ಕರುನಾಡಿಗೆ ಸಿಹಿಹಂಚಿದ ನೇಹಾ ಗೌಡ; ಅವಳಿ ಜವಳಿ ಎಂದ ಡಾಕ್ಟರ್

 | 
Jui

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ನಟಿ ಗೊಂಬೆ ಹಾಗೂ ನಟ ಚಂದನ್‌ ಗೌಡ ದಂಪತಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ದಂಪತಿ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಆಗಿರುವ ನೇಹಾ ಗೌಡ ಈ ಖುಷಿಯ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು ನೇಹಾ ಗೌಡ ಕಿರುತೆರೆಯ ಗೊಂಬೆ ಎಂದೇ ಜನಪ್ರಿಯತೆ ಪಡೆದಿದ್ದರು. ನೇಹಾ ಪತಿ ಚಂದನ್ ಗೌಡ ಸದ್ಯ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ರಾಜ-ರಾಣಿ ಸೀಜನ್‌-೧ ಶೋನಲ್ಲಿ ಭಾಗವಹಿಸಿದ್ದ ಈ ದಂಪತಿ ವಿನ್ನರ್‌ ಆಗಿ ಹೊರಹೊಮ್ಮಿದ್ದರು.

ನಟಿ ನೇಹಾ ಗೌಡ ಫೆಬ್ರವರಿ 18, 2018ರಂದು ತಮ್ಮ ದೀರ್ಘಕಾಲದ ಗೆಳೆಯ ಚಂದನ್ ಗೌಡ ಅವರನ್ನು ವಿವಾಹವಾದರು. ಇವರಿಬ್ಬರದು ಚಿಕ್ಕವಯಸ್ಸಿನ ಪ್ರೇಮವಾಗಿದ್ದು, ಸುದೀರ್ಘ ಪ್ರೀತಿ ಬಳಿಕ ನೇಹಾ - ಚಂದನ್ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಗೌಡ ಹಾಗೂ ಚಂದನ್ ಸಿಹಿ ಸುದ್ದಿ ನೀಡಿದ್ದಾರೆ.

ದಿ ನ್ಯೂ ಬಾರ್ನ್‌ ಟೈಮ್ಸ್..‌ ಎಕ್ಸ್ಟ್ರಾ ಎಕ್ಸ್ಟ್ರಾ ಎಕ್ಸ್ಟ್ರಾ ನಮ್ಮ ಕುಟುಂಬ ಹಿರಿದಾಗುತ್ತಿದೆ ಎಂದು ಸ್ಕ್ಯಾನ್‌ ರಿಪೋರ್ಟ್‌ ಫೋಟೋ ಶೇರ್‌ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಹೊಸ ಜೀವ ಸ್ವಾಗತಿಸಲು ನಾವು ತಯಾರಿ ನಡೆಸುತ್ತಿರುವಾಗ, ನಮ್ಮ ಹೃದಯವು ಸಂತೋಷ ಮತ್ತು ನಿರೀಕ್ಷೆಯಿಂದ ತುಂಬಿ ತುಳುಕುತ್ತಿದೆ ಎಂದು ಅವರು ಬರೆದು ಸಂತೋಷ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.