ಸಿಹಿಸುದ್ದಿ ಕೊಟ್ಟ ಮೋಕ್ಷಿತಾ ಪೈ, ಮನೆಯಲ್ಲಿ ಮೆಹೆಂದಿ ಶಾಸ್ತ್ರ
Updated: Feb 10, 2025, 08:46 IST
|

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅತ್ತ ಜಯಮಾಲ ಮಗಳು ಸೌಂದರ್ಯಾ ಮದುವೆ. ಇತ್ತ ರಕ್ಷಿತಾ ಸಹೋದರ ರಾಣ ಮದುವೆ. ಸೆಲೆಬ್ರೆಟಿಗಳಂತೂ ಎರಡು ಮದುವೆಗೂ ಓಡಾಡಿದ್ದೆ ಆಯ್ತು. ಇದರ ನಡುವೆ ಕಿರುತೆರೆ ನಟಿಯ ಮನೆಯಲ್ಲೂ ಮದುವೆ ಸಂಭ್ರಮ ಮನೆ ಮಾಡಿದೆ. ಅದುವೇ ಮಾನ್ಸಿ ಜೋಶಿ ಮನೆಯಲ್ಲಿ.
ಪಾರು ಧಾರಾವಾಹಿ ಮೂಲಕ ಫೇಮಸ್ ಆದವರಲ್ಲಿ ಮೋಕ್ಷಿತಾ ಪೈ ಜೊತೆಗೆ ಮಾನಸಿ ಜೋಶಿ ಕೂಡ ಒಬ್ಬರು. ಹೌದು, 'ಪಾರು' ಧಾರಾವಾಹಿಯಲ್ಲಿ ನಟಿಸಿದ್ದ ಮಾನಸಿ ಜೋಶಿ ಇದೀಗ ಮದುವೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮೆಚ್ಚಿದ ಹುಡುಗನ ಜೊತೆ ಶೀಘ್ರದಲ್ಲೇ ಅವರ ಕಲ್ಯಾಣ ನೆರವೇರಲಿದೆ. ಅದಕ್ಕೂ ಮುನ್ನ ಹಳದಿ ಶಾಸ್ತ್ರ ಮಾಡಿ ಸಂಭ್ರಮಿಸಿದ್ದಾರೆ ಮಾನಸಿ ಜೋಶಿ.
ಈ ಹಳದಿ ಶಾಸ್ತ್ರದ ಕಳೆ ಇನ್ನಷ್ಟು ಹೆಚ್ಚುವುದಕ್ಕೆ ಕಾರಣ, ನಟಿ ಮೋಕ್ಷಿತಾ ಪೈ.ಹೌದು, ನಟಿ ಮೋಕ್ಷಿತಾ ಪೈ ಮತ್ತು ಮಾನಸಿ ಜೋಶಿ ಇಬ್ಬರು ಉತ್ತಮ ಫ್ರೆಂಡ್ಸ್. ಹಾಗಾಗಿ, ತನ್ನ ಗೆಳತಿಯ ಮದುವೆಯಲ್ಲಿ ಮೋಕ್ಷಿತಾ ಸದಾ ಮುಂದಿದ್ದಾರೆ. ಇದೀಗ ಹಳದಿ ಶಾಸ್ತ್ರದಲ್ಲೂ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ ಮೋಕ್ಷಿತಾ. ಅರಿಶಿನ ಶಾಸ್ತ್ರ ಎಂದು ಕ್ಯಾಪ್ಷನ್ ನೀಡಿ, ಒಂದಷ್ಟು ಫೋಟೋಗಳನ್ನು ಮೋಕ್ಷಿತಾ ಹಂಚಿಕೊಂಡಿದ್ದಾರೆ.
ಹೌದು! ಮಾನ್ಸಿ ಜೋಶಿ ಅರಿಶಿಣ ಶಾಸ್ತ್ರದಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಖತ್ ಕೂಲ್ ಆಗಿ ಮಿಂಚುತ್ತಿರುವುದು ಮೋಕ್ಷಿತಾ ಪೈ. ಹಳದಿ ಬಣ್ಣದ ಹಾಫ್ ಶೋಲ್ಡರ್ ಬಟ್ಟೆ ಧರಿಸಿದ್ದಾರೆ.ಬೇಬಿ ಮಾ...ನನ್ನ ಅರಿಶಿಣ ಶಾಸ್ತ್ರಕ್ಕೆ ನೀನು ಆಗಮಿಸಿದ್ದಕ್ಕೆ ತುಂಬಾನೇ ಥ್ಯಾಂಕ್ಸ್ ಎಂದು ಮೋಕ್ಷಿತಾ ಅಪ್ಲೋಡ್ ಮಾಡಿರುವ ಫೋಟೋಗೆ ಮಾನ್ಸಿ ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.