ವಿನಯ್ ಮಾಡಿದ ಕೆಲಸಕ್ಕೆ ಎದ್ದು ಬಿದ್ದು ಕಣ್ಣೀರಿಟ್ಟ ನಮ್ರತಾ ಗೌಡ, ಯಾಕೆ ಏನಾಯಿತು ಗೊತ್ತಾ

 | 
Bvv

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಅದಕ್ಕೆ ಕಾರಣ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ನಡುವಿನ ಜಗಳ. ವಿನಯ್ ಗೌಡ ಅವರ ಟೋನ್‌ನಿಂದ ಥ್ರೆಟ್‌ ಫೀಲ್ ಆಗುತ್ತಿದೆ ಅಂತ ಸಂಗೀತಾ ಶೃಂಗೇರಿ ಕೆಣಕಿದರು. 

ಇದರಿಂದ ಬೇಸೆತ್ತ ವಿನಯ್ ಗೌಡ ರೊಚ್ಚಿಗೆದ್ದರು. 
ಇಬ್ಬರ ಮಧ್ಯೆ ಏನಾಗಿದೆ ಅಂತ ತಿಳಿದುಕೊಳ್ಳಲು, ಸಮಸ್ಯೆ ಬಗೆಹರಿಸಲು ಭಾಗ್ಯಶ್ರೀ ಕನ್ಸರ್ನ್ ತೋರಿಸಿದರು. ಆದರೆ, ವಿನಯ್ ಅವರಿಂದ ಸಂಗೀತಾ ಡಿಪ್ರೆಶನ್‌ಗೆ ಹೋಗ್ತಿದ್ದಾರೆ ಎಂಬ ಮಾತು ಬಂದಿದ್ದು ವಿನಯ್‌ಗೆ ಸಹಿಸಲು ಆಗಲಿಲ್ಲ. ಹೀಗಾಗಿ, ವಿನಯ್ ಗೌಡ ಸಿಕ್ಕಾಪಟ್ಟೆ ಕೂಗಾಡಿದ್ದರು. 

ಕಣ್ಣೀರು ಸುರಿಸಿದ್ದರು. ಇಷ್ಟೆಲ್ಲಾ ಆದ್ಮೇಲೆ ವಿನಯ್ ಗೌಡ ಜೊತೆಗೆ ಸಂಗೀತಾ ಶೃಂಗೇರಿ ಮಾತುಕತೆ ನಡೆಸಿದರು. ಇಬ್ಬರೂ ಪರಸ್ಪರ ಕ್ಷಮೆಯಾಚಿಸಿದರು. ಕ್ಷಣಾರ್ಥದಲ್ಲಿ ವಿನಯ್ ಮತ್ತು ಸಂಗೀತಾ ಮತ್ತೆ ಫ್ರೆಂಡ್ಸ್ ಆದರು.
ತನಿಷಾ ಕುಪ್ಪಂಡ ಹಾಗೂ ನಮ್ರತಾ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಷ್ಟಕ್ಕೂ, ತನಿಷಾ ಕುಪ್ಪಂಡ ಅವರನ್ನ ನಮ್ರತಾ ಗೌಡ ನಾಮಿನೇಟ್ ಮಾಡಿದ್ದರು. 

ನಾಮಿನೇಷನ್ ವೇಳೆ ತನಿಷಾ ಕುಪ್ಪಂಡ ತುಂಬಾ ಲೌಡ್‌, ಡಾಮಿನೇಟ್ ಮಾಡ್ತಾರೆ, ಎಲ್ಲರ ಓಪೀನಿಯನ್ ತಗೊಳ್ಳಲ್ಲ ಅಂತೆಲ್ಲಾ ನಮ್ರತಾ ಗೌಡ ಕಾರಣ ಕೊಟ್ಟಿದ್ದರು. ಈ ಬಗ್ಗೆ ತನಿಷಾ ಕುಪ್ಪಂಡ ಮಾತಿಗಿಳಿದರು. ಈ ವೇಳೆ ಇಬ್ಬರ ಮಧ್ಯೆ ವಾಕ್ಸಮರ ನಡೆಯಿತು. ಇದರಿಂದ ಬೇಸರವಾಗಿ ನಮ್ರತಾ ಹಾಗೂ ತನಿಶಾ ಇಬ್ಬರೂ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಸಂಗೀತಾ ಕೂಡ ಈಗಾಗಲೇ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ‘’ನಂಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ನನಗೆ ಆಗಲ್ಲ. 

ನಾನು ಬರಲೇ ಬಾರದಿತ್ತು. ನಾನು ವಾಪಸ್ ಮನೆಗೆ ಹೋಗಬೇಕು. ನಾವು ಗೆಲ್ಲೋಕೆ ಆಗಲ್ಲ. ನಾವು ಯಾವ ಟಾಸ್ಕ್‌ನಲ್ಲೂ ಗೆಲ್ಲೋಕೆ ಆಗಲ್ಲ. ಸೋತರೂ ಪರ್ವಾಗಿಲ್ಲ. ಈ ತರಹ ಶಿಕ್ಷೆ ತಗೊಂಡು, ಹೀಗೆಲ್ಲ ಬೈಸಿಕೊಳ್ಳಬೇಕಾ? ಇನ್ಮುಂದೆ ಆಡೋಕೆ ನನಗೆ ಇಷ್ಟ ಇಲ್ಲ ಎಂದು ಅಂತ ಕಾರ್ತಿಕ್ ಮಹೇಶ್ ಜತೆಗೆ ಮಾತನಾಡುತ್ತಾ ಸಂಗೀತಾ ಶೃಂಗೇರಿ ಕಣ್ಣೀರು ಸುರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.