ದಪ್ಪ ಜೊತೆಗೆ ಸಪ್ತಪದಿ ತುಳಿದಿದ್ದರು. ಇದೀಗ ಜೂನ್ 7ರಂದು ಅದ್ದೂರಿಯಾಗಿ ವಿವಾಹ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಈ ಜೋಡಿಯ ಸಂಗೀತ್ ಸಮಾರಂಭವನ್ನು ಜೂನ್ 10ರಂದು ನಡೆಸಲಾಗಿದೆ. 

ಜೂನ್ 2ರಿಂದಲೇ ಅಭಿಷೇಕ್ ಅವರ ಮದುವೆ ಕಾರ್ಯಕ್ರಮಗಳು ಶುರುವಾಗಿದ್ದವು. ಹಳದಿ ಶಾಸ್ತ್ರ, ಮೆಹಂದಿ, ಚಪ್ಪರ ಶಾಸ್ತ್ರಗಳ ಬಳಿಕ ಜೂನ್ 5ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆದಿತ್ತು. ದೇಶದ ಪ್ರಮುಖ ರಾಜಕೀಯ ನಾಯಕರು, ಸಿನಿಮಾರಂಗದ ಗಣ್ಯರು, ಅಭಿಮಾನಿಗಳು ಈ ಮದುವೆಯಲ್ಲಿ ಹಾಜರಿದ್ದರು. 

ಇದೀಗ ಸಂಗೀತ್ ಕಾರ್ಯಕ್ರಮವು ಸಖತ್ ಕಲರ್‌ಫುಲ್ ಆಗಿ ನಡೆದಿದೆ. ಈ ಪಾರ್ಟಿಯಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ದಂಪತಿ, ಯಶ್‌ ದರ್ಶನ್‌ ಸೇರಿದಂತೆ ಸ್ಯಾಂಡಲ್ವುಡ್‌ ಅನೇಕ ಸಿನಿಮಾ ನಟರು ಈ ಭಾಗಿಯಾಗಿ ಭರ್ಜರಿ ಸ್ಟೆಪ್‌ ಹಾಕಿದ್ದಾರೆ. ಆ ವೇಳೆ 'ಅಂಬಿ ನಿಂಗೆ ವಯಸ್ಸಾಯ್ತೋʼ ಸಿನಿಮಾದ ಹೇ ಜಲೀಲಾ'ಬುಲ್‌ ಬುಲ್' ಚಿತ್ರದ 'ಜ್ಯೂನಿಯರ್ ಸೀನಿಯರ್, ಯಶ್‌ ನಟನೆಯ ಸಿನಿಮಾ ಹಾಡುಗಳಿಗೆ ಅಭಿವಾ ಪಾರ್ಟಿಯಲ್ಲಿ ಚಿತ್ರರಂಗದ ಕಲಾವಿದರು ಭಾಗಿಯಾಗಿದ್ದರು. 

ಅದರ ನಡುವೆ ಹಲವು ವರ್ಷಗಳ ನಂತರ ನಟಿ ಮಲಾಶ್ರೀ ನೃತ್ಯ ಎಲ್ಲರ ಗಮನ ಸೆಳೆದಿದೆ. ಈ ವಯಸ್ಸಿನಲ್ಲಿ ಕೂಡ ಮಾಲಾಶ್ರೀ ಸಖತ್ತಾಗಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

News Hub