ಮಗಳ ಹೆಸರಲ್ಲಿ ವಂಚನೆ, ಸ್ವಂತ ಪತ್ನಿಗೆ ವಾರ್ನಿಂಗ್ ಕೊಟ್ಟ ಮಾಸ್ಟರ್ ಆನಂದ್

 | 
ಿ

ಆಕೆ ಆಡುತ್ತಿದ್ದಿದ್ದೆಲ್ಲ ಬಣ್ಣ ಬಣ್ಣದ ಮಾತುಗಳೇ ಹೌದು. ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಮಾಡ್ತಿದ್ದೀನಿ. ಮೇಘನಾ ರಾಜ್ ಬರ್ತಾರೆ. ರಘು ದೀಕ್ಷಿತ್ ಹಾಡ್ತಾರೆ. ಶ್ವೇತಾ ಶ್ರೀವಾತ್ಸವ್, ನಿರಂಜನ್ ದೇಶಪಾಂಡೆ ಆಂಕರಿಂಗ್ ಮಾಡೋ ರಿಯಾಲಿಟಿ ಶೋ ಮಾಡಿಸ್ತಿದ್ದೇನೆ. ಹೀಗೆ ಅಂಗೈಯಲ್ಲೇ ಆಕಾಶ ತೋರಿಸುತ್ತಿದ್ದ, ಮಾತುಗಳಲ್ಲೇ ನಕ್ಷತ್ರಗಳನ್ನು ತೋರಿಸುತ್ತಿದ್ದ ನಿಶಾ ನರಸಪ್ಪ ಟೋಪಿ ಹಾಕಿರುವುದು ಕಡಿಮೆ ಜನಕ್ಕಲ್ಲ. ಈ ನಿಶಾ ನರಸಪ್ಪನವರು ಮಾಡ್ತಿರೋ ಈ ಮೋಸಕ್ಕೆ ಒಂದು ರೀತಿಯಲ್ಲಿ ದಾಳವಾದವರು ಮಾಸ್ಟರ್ ಆನಂದ್. 

ಯಶಸ್ವಿನಿ ಮತ್ತು ವಂಶಿಕಾ. ಹೌದು ಗೊತ್ತಿದ್ದೂ ಮಾಡಿದರೋ.. ಗೊತ್ತಿಲ್ಲದೇ ಎಡವಿದರೋ.. ಗೊತ್ತಿಲ್ಲ. ಆದರೆ ಅನುಮಾನ ಬಂದ ಕೂಡಲೇ ನಿಶಾ ನರಸಪ್ಪ ಅವರಿಂದ ದೂರವಾದೆವು ಎನ್ನುತ್ತಿರುವ ಮಾಸ್ಟರ್ ಆನಂದ್, ಆಗಲೇ ಒಂದು ವಿಡಿಯೋ ಮಾಡಿ ಬಿಟ್ಟಿದ್ದರೆ, ದೂರು ಕೊಟ್ಟಿದ್ದರೆ ವಂಚನೆಗೊಳಾದವರ ಸಂಖ್ಯೆ ಕಡಿಮೆ ಇರುತ್ತಿತ್ತಾ.. ಹೇಳೋಕೆ ಆಗಲ್ಲ. ನಿಶಾ ನರಸಪ್ಪ ಮಾಮ್ ಆ್ಯಂಡ್ ಕಿಡ್ಸ್ ಫ್ಯಾಷನ್ ವೀಕ್, ಲುಲು ಫ್ಯಾಷನ್ ಕಿಡ್ಸ್ ಮಾಡೆಲ್ ಇವೆಂಟ್ನಡೆಸುತ್ತಿದ್ದರು. ಇದರಲ್ಲಿ ಬೇಬಿ ಕಂಟೆಸ್ಟ್ ಸೀಸನ್-4 ಸೇರಿ ವಿವಿಧ ಇವೆಂಟ್ ಹೆಸರಲ್ಲಿ ನಿಶಾ ವಂಚನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. 

ಬೆಂಗಳೂರಿನ ದೊಡ್ಡ ಮಾಲ್ಗಳಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ, ನಗರದ ಹೊರಹೊಲಯದಲ್ಲಿನ ರೆಸಾರ್ಟ್ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದರು. ಕೇವಲ ಮಕ್ಕಳಷ್ಟೇ ಅಲ್ಲ ಸಾಕಷ್ಟು ಮಂದಿಗೆ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ಇನ್ನು ಆರೋಪಿ ನಿಶಾ ನಟಿ ಶ್ವೇತಾ ಶ್ರೀವಾತ್ಸವ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದರು. 

ಖ್ಯಾತ ಗಾಯಕ ರಘು ದೀಕ್ಷಿತ್ ಅವರು ಕಾರ್ಯಕ್ರಮಕ್ಕೆ ಬರ್ತಾರೆ, ಱಂಪ್ ವಾಕ್ ಮಾಡ್ತಾರೆ. ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷ ರೂಪಾಯಿ ಖರ್ಚಾಗುತ್ತೆ ಎಂದು ಬಣ್ಣದ ಮಾತನಾಡಿ ಎಳೆಯ ಮಕ್ಕಳ ಪೋಷಕರಿಗೆ ವಂಚಿಸಿದ್ದಾರೆ. ಆರೋಪಿ ನಿಶಾ ನರಸಪ್ಪ ನೀಡಿದ್ದ ಚೆಕ್ಗಳು ಕೂಡ ಬೌನ್ಸ್ ಆಗಿವೆ. ವಂಚನೆ ಹಣದಿಂದ ಐಶಾರಾಮಿ ಜೀವನ ನಡೆಸುತ್ತಿದ್ದ ನಿಶಾ ನರಸಪ್ಪ ದುಬಾರಿ ಇನ್ನೋವಾ ಕಾರನ್ನು ಖರೀದಿಸಿದ್ದರು. ನಿಶಾ ಮೇಲೆ ಈ ಹಿಂದೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳಲ್ಲಿಯೂ ದೂರುಗಳು ದಾಖಲಾಗಿವೆ. 

ನಿಶಾ ತಮ್ಮ ಸಹೋದರನಿಂದ ಇಬ್ಬರಿಗೆ ಜೀವ ಬೆದರಿಕೆ ಹಾಕಿದ ಕುರಿತಾಗಿಯೂ ದೂರು ದಾಖಲಾಗಿತ್ತು. ಆದರೆ ಈಗ ವಂಶಿಕಾ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದ ಬಳಿಕವಷ್ಟೆ ನಿಶಾರ ಬಂಧನವಾಗಿದೆ. ( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.