ಮುಸ್ಲಿಂ ಯುವಕನ ಮೇಲೆ ತುಳುನಾಡಿನ ಕಾಣಿ೯ಕ ದೈವದ ಆವೇಶ, ಬೆಚ್ಚಿಬಿದ್ದ ಹಿಂದೂಗಳು

 | 
Bg

ಎಲ್ಲಿಯ ತುಳುನಾಡು ಎಲ್ಲಿಯ ಒರಿಸ್ಸಾ. ಬಿಡಿಗಾಸಿಗಾಗಿ ಕಾರ್ಮಿಕನಾಗಿ ದುಡಿಯಲು ಬಂದ ಆ ಮುಸ್ಲಿಂ ಯುವಕನಿಗೆ ಅದೆಲ್ಲಿಯ ದೈವದ ನಂಟು ಅಂತ ನೀವೆಲ್ಲ ಕೇಳಬಹುದು‌. ತುಳುನಾಡಿನ ದೈವಗಳ ನಂಬಿಕೆ, ಪರಂಪರೆಯ ಬಗ್ಗೆ ಕಿಂಚಿತ್ತೂ ಜ್ಞಾನವಿರದ ಹೊರ ರಾಜ್ಯದ ಒಬ್ಬ ಮುಸ್ಲಿಂ ಯುವಕನ ಮೇಲೆ ದೈವ ಆವೇಶ ಬರುತ್ತೆ ಅನ್ನೋದೇ ಎಲ್ಲರಿಗೂ ಅಚ್ಚರತುಳುನಾಡು ದೈವಿಕ ಅಂಶಗಳನ್ನೊಳಗೊಂಡ ಪುಣ್ಯ ಭೂಮಿ.

ಹಲವು ವರ್ಷಗಳ ದೈವಾರಾಧನೆಯ ಪರಂಪರೆಯ ಜೊತೆಗೆ ಬೆಸೆದುಕೊಂಡಿರೋ ಪುಣ್ಯ ನೆಲ.‌ ಕಾಂತಾರ ಅನ್ನೋ ಸಿನಿಮಾ ಈ ಮಣ್ಣಿನ ದೈವಗಳ ಕಾರ್ಣಿಕದ ಮೇಲೆ ಬೆಳಕು ಚೆಲ್ಲುವ ಮೂಲಕ ಕರಾವಳಿಯ ಪರಂಪರೆಯನ್ನ ಇಡೀ ವಿಶ್ವಕ್ಕೆ ಹಬ್ಬಿಸಿತು. ಇದೀಗ ತುಳುನಾಡಿನ ದೈವದ ಮತ್ತೊಂದು ಅಚ್ಚರಿ ಹುಟ್ಟಿಸೋ ವಿದ್ಯಮಾನವೊಂದು ಇಡೀ ಕರಾವಳಿಗರನ್ನು ಬೆಚ್ಚಿ ಬೀಳಿಸಿದೆ. 

ಹಲವು ವರ್ಷಗಳಿಂದ ದೈವವೊಂದರ ಸೇವೆ ಸ್ಥಗಿತಗೊಂಡ ಕಾರಣಕ್ಕೆ ಸ್ವತಃ ದೈವವೇ ಮುಸ್ಲಿಂ ಯುವಕನೊಬ್ಬನ ಮೈಮೇಲೆ ಆವಾಹನೆಗೊಂಡು ಎಚ್ಚರಿಕೆ ನೀಡಿದೆ‌‌‌. ಸಾವಿರಾರು ಪವಾಡಗಳು, ಅಚ್ಚರಿ ಹುಟ್ಟಿಸೋ ಲಕ್ಷಾಂತರ ಸನ್ನಿವೇಶಗಳಿಗೆ ತುಳುನಾಡಿನ ದೈವಾರಧನೆ ಸಾಕ್ಷಿಯಾಗುತ್ತಲೇ ಇದೆ. ಇದೀಗ ಅಂಥದ್ದೇ ಅಚ್ಚರಿ ಹುಟ್ಟಿಸೋ ಮತ್ತು ಕೇಳಿದರೆ ಮೈ ರೋಮಾಂಚನಗೊಳಿಸೋ ತುಳುನಾಡಿನ ದೈವೀ ಶಕ್ತಿಯ ಪವಾಡವೊಂದಕ್ಕೆ ಕಡಲ ತಡಿ ಮಂಗಳೂರು ಮತ್ತೆ ಸಾಕ್ಷಿಯಾಗಿದೆ. 

ನೂರಾರು ದೈವಗಳ ನೆಲೆಯಾದ ಕರಾವಳಿಯ ಪುಣ್ಯ ಮಣ್ಣಿನಲ್ಲಿ ನಡೆದ ಈ ಘಟನೆ ಸದ್ಯ ಇಡೀ ಕರಾವಳಿ ಭಾಗದಲ್ಲಿ ಮತ್ತೆ ಅಚ್ಚರಿಯ ಜೊತೆಗೆ ದೈವದ ಕಾರ್ಣಿಕದ ಕಥೆ ಹೇಳುತ್ತಿದೆ. ಕೋಮು ಸೂಕ್ಷ್ಮ ಪ್ರದೇಶ ಅಂತಾನೆ ಕರೆಸಿಕೊಳ್ಳುವ ಮಂಗಳೂರಿನಲ್ಲಿ ತುಳುನಾಡಿನ ಕಾರ್ಣಿಕ ದೈವ ಶಕ್ತಿಯೊಂದು ಮುಸ್ಲಿಂ ಯುವಕನೊಬ್ಬನ ಮೂಲಕ ಆವಾಹನೆಯಾಗೋ ಮೂಲಕ ಎಲ್ಲರನ್ನೂ ಚಕಿತಗೊಳಿಸಿದೆ. 

ಹೌದು ಇದು ನಿಮಗೆ ಅಚ್ಚರಿಯಾದ್ರೂ ಸತ್ಯ. ‌ಮಂಗಳೂರಿನ ಪೆರ್ಮುದೆ ಎಂಬಲ್ಲಿ ಒರಿಸ್ಸಾ ಮೂಲದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕಾರ್ಮಿಕನೊಬ್ಬನಿಗೆ ದೈವ ಆವೇಶವಾಗೋ ಮೂಲಕ ಅಚ್ಚರಿ ಹುಟ್ಟಿಸಿದೆ. ಒರಿಸ್ಸಾ ಮೂಲದ ಕಾರ್ಮಿಕ ಮುಸ್ಲಿಂ ಯುವಕ ಜೋರ್ ಆಲಿ ಮೇಲೆ ದೈವದ ಆವೇಶ ಕಾಣಿಸಿಕೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪೆರ್ಮುದೆ ಸೋಮನಾಥೇಶ್ವರ ದೇಗುಲದ ಬಳಿಯ ಪಿಲಿಚಾಮುಂಡಿ ದೈವಸ್ಥಾನದ ತಡೆಗೋಡೆ ಕಾಮಗಾರಿಯನ್ನ ಜೋರ್ ಆಲಿ ಮತ್ತು ಉಳಿದ ಒರಿಸ್ಸಾ ಮೂಲದ ಕಾರ್ಮಿಕರ ತಂಡ ಮಾಡ್ತಿತ್ತು. 

ಈ ವೇಳೆ ಇದ್ದಕ್ಕಿದ್ದಂತೆ ಜೋರ್ ಆಲಿಗೆ ಆವೇಶ ಬಂದಿದ್ದು, ಏಕಾಏಕಿ ದೈವ ದರ್ಶನದ ಮಾದರಿಯಲ್ಲಿ ಆವಾಹನೆ ಕಂಡು ಬಂದಿದೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಸಮಾಧಾನಿಸೋಕೆ ಮುಂದಾದ್ರೂ ನಿಯಂತ್ರಣಕ್ಕೆ ಬರಲೇ ಇಲ್ಲ. ಕೊನೆಗೆ ಹತ್ತಾರು ಜನ ಹಿಡಿದು ನಿಯಂತ್ರಿಸಲು ಮುಂದಾದ್ರೂ ಸಾಧ್ಯವಾಗಲೇ ಇಲ್ಲ. ‌ಕೊನೆಗೆ ಅದಾಗಿಯೇ ತಣ್ಣಗಾಗಿದ್ದು, ಕೆಲ ಹೊತ್ತಿನಲ್ಲಿ ಮತ್ತೆ ಆ ಯುವಕನ ಮೇಲೆ ನಿರಂತರ ಆವೇಶ ಬಂದಿದೆ. 

‌ಕೊನೆಗೆ ದೇವಸ್ಥಾನದ ಅರ್ಚಕರು ತೀರ್ಥ ಚುಮುಕಿಸಿ ಪ್ರಸಾದ ಹಚ್ಚಿದ ಮೇಲೆ ಕೊಂಚ ನಿಯಂತ್ರಣಕ್ಕೆ ಬಂದರೂ ಮತ್ತೆ ಮತ್ತೆ ಯುವಕನಿಗೆ ಆವೇಶ ಬರುತ್ತಲೇ ಇತ್ತು. ಕೊನೆಗೆ ಆ ಊರಿನಿಂದಲೇ ಆತನನ್ನು ಕರೆದುಕೊಂಡು ಹೋದ ಬಳಿಕ ಆವೇಶ ನಿಯಂತ್ರಣಕ್ಕೆ ಬಂದಿದೆ. ಆದರೆ ಮುಸ್ಲಿಂ ಯುವಕನ ಮೇಲೆ ದೈವದ ಆವೇಶ ಬಂದಿರೋದು ಇಡೀ ಪೆರ್ಮುದೆ ಗ್ರಾಮಸ್ಥರನ್ನ ಅಚ್ಚರಿಕೆ ತಳ್ಳಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ಆತಂಕಕ್ಕೆ ಈಡಾಗಿದೆ. 

ಕೊನೆಗೆ ಗ್ರಾಮದ ಹಿರಿಯರು, ದೈವಾರಧಕರೆಲ್ಲರೂ ಸೇರಿ ಈ ಘಟನೆಗೆ ಕಾರಣ ತಿಳಿಯೋ ಉದ್ದೇಶದಿಂದ ಪ್ರಶ್ನಾಚಿಂತನೆಗೆ ಮುಂದಾಗಿದ್ದಾರೆ. ಅದರಂತೆ ಆ ಮುಸ್ಲಿಂ ಯುವಕನ ಸಮ್ಮುಖದಲ್ಲೇ ಪ್ರಶ್ನಾಚಿಂತನೆ ನಡೆಸೋ ನಿರ್ಧಾರ ಮಾಡಿದ್ದಾರೆ. ಇತ್ತೀಚೆಗೆ ಸೋಮನಾಥೇಶ್ವರ ದೇವಸ್ಥಾನದ ಅಂಗಳದಲ್ಲಿ ಪ್ರಶ್ನಾಚಿಂತನೆಗೆ ಮುಂದಾಗಿದ್ದು, ಬೇರೆ ಜಾಗದಿಂದ ಜೋರ್ ಆಲಿಯನ್ನ ಮತ್ತೆ ಆ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ. 

ಅಚ್ಚರಿ ಅಂದ್ರೆ ಸೋಮನಾಥ ದೇವಸ್ಥಾನದ ದ್ವಾರ ದಾಟುತ್ತಿದ್ದಂತೆ ಆ ಯುವಕನಿಗೆ ಮತ್ತೆ ಆವೇಶ ಬಂದಿದ್ದು, ಅದ್ಯಾಗೋ ಹತ್ತಾರು ಯುವಕರು ಕರೆದುಕೊಂಡು ಬಂದು ದೇವಸ್ಥಾನದ ಅಂಗಳದಲ್ಲಿ ಕೂರಿಸಿದ್ದಾರೆ. ಈ ವೇಳೆ ಆವೇಶದ ಮಧ್ಯೆಯೂ ಆ ಯುವಕ ಹಿಂದಿ ಭಾಷೆಯಲ್ಲಿ 'ನನ್ನ ದಾರಿಗೆ ತಡೆ ಮಾಡಿದ್ದೀರಿ' ಎನ್ನುವ ರೀತಿಯಲ್ಲಿ ಒಗಟಿನ ಹಾಗೆ ಮಾತನಾಡಿದ್ದು, ಮತ್ತೆ ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. 

ಆತನನ್ನ ಪಕ್ಕಕ್ಕೆ ಕೂರಿಸಿ ಪ್ರಶ್ನಾ ಚಿಂತನೆ ಹಾಕಿದಾಗ ಅಲ್ಲಿಂದ ಬಂದ ಉತ್ತರ ಇಡೀ ಪೆರ್ಮುದೆ ಗ್ರಾಮಸ್ಥರನ್ನ ಅಚ್ಚರಿಗೆ ತಳ್ಳಿತ್ತು. ಸಾವಿರ ಸಾವಿರ ವರ್ಷಗಳಿಂದ ನಂಬಿಕೊಂಡು ಬಂದ ದೈವವೊಂದರ ಕಾರ್ಣಿಕ ಸಾರುವ ಜಾಗದಲ್ಲಿ ಹಲವಾರು ವರ್ಷಗಳಿಂದ ಸಲ್ಲಬೇಕಾದ ದೈವಾರಧನೆ ಸಲ್ಲದೇ ಇದ್ದ ಕಾರಣಕ್ಕೆ ಆ ದೈವ ಮುನಿಸಿಕೊಂಡಿದೆಯಂತೆ‌. ಹಲವು ವರ್ಷಗಳಿಂದ ಆ ಜಾಗದಲ್ಲಿ ನೇಮೋತ್ಸವ ನಡೆಯದ ಕಾರಣ ದೈವ ಇಡೀ ಗ್ರಾಮಕ್ಕೆ ಎಚ್ಚರಿಕೆ ಕೊಟ್ಟಿದೆ.

ಹಲವು ವರ್ಷಗಳಿಂದ ಹಲವು ವಿಧಗಳಲ್ಲಿ ಎಚ್ಚರಿಕೆ ರವಾನಿಸಿದ್ದ ದೈವ ಈ ಬಾರಿ ಒರಿಸ್ಸಾದ ಮುಸ್ಲಿಂ ಯುವಕನ ಮೈಮೇಲೆ ಆಹಾವನೆಯಾಗೋ ಮೂಲಕ ಸಂದೇಶ ರವಾನಿಸಿದೆ. ಎಲ್ಲಿಯ ತುಳುನಾಡು ಎಲ್ಲಿಯ ಒರಿಸ್ಸಾ. ಬಿಡಿಗಾಸಿಗಾಗಿ ಕಾರ್ಮಿಕನಾಗಿ ದುಡಿಯಲು ಬಂದ ಆ ಮುಸ್ಲಿಂ ಯುವಕನಿಗೆ ಅದೆಲ್ಲಿಯ ದೈವದ ನಂಟು ಅಂತ ನೀವೆಲ್ಲ ಕೇಳಬಹುದು‌. 

ತುಳುನಾಡಿನ ದೈವಗಳ ನಂಬಿಕೆ, ಪರಂಪರೆಯ ಬಗ್ಗೆ ಕಿಂಚಿತ್ತೂ ಜ್ಞಾನವಿರದ ಹೊರ ರಾಜ್ಯದ ಒಬ್ಬ ಮುಸ್ಲಿಂ ಯುವಕನ ಮೇಲೆ ದೈವ ಆವೇಶ ಬರುತ್ತೆ ಅನ್ನೋದೇ ಎಲ್ಲರಿಗೂ ಅಚ್ಚರಿ. ಆದರೆ ಪ್ರಶ್ನಾ ಚಿಂತನೆಯಲ್ಲಿ ಸಿಕ್ಕ ಉತ್ತರ ನೋಡಿ ಇಡೀ ಗ್ರಾಮಕ್ಕೆ ಗ್ರಾಮವೇ ಅಕ್ಷರಶಃ ಬೆಚ್ಚಿ ಬಿದ್ದಿದೆ‌. 

ಹಲವು ವರ್ಷಗಳಿಂದ ನಂಬಿಕೊಂಡು ಬಂದ ಆ ತುಳುನಾಡ ಮಹಾನ್ ದೈವೀ ಶಕ್ತಿಯ ಪವಾಡ ಕಂಡು ಅಚ್ಚರಿಗೊಳಗಾಗಿದ್ದಾರೆ. ಅಷ್ಟಕ್ಕೂ ಈ ಎಲ್ಲಾ ಪವಾಡಗಳನ್ನು ಸೃಷ್ಟಿಸಿದ ಮತ್ತು ಇಡೀ ಗ್ರಾಮದ ಜನರನ್ನು ಅಚ್ಚರಿಗೆ ತಳ್ಳಿದ ತುಳುನಾಡಿನ ಆ ದೈವವೇ ಪಿಲ್ಚಂಡಿ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.