ಈ ಬಾರಿ ಮೋದಿ ಸೋಲು ಖಚಿತ, ಯುವ ಪೀಳಿಗೆ ಯುವಕರು ‌ಖಡಕ್ ಮಾತು

 | 
H

ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​' ಘೋಷಣೆಯೊಂದಿಗೆ ದೇಶದಲ್ಲಿ ನರೇಂದ್ರ ಮೋದಿ ಅಧಿಕಾರ ಸ್ಥಾಪಿಸಿ ಇಂದಿಗೆ ನಾಲ್ಕು ವರ್ಷಗಳು ಕಳೆದಿವೆ. ಒಂದರ್ಥದಲ್ಲಿ ದೇಶದ ಜನ ನೀಡಿದ್ದ 'ಹನಿಮೂನ್​ ಪೀರಿಯಡ್​' ಮುಗಿದಿದ್ದು, ಕೇಂದ್ರ ಸರ್ಕಾರದ ಸಾಧಕ ಬಾಧಕಗಳನ್ನು ತೂಕಕ್ಕೆ ಹಾಕಲು ಇದು ಸರಿಯಾದ ಸಮಯ.

ನರೇಂದ್ರ ಮೋದಿ 2013ರ ಲೋಕಸಭಾ ಚುನಾವಣೆಗೂ ಮುನ್ನ ಭರವಸೆಯ ಮಹಾಪೂರವನ್ನೇ ಹರಿಸಿದ್ದರು. ಭಾರತವನ್ನು 'ವಿಶ್ವಗುರು' ಮಾಡುತ್ತೀನೆಂಬ ಭರವಸೆಯನ್ನು ನೀಡಿದ್ದರು. ಮೋದಿಯವರ ಆವೇಶಭರಿತ ಭಾಷಣದಿಂದ, ಇಡೀ ದೇಶವೇ ಮೂಕವಿಸ್ಮಿತವಾಗಿತ್ತು. ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬ ಪ್ರಣಾಳಿಕೆ ದೇಶದ ಯುವ ಸಮುದಾಯದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. 

ಇವೆಲ್ಲವೂ 2013ರ ಲೋಕಸಭೆಯಲ್ಲಿ ಬಿಜೆಪಿ, ಎನ್​ಡಿಎ ಮಿತ್ರ ಪಕ್ಷಗಳ ಅನಿವಾರ್ಯತೆಯೇ ಇಲ್ಲದಷ್ಟು ಕ್ಷೇತ್ರಗಳಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ನರೇಂದ್ರ ಮೋದಿ, ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅದಾದ ನಂತರ ಕಾಂಗ್ರೆಸ್​ ಮುಕ್ತ ದೇಶ ಮಾಡುವ ಕಾರ್ಯದಲ್ಲಿ ಮಗ್ನರಾದರು. ರಾಜ್ಯಗಳ ನಂತರ ರಾಜ್ಯಗಳಲ್ಲಿ ಅಧಿಕಾರ ಹಿಡಿದರು. ಮೋದಿ ಕಾಲಿಟ್ಟಲ್ಲೆಲ್ಲಾ ವಿಜಯ ಪತಾಕೆ ಹಾರಲಾರಂಭಿಸಿತು. 

ಧರ್ಮ, ಜಾತಿಗಳನ್ನೂ ಮೀರಿ ಮೋದಿ ಬೆಳೆಯ ತೊಡಗಿದ್ದರು. ಗುಜರಾತ್​ ಗೋದ್ರಾಹತ್ಯಾಖಾಂಡದ ನಂತರ ಅಮೆರಿಕಾ ಮೋದಿಯನ್ನು ದೇಶಕ್ಕೆ ಕಾಲಿಡದಂತೆ ನಿರ್ಬಂಧಿಸಿತ್ತು. ಆದರೆ ಯಾವಾಗ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೂ, ಅಮೆರಿಕಾ ಶಸ್ತ್ರ ತ್ಯಾಗ ಮಾಡಿತ್ತು. ಅದಕ್ಕೆ ಮೋದಿಯವರ ಪ್ರಭಾವ ಕಾರಣವೋ ಅಥವಾ ಭಾರತದ ದೈತ್ಯ ಮಾರುಕಟ್ಟೆಯೋ ಎಂಬುದು ಅಪ್ರಸ್ತುತ.

1000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಮೋದಿ ರದ್ದು ಗೊಳಿಸಿದ್ದರು. ರಿಸರ್ವ್ ಬ್ಯಾಂಕ್​ ಗವರ್ನರ್​ಗಾಗಲೀ, ಕೇಂದ್ರ ಕ್ಯಾಬಿನೆಟ್ ಮುಂದಾಗಲೀ ಈ ವಿಚಾರವನ್ನು ಚರ್ಚಿಸಿರಲೇ ಇಲ್ಲ ಎಂಬುದು ಗಮನಾರ್ಹ. ದಿಢೀರ್​ ಎಂದು, ದೇಶದ ಪ್ರಧಾನಿ ಯಾರ ಜತೆಗೂ ಚರ್ಚಿಸದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂಬುದನ್ನು ಇತಿಹಾಸದ ಪುಟಗಳಲ್ಲಿ ಮೊದಲ ಬಾರಿಗೆ ಮೋದಿ ದಾಖಲಿಸಿದ್ದರು. 
ನೋಟು ರದ್ದತಿಯಿಂದ ಸಾವಿರಾರು ಜನ ಕೆಲಸ ಕಳೆದುಕೊಂಡರು. 

ಉದ್ಯೋಗ ಸೃಷ್ಟಿಯ ಬದಲು ಉದ್ಯೋಗ ಕಿತ್ತುಕೊಳ್ಳಲಾಯಿತು. ಜನರ ಖಾತೆಗೆ 15 ಲಕ್ಷ ಬರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್​ಗೆ 80 ಡಾಲರ್​ ಕೂಡ ಮುಟ್ಟದಿದ್ದರೂ, ರೂ. 84 ಒಂದು ಲೀಟರ್​ ಪೆಟ್ರೋಲ್​ಗೆ ನೀಡುವ ಸ್ಥಿತಿ ಎದುರಾಗಿದೆ. ಇಂಧನದ ಬೆಲೆ ಏರಿಕೆಯ ಬಿಸಿ ಎಲ್ಲ ರೀತಿಯ ದಿನಬಳಕೆ ವಸ್ತುಗಳ ಮೇಲೂ ಪರಿಣಾಮ ಬೀರಲಿದೆ ಎಂಬ ಆರೋಪ ಜನಮಾನಸದಲ್ಲಿದೆ. 

ದೇಶದ ಚೌಕಿದಾರ ನಾನು ಎಂದು ಹೇಳಿಕೊಂಡಿದ್ದ ಮೋದಿಯವರ ಕಣ್ಣ ಮೊನೆಯಂಚಿನಲ್ಲೇ ಸಾವಿರಾರು ಕೋಟಿ ಬ್ಯಾಂಕ್​ಗೆ ಮೋಸ ಮಾಡಿ, ಮೇಹುಲ್​ ಚೋಕ್ಸಿ, ನೀರವ್​ ಮೋದಿ ದೇಶ ಬಿಟ್ಟು ಓಡಿ ಹೋದರು ಎಂಬ ಆರೋಪವೂ ಕೇಳಿ ಬಂತು. ಇವೆಲ್ಲಾ ಆರೋಪಗಳಿಗೂ ಮೋದಿ ಸಮಂಜಸ ಉತ್ತರ ನೀಡಲಿಲ್ಲ ಎಂದು ಯುವಕನೊಬ್ಬ ಆರೋಪ ದ ಸುರಿಮಳೆಗೈದಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.