ತುಂಬಾ ತುಂಪಾದ ಜಾಗದಲ್ಲಿ‌ ಹನಿಮೂನ್ ಏಂಜಾಯ್ ಮಾಡುತ್ತಿರುವ ಮಾನ್ವಿತಾ ಕಾಮತ್; ಗಂಡ ಫುಲ್ ಫಿದಾ

 | 
Hu

ಟಗರು ಪುಟ್ಟಿ ಎಂದೇ ಕರೆಸಿಕೊಳ್ಳುವ ನಟಿ ಮಾನ್ವಿತಾ ಕಾಮತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಮಾನ್ವಿತಾ ಕಾಮತ್ ಅವರ ವಿವಾಹ  ವಿಜೃಂಭಣೆಯಿಂದ ನಡೆದಿದೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದವರ ಸಮ್ಮುಖದಲ್ಲಿ ಅರುಣ್ ಅವರು ಮಾನ್ವಿತಾಗೆ ತಾಳಿ ಕಟ್ಟಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ವಿವಾಹ ಸಂಪ್ರದಾಯಗಳು ಜರುಗಿವೆ. 

ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆದಿದೆ ಅನ್ನೋದು ವಿಶೇಷ. ಮಾನ್ವಿತಾ ಅವರು ಸೀರೆಯಲ್ಲಿ ಮಿಂಚಿದ್ದಾರೆ.  ಮಾನ್ವಿತಾ ಕಾಮತ್ ಅವರು ವಿವಾಹದ ಬಳಿಕವೂ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರೆ. ಇದಕ್ಕೆ ಅರುಣ್ ಅವರಿಂದ ಯಾವುದೇ ವಿರೋಧ ಇಲ್ಲ ಎಂದು ಹೇಳಿದ್ದಾರೆ.

https://www.instagram.com/reel/C7WHRzItPSo/?igsh=MTc4MmM1YmI2Ng==

ಕಳೆದ ವರ್ಷ ಮಾನ್ವಿತಾರಿಗೆ ಮಾತೃ ವಿಯೋಗವಾಗಿತ್ತು. ಅದಕ್ಕೂ ಮೊದಲು ಮಗಳಿಗಾಗಿ ಗಂಡು ಹುಡುಕಿದ್ದರು. ಇದೀಗ ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಕೊಂಕಣಿ ಶೈಲಿಯಲ್ಲಿ ಈ ಜೋಡಿಯ ಶುಭ ವಿವಾಹ ನಡೆದಿದೆ. ಏಪ್ರಿಲ್‌ 29ರ ಸೋಮವಾರ ಅರಿಶಿನ ಶಾಸ್ತ್ರ ಕಾರ್ಯಕ್ರಮ ನಡೆದಿದೆ.

ಏಪ್ರಿಲ್‌ 30ರಂದು ಸಂಗೀತ ಕಾರ್ಯಕ್ರಮ ನಡೆದಿದೆ. ಅರುಣ್‌ ಕುಮಾರ್‌ ಅವರು ಮ್ಯೂಸಿಕ್‌ ಪ್ರೊಡ್ಯುಸರ್‌.  ಹೀಗಾಗಿ, ಸಂಗೀತ ಕಾರ್ಯಕ್ರಮದ ಮೂಲಕ ಮದುವೆ ಸಂಭ್ರಮಕ್ಕೆ ಮುನ್ನುಡಿ ಹಾಡಲಾಗಿತ್ತು. ಇದೀಗ ಮದುವೆ ವಿಜೃಂಭಣೆಯಿಂದ ನಡೆದು ದಂಪತಿಗಳು ಹನಿಮೂನ್ ಗೆ ಗೋವಾ ಗೆ ಹಾರಿದ್ದಾರೆ. ಸಮುದ್ರದ ಅಲೆಗಳ ನಡುವೆ ಎಂಜಾಯ್ ಮಾಡ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.