ನೆಚ್ಚಿನ ನಟನ ಗೆಳತಿ ಇನ್ನ್ ಇಲ್ಲ, ಬಾರಿ ದುಃಖ ಪಟ್ಟ ಪ್ರೇಕ್ಷಕರು

 | 
Bx

ಇತ್ತೀಚಿಗೆ ಚಿತ್ರರಂಗದ ಹಲವಾರು ಗಣ್ಯರು ಸಾವನ್ನೊಪ್ಪಿದ್ದಾರೆ ಇದೀಗ ಅವರ ಸಾಲಿಗೆ ರಂಗಭೂಮಿ ಕಲಾವಿದೆ, ನಟಿ ಮಮತಾ ಗೂಡೂರ ಅವರು ಸಹ ಸೇರಿದ್ದಾರೆ. ಹೌದು ಆಗಸ್ಟ್ 3ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದಾರೆ. ನಟಿ ಮಮತಾ ಗೂಡೂರ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಹಾಗಾಗಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. 

ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ನಿನ್ನೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಮತಾ ಇಹಲೋಕ ತ್ಯಜಿಸಿದರು. ಅವರ ನಿಸ್ವಾರ್ಥ ಕಲಾಸೇವೆಗೆ ನಟನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಬಾಗಲಕೋಟೆಯ ಇಳಕಲ್ ತಾಲ್ಲೂಕಿನ ಗೂಡೂರ ಗ್ರಾಮದವರಾಗಿದ್ದಾರೆ.
ಮಮತಾ ಅವರು 2 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. 20 ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದರು. 

ಕನ್ನಡ ಚಿತ್ರರಂಗದ ನಟರಾದ ಅಂಬರೀಷ್ , ವಜ್ರಮುನಿ ಸೇರಿ ಅನೇಕರ ಜೊತೆ ಮಮತಾ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದರು. ರಂಗಭೂಮಿ ನಾಟಕಗಳಲ್ಲಿ ಮಮತಾ ಆಕ್ಟೀವ್ ಆಗಿದ್ದರು. ಬಿ.ಎಸ್.ಆರ್. ನಾಟಕ ಕಂಪನಿಯ ‘ಸೆರೆ ಅಂಗಡಿ ಸಂಗವ್ವ’ ನಾಟಕದಲ್ಲಿ ಮಮತಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಂಗವ್ವನ ಪಾತ್ರದಲ್ಲಿ ಖಡಕ್ ಡೈಲಾಗ್ ಹೊಡೆದು ಸೆರೆ ಅಂಗಡಿ ಸಂಗವ್ವ ಎಂದೇ ಅವರು ಗುರುತಿಸಿಕೊಂಡಿದ್ದರು. 

ಅವರ ಕಲಾಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇಂದು ಗೂಡೂರು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಮುಸ್ಲಿಂ ಧರ್ಮದ ಪ್ರಕಾರ ವಿಧಿ ವಿಧಾನಗಳು ನಡೆಯಲಿವೆ. 75ನೇ ವಯಸ್ಸಿಗೆ ಇಹಲೋಕ ತ್ಯಜಿಸಿರೋ ಕಲಾವಿದೆ ಮಮತಾಗೆ ಆಪ್ತರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.