ಮತ್ತೊಂದು ಗುಡ್ ನ್ಯೂಸ್ ನೀಡಲಿದ್ದಾರಾ ನಿಖಿಲ್ ರೇವತಿ, ವಿದೇಶದಲ್ಲಿ ದಂಪತಿಗಳ ಆಟ ತುಂಟಾಟ

 | 
Xn

ಜಾಗ್ವಾರ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ಹಾಗೂ ಮಾಜಿ ಪ್ರಧಾನಮಂತ್ರಿಯಾಗಿದ್ದ ದೇವೇಗೌಡ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕನ್ನಡ ಸಿನಿಮಾ ರಂಗದ ಉದ್ಯೋನ್ಮುಖ ನಟನಾಗಿ, ಯುವ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ತಮ್ಮ ಉತ್ತಮ ಕೆಲಸಗಳ ಮೂಲಕ ಜನಸೇವೆಯನ್ನು ಮಾಡುತ್ತಾ ಅತಿ ಚಿಕ್ಕ ವಯಸ್ಸಿಗೆ ತಮ್ಮ ತಂದೆ ಹಾಗೂ ತಾತನ ಹಾದಿಯನ್ನು ಹಿಡಿದಿರುವ ನಿಖಿಲ್ ಕುಮಾರಸ್ವಾಮಿಯವರಿಗೆ ಈ ಬಾರಿಯ ಚುನಾವಣೆಯಲ್ಲಿ ಸೋಲು ಉಂಟಾದ ಬೆನ್ನಲ್ಲೇ ರಾಜಕೀಯ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದು ಹೆಂಡತಿ ಹಾಗೂ ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ್ದಾರೆ.

ಏಪ್ರಿಲ್ 17 2022ರಂದು ತಮ್ಮ ಬಹುಕಾಲದ ಗೆಳತಿ ರೇವತಿ ಅವರನ್ನು ಹಲವಾರು ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ದಂಪತಿಗೆ ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಗಂಡು ಮಗುವೊಂದು ಜನಿಸಿತ್ತು.ಇದರ ಸಂಭ್ರಮವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ನಿಖಿಲ್ ಸಿನಿಮಾ ರಂಗದಿಂದ ಸ್ವಲ್ಪ ಬ್ರೇಕ್ ಪಡೆದು ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಹೌದು ಸ್ನೇಹಿತರೆ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿಯವರ ಹುಟ್ಟು ಹಬ್ಬದ ಸಂಭ್ರಮದ ಬೆನ್ನೆಲ್ಲೇ ಹೆಂಡತಿ ಮಕ್ಕಳೊಂದಿಗೆ ವಿದೇಶಕ್ಕೆ ನಿಖಿಲ್ ಹಾರಿದ್ದು, ಫಾರಿನ್ ರಸ್ತೆಯಲ್ಲಿ ಹೆಂಡತಿಯ ಕೈ ಹಿಡಿದು ಓಡಾಡುತ್ತಿರುವ ಅಪರೂಪದ ಚಿತ್ರಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೀರೋ ಲುಕ್ನಲ್ಲಿ ಜಾಕೆಟ್ ಧರಿಸಿ ನಿಖಿಲ್ ಕುಮಾರಸ್ವಾಮಿ ಮಿಂಚಿದರೆ ರೇವತಿಯವರು ಕಪ್ಪು ಮತ್ತು ಹಸಿರು ಬಣ್ಣದ ಬಟ್ಟೆಯಲ್ಲಿ ಬಹಳ ಎಲಿಗಂಟಾಗಿ ಕಾಣಿಸಿಕೊಂಡಿದ್ದಾರೆ. 

ಇವರಿಬ್ಬರ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯನ್ನು ತೋರುತ್ತಿದ್ದಾರೆ. ಸದ್ಯ ನಿಖಿಲ್ ಕುಮಾರಸ್ವಾಮಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದ ಮೊದಲನೇ ಹಂತದ ಶೂಟಿಂಗ್ ಅದಾಗಲೇ ಪ್ರಾರಂಭಗೊಂಡಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.